ಲಕ್ನೋ: ಹಿಂದೂ ಯುವಕನ ಜೊತೆ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡು 19ರ ಮಗಳಿಗೆ ವಿಷವಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಕೊಲೆ ಪ್ರಕರಣದಲ್ಲಿ ಯುವತಿಯ ತಾಯಿ ಮತ್ತು ಆಕೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಅಫ್ಸಾನಾ (48) ಮತ್ತು ಆಕೆಯ ಮಗ ಅಫ್ಸರ್ (26) ಬಂಧಿತ ಆರೋಪಿಗಳು. ಅವರನ್ನು ಸೋಮವಾರ ಸಂಜೆ ಟಿಕ್ರಿ ತಿರುವು ಗ್ರಾಮದ ಬಳಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಇದನ್ನೂ ಓದಿ: ಬಿಡದಿ ಪೊಲೀಸರ ಕಾರ್ಯಾಚರಣೆ – ಇಬ್ಬರು ಗ್ಯಾಸ್ ಕಳ್ಳರ ಬಂಧನ, 8 ಸಿಲಿಂಡರ್ ವಶಕ್ಕೆ
ಫರ್ಜಾನಾ ಹತ್ಯೆಯಾದ ಯುವತಿ. ಮಾ.2 ರಂದು ಹೊಲವೊಂದರಲ್ಲಿ ಈಕೆಯ ಶವ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಯುವತಿಯ ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಗೊತ್ತಾಗಿದೆ.
ಮಾ.2 ರ ಮಧ್ಯರಾತ್ರಿ ತಾಯಿ ಮತ್ತು ಸಹೋದರ ಸೇರಿಕೊಂಡು ಫರ್ಜಾನಾಳನ್ನು ಹೊಲಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಬೇರೊಂದು ಹೊಲಕ್ಕೆ ಸ್ಥಳಾಂತರಿಸಿದ್ದಾರೆ. ಬಳಿಕ ತಾಯಿ ಫತೇಪುರಕ್ಕೆ ತೆರಳಿದ್ದಾಳೆ. ಪುತ್ರ ಮನೆಗೆ ವಾಪಸ್ ಆಗಿದ್ದಾನೆ. ಇದನ್ನೂ ಓದಿ: ಗಾಂಜಾ ಹೊಡೆದು ಗೋಕರ್ಣ ಬೀಚ್ಲ್ಲಿ ತೂರಾಡುತ್ತಿದ್ದ ಇಬ್ಬರು ಟೆಕ್ಕಿಗಳು ಅರೆಸ್ಟ್
ಫತೇಪುರದಿಂದ ವಾಪಸ್ ಬಂದು ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಫರ್ಜಾನಾಳನ್ನು ಆಕೆಯ ತಾಯಿ ಮತ್ತು ಸಹೋದರನೇ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂತು. ಹಿಂದೂ ವ್ಯಕ್ತಿಯೊಂದಿಗಿನ ಆಕೆಯ ಸಂಬಂಧದಿಂದ ಕೋಪಗೊಂಡು ಹತ್ಯೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

