ಬೈರುತ್: ಲೆಬನಾನ್‌ನ (Lebanon) ನಾಗರಿಕ ವಸತಿ ಪ್ರದೇಶದ ಮೇಲೆ ಇಸ್ರೇಲ್ (Israel) ಬಿಳಿ ರಂಜಕ (White Phosphorus Bomb) ಬಳಸಿ ದಾಳಿ ಮಾಡಿದೆ. ಮಾರ್ಚ್ 3 ರಂದು ನಡೆದ ದಾಳಿಯಲ್ಲಿ ಬಿಳಿ ರಂಜಕದ ಪ್ರಯೋಗ ಮಾಡಿದೆ.
ಜನರ ಜೀವದ ಮೇಲೆ ಬಿಳಿ ರಂಜಕ ಭೀಕರ ಪರಿಣಾಮ ಬೀರಲಿದೆ. ಈ ಹಿಂದೆ ಗಾಜಾಪಟ್ಟಿಯಲ್ಲೂ ಇದನ್ನು ಇಸ್ರೇಲ್ ಬಳಸಿತ್ತು. ರಾಸಾಯನಿಕ ಬಳಸುವ ಮೂಲಕ ಪದೇ ಪದೇ ಕಾನೂನನ್ನು ಇಸ್ರೇಲ್ ಉಲ್ಲಂಘಿಸಿದೆ. ಇದನ್ನೂ ಓದಿ: ಇಂಧನ ಹೊಡೆತಕ್ಕೆ ಪಾಕ್ ತತ್ತರ – ಶಾಲೆಗಳಿಗೆ 2 ವಾರ ರಜೆ, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ
ಬಿಳಿ ರಂಜಕ ಒಂದು ರಾಸಾಯನಿಕವಾಗಿದ್ದು, ಶೆಲ್, ಬಾಂಬ್ ಮತ್ತು ರಾಕೇಟ್‌ಗಳಲ್ಲಿ ಇಸ್ರೇಲ್ ಬಳಕೆ ಮಾಡಿದೆ. ಗಾಳಿ ಸಂಪರ್ಕ ಬಂದ ಕೂಡಲೇ ಇದು ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸುತ್ತದೆ. ಇದರಿಂದ ಅಪಾರ ಪ್ರಾಣಹಾನಿಯಾಗಲಿದೆ.
ಏನದು ಬಿಳಿ ರಂಜಕ?
ಬಿಳಿ ರಂಜಕವು ಮೇಣದ ರೂಪದಲ್ಲಿರುವ ರಾಸಾಯನಿಕ ವಸ್ತು. ಆಮ್ಲಜಕನದ ಸಂಪರ್ಕಕ್ಕೆ ಬಂದಾಗ ಸ್ವಯಂ ಪ್ರೇರಿತವಾಗಿ ಹೊತ್ತಿ ಉರಿಯುತ್ತದೆ. ಸೈನ್ಯದ ಚಲನವಲನ ಮರೆಮಾಚಲು ಅಥವಾ ವೈಮಾನಿಕ ದಾಳಿ ವೇಳೆ ರೆಡಾರ್ ಕಣ್ಣಪ್ಪಿಸಲು ರಕ್ಷಣಾ ಪಡೆಗಳಲ್ಲಿ ಪ್ರಾಥಮಿಕವಾಗಿ ಬಳಸಲಾಗುತ್ತದೆ. ಆದರೆ, ಯುದ್ಧ ಸಾಮಗ್ರಿಗಳಲ್ಲಿ ಬಳಸಿಕೊಂಡು ದಾಳಿ ನಡೆಸಿದಾಗ ಭಾರೀ ಪರಿಣಾಮ ಬೀರುತ್ತದೆ. 1960ರಲ್ಲಿ ವಿಯೆಟ್ನಾಂ ಸಮರದ ವೇಳೆ ಅಮೆರಿಕ ಸಹ ಬಿಳಿ ರಂಜಕದ ಶೆಲ್ ಬಾಂಬ್ ಬಳಸಿಕೊಂಡಿತ್ತು.
ಗಾಳಿ ಪ್ರವೇಶಿಸುವ ಬಿಳಿ ರಂಜಕ ವಸ್ತು 800 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೃಷ್ಟಿಸುತ್ತದೆ. ಲೋಹವನ್ನು ಕರಗಿಸುವಷ್ಟು ಬಿಸಿಯಾಗುವ ವಾತಾವರಣ ಸೃಷ್ಟಿಯಿಂದ ಮನುಷ್ಯನ ದೇಹ ಸುಟ್ಟು ಭಸ್ಮವಾಗುತ್ತದೆ. ಇದನ್ನೂ ಓದಿ: ಮಿತ್ರದೇಶಗಳಲ್ಲಿ ಭಿನ್ನಮತ | ಇರಾನ್‌ನ 30 ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ – ತರಾಟೆಗೆ ತೆಗೆದುಕೊಂಡ ಅಮೆರಿಕ

