ವಾಷಿಂಗ್ಟನ್: ಇರಾನ್ನಿಂದ (Iran) ಖಡಕ್ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್(Chris Wright ) ಅವರು ತೈಲ ಟ್ಯಾಂಕರ್ಗೆ ಅಮೆರಿಕ ನೌಕಾಪಡೆ ಬೆಂಗಾವಲು(US Navy Escorted) ನೀಡಿದೆ ಎಂಬ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ(USA) ನೌಕಾಪಡೆಯ ಬೆಂಗಾವಲಿನಲ್ಲಿ ತೈಲ ಟ್ಯಾಂಕರ್ (Oil Tanker) ಯಶಸ್ವಿಯಾಗಿ ಸಾಗಿದೆ ಎಂದು ಕ್ರಿಸ್ ರೈಟ್ ಖಾತೆಯಿಂದ ಪೋಸ್ಟ್ ಪ್ರಕಟವಾಗಿತ್ತು.
ಈ ಪೋಸ್ಟ್ ಪ್ರಕಟವಾದ ನಂತರ ಇರಾನ್ ಸ್ಪೀಕರ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು, ಅಮೆರಿಕ ನೌಕಾಪಡೆಯ ಹಡಗುಗಳ ಬೆಂಗಾವಲಿನಿಂದ ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು(Strait of Hormuz) ದಾಟಿದೆಯೇ? ಬಹುಶಃ ಪ್ಲೇಸ್ಟೇಷನ್ನಲ್ಲಿ ಇರಬೇಕು ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳೋದಕ್ಕಿಂತ ಮುಳುಗಿಸೋದೆ ನಮ್ಮ ಸೇನೆಗೆ ಮಜಾ: ಟ್ರಂಪ್
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ ವಕ್ತಾರ ವಕ್ತಾರ ಅಲಿಮೊಹಮ್ಮದ್ ನೈನಿ ಅಮೆರಿಕದ ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಕಟ್ಟು ಕಥೆ ಎಂದು ಕರೆದಿದ್ದರು. ಅಮೆರಿಕದ ನೌಕಾಪಡೆ ಮತ್ತು ಅದರ ಮಿತ್ರರಾಷ್ಟ್ರಗಳ ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿದರೆ ಅವುಗಳನ್ನು ನಮ್ಮ ಕ್ಷಿಪಣಿಗಳು ಮತ್ತು ಡ್ರೋನ್ಗಳು ತಡೆಯುತ್ತವೆ. ಸಂಘರ್ಷ ಆರಂಭವಾದ ಬಳಿಕ ಯಾವುದೇ ಅಮೇರಿಕದ ಯುದ್ಧನೌಕೆ ಜಲಸಂಧಿಯನ್ನು ಸಮೀಪಿಸಲು ಧೈರ್ಯವೇ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕ್ರಿಸ್ ರೈಟ್ ಅವರ ಹೇಳಿಕೆಯನ್ನು ಇರಾನ್ ಸುಳ್ಳು ಎಂದು ಹೇಳಿದ ಬೆನ್ನಲ್ಲೇ ಎಕ್ಸ್ನಲ್ಲಿ ಮಾಡಿದ್ದ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು – ದಾಳಿ ಮುಂದುವರಿದ್ರೆ 1 ಲೀಟರ್ ತೈಲವೂ ಸಿಗಲ್ಲ: ಇರಾನ್
The past 30 minutes have been wild.
US Energy Secretary Chris Wright posted that a US Ship had officially gone through the Strait of Hormuz.
Markets loved it, oil tanked, the idea that war was coming to an end started to have some legitimacy.
Then, he deleted the tweet, which… pic.twitter.com/Z4z5ivTRh9
— amit (@amitisinvesting) March 10, 2026
ಡಿಲೀಟ್ ಮಾಡಿದ್ದಕ್ಕೆ ಅಮೆರಿಕದ ಇಂಧನ ಇಲಾಖೆಯ ವಕ್ತಾರ ಬೆನ್ ಡಯೆಟ್ಡೆರಿಚ್, ಇಲಾಖೆಯ ಸಿಬ್ಬಂದಿ ತಪ್ಪಾಗಿ ಶೀರ್ಷಿಕೆ ನೀಡಿದ್ದರಿಂದ ಪೋಸ್ಟ್ ಅನ್ನು ತೆಗೆದುಹಾಕಿದ್ದೇವೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಅಮೆರಿಕದ ಅಧ್ಯಕ್ಷರ ನಿವಾಸ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಪ್ರತಿಕ್ರಿಯಿಸಿ, ಅಮೆರಿಕದ ಹಡಗು ಹಾರ್ಮುಜ್ ಜಲಸಂಧಿಯಲ್ಲಿ ಮೂಲಕ ಹಾದು ಹೋಗಿಲ್ಲ. ಫೆ. 28 ರಂದು ದಾಳಿ ಪ್ರಾರಂಭವಾದಾಗಿನಿಂದ ಯುಎಸ್ ಯುದ್ಧನೌಕೆಗಳಿಂದ ಬೆಂಗಾವಲು ಪಡೆದ ಯಾವುದೇ ವಾಣಿಜ್ಯ ಹಡಗುಗಳು ಬಂದಿಲ್ಲ ಎಂದು ತಿಳಿಸಿದರು.


