ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತೀಯ ರೈಲ್ವೆ (Indian Railways) ಮೇಲೆಯೂ ಪರಿಣಾಮ ಬೀರಿದೆ. ರೈಲ್ವೇ ಕೇಟರಿಂಗ್ಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಮೈಕ್ರೋವೇವ್, ಇಂಡಕ್ಷನ್ ಸ್ಟವ್ ಬಳಕೆಗೆ ಸೂಚಿಸಲಾಗಿದೆ.
ಭಾರತೀಯ ರೈಲ್ವೇ ಅಡುಗೆ ಹಾಗೂ ಪ್ರವಾಸೋದ್ಯಮ ನಿಗಮಕ್ಕೆ ವೆಂಡರ್ಸ್ಗಳಿಂದ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜೊತೆಗೆ ಫ್ಲಾಟ್ಫಾರಂಗಳಲ್ಲಿ ಇರುವ ವಾಣಿಜ್ಯ ಮಳಿಗೆಗಳಲ್ಲೂ ಸಮಸ್ಯೆ ಉಂಟಾಗಿದೆ. ಹೀಗಾಗಿ ಐಆರ್ಸಿಟಿಸಿ ಮಾರಾಟಗಾರರಿಗೆ ಮೈಕ್ರೋವೇವ್, ಇಂಡಕ್ಷನ್ ಸ್ಟವ್ ಹಾಗೂ ಪರ್ಯಾಯ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: IEA ಇತಿಹಾಸದಲ್ಲಿ ಫಸ್ಟ್ ಟೈಂ 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಗೆ 32 ದೇಶಗಳು ಒಪ್ಪಿಗೆ
ಈ ಸೂಚನೆ ರೈಲ್ವೆ ನಿಲ್ದಾಣಗಳಾದ್ಯಂತ ಆಹಾರ ಪ್ಲಾಜಾಗಳು, ರಿಫ್ರೆಶ್ಮೆಂಟ್ ಕೊಠಡಿಗಳು ಮತ್ತು ಜನ್ ಆಹಾರ್ ಔಟ್ಲೆಟ್ಗಳಿಗೆ ಅನ್ವಯಿಸುತ್ತದೆ. ಜೊತೆಗೆ ರೈಲುಗಳಲ್ಲಿ ಊಟದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು ಟಿಕೆಟ್ ಕಾಯ್ದಿರಿಸುವಾಗ ಊಟವನ್ನು ಬುಕ್ ಮಾಡಿದ್ದ ಪ್ರಯಾಣಿಕರಿಗೆ ಮರುಪಾವತಿ ಮಾಡಲು ತಿಳಿಸಿದೆ.

