– ಜಾಗತಿಕವಾಗಿ ತೈಲ ಬೆಲೆ ಏರಿಕೆಗೆ ಅಮೆರಿಕ ಕೆಂಡ
ವಾಷಿಂಗ್ಟನ್/ಟೆಹ್ರಾನ್: ಇರಾನ್‌ನ (Iran) ಸುಮಾರು 30 ತೈಲ ಘಟಕಗಳ ಮೇಲೆ ಇಸ್ರೇಲ್ (Israel) ನಡೆಸಿದ ದಾಳಿ ಅಮೆರಿಕ (America) ಕಿಡಿಕಾರಿದ್ದು, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಇರಾನ್-ಇಸ್ರೇಲ್ ಯುದ್ಧ 11ಕ್ಕೆ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಮಿತ್ರದೇಶಗಳ ಮಧ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಭಾನುವಾರ (ಮಾ.8) ಇರಾನ್ ರಾಜಧಾನಿ ಟೆಹ್ರಾನ್‌ನ ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ದಾಳಿಯ ತೀವ್ರತೆಗೆ ಬೆಂಕಿ ಮುಗಿಲೆತ್ತರಕ್ಕೆ ಹಬ್ಬಿ, ಹೊಗೆ ಇಡೀ ನಗರವನ್ನು ಆವರಿಸಿತ್ತು. ಈ ವೇಳೆ ನಾಲ್ವರು ಸಾವನ್ನಪ್ಪಿದ್ದರು. ಮೂಲಗಳ ಪ್ರಕಾರ, ಇಸ್ರೇಲ್ ಈ ದಾಳಿ ನಡೆಸುವುದಾಗಿ ಮೊದಲೇ ಅಮೆರಿಕಕ್ಕೆ ಮಾಹಿತಿ ನೀಡಿತ್ತು. ಆದರೆ ಅಮೆರಿಕ ಊಹಿಸಿದ್ದಕ್ಕಿಂತ ದಾಳಿ ಬಹಳ ತೀವ್ರವಾಗಿದ್ದರಿಂದ ಅದು ಅಸಮಾಧಾನಗೊಂಡಿದೆ. ಹೀಗಾಗಿ ಇಸ್ರೇಲ್ ಅನ್ನು ತೀಕ್ಷ್ಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಮರ್ಷಿಯಲ್ ಸಿಲಿಂಡರ್ ಅಭಾವ – ತಮಿಳುನಾಡಲ್ಲಿ ರೆಸ್ಟೋರೆಂಟ್‌ಗಳು ಬಂದ್ ಮಾಡೋ ಪರಿಸ್ಥಿತಿ
ಇರಾನ್ ಈ ತೈಲ ಡಿಪೋಗಳನ್ನು ತನ್ನ ಮಿಲಿಟರಿ ಘಟಕಗಳು ಸೇರಿದಂತೆ ವಿವಿಧ ಸಂಬಂಧಿತ ದೇಶಗಳಿಗೆ ಇಂಧನ ಪೂರೈಸಲು ಬಳಸಿಕೊಂಡಿತ್ತು. ಹೀಗಾಗಿ ದಾಳಿ ಮಾಡಲಾಗಿದೆ. ಅಲ್ಲದೆ, ಇಸ್ರೇಲ್ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಟೆಹ್ರಾನ್‌ಗೆ ಎಚ್ಚರಿಕೆ ನೀಡಲು ಈ ದಾಳಿಗಳನ್ನು ಉದ್ದೇಶಿಸಲಾಗಿತ್ತು ಎಂದು ಇಸ್ರೇಲ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ದಾಳಿಯ ಪ್ರಮಾಣವು ಅಮೆರಿಕದಲ್ಲಿ ಕಳವಳ ಹೆಚ್ಚಿಸಿದೆ. ದೈನಂದಿನ ನಾಗರಿಕ ಬಳಕೆಗೆ ಸಂಬಂಧಿಸಿದ ಘಟಕಗಳ ಮೇಲಿನ ದಾಳಿಗಳು ಅನಿರೀಕ್ಷಿತ ಪರಿಣಾಮ ಉಂಟು ಮಾಡಬಹುದು. ಜಾಗತಿಕ ತೈಲ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಅಮೆರಿಕ ಮತ್ತು ಇಸ್ರೇಲ್‌ನ ಉಗ್ರ ದಾಳಿಯಿಂದ ತತ್ತರಿಸಿರುವ ಇರಾನ್ ಕೂಡ ಬಲವಾದ ಪ್ರತಿದಾಳಿ ಮುಂದುವರಿಸಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಘರ್ಜನೆಯ ನಡುವೆ, ಈ ಸಂಘರ್ಷವು ಈಗ ಹನ್ನೊಂದನ್ನೇ ದಿನಕ್ಕೆ ಪ್ರವೇಶಿಸಿದ್ದು, ನ್ಯಾಟೋ ಹೊಸ ಎಂಟ್ರಿ ಪಡೆದುಕೊಂಡಿದ್ದು, ಮಾತುಕತೆ ಅಪ್ರಸುತ್ತ ಎಂದು ಇರಾನ್ ಹೇಳಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಕಿಚ್ಚು ಹೆಚ್ಚಿದೆ. 11ನೇ ದಿನಕ್ಕೆ ಕಾಲಿಟ್ಟ ವಾರ್‌ನ ಬೆಂಕಿಗೆ ಇರಾನ್ ಯುದ್ಧನೌಕೆಗಳು ಧಗಧಗಿಸಿ ಉರಿಯುತ್ತಿವೆ. ಅಮೆರಿಕಾ ದಾಳಿಗೆ ಇರಾನ್ ಯುದ್ಧನೌಕೆ ಧ್ವಂಸಗೊಂಡಿದೆ. ಕೊಲ್ಲಿ ಬಂದರ್ ಲೆಂಗೆಹ್ ಕರಾವಳಿಯಲ್ಲಿ ಯುದ್ಧನೌಕೆ ಉಡೀಸ್ ಆಗಿದೆ. ಇರಾನ್ ಡ್ರೋನ್ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಬೈರುತ್ ನಗರ ಮೇಲೆ ನಿರಂತರ ಅಟ್ಯಾಕ್ ಮಾಡಲಾಗುತ್ತಿದೆ. ಇಸ್ರೇಲ್ ದಾಳಿಗೆ 486 ಮಂದಿ ಬಲಿಯಾಗಿದ್ದಾರೆ. ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಅಟ್ಯಾಕ್ ಮಾಡಲಾಗ್ತಿದೆ.
ಇತ್ತ ಇಸ್ರೇಲ್‌ನ ಟೆಲ್ ಅವಿವ್ ಅಗ್ನಿಕುಂಡದಂತೆ ಆಗಿದೆ. ಟೆಲ್ ಅವಿವ್ ಮೇಲೆ ಹೆಜ್ಬೊಲ್ಲಾ ಅಟ್ಯಾಕ್ ನಡೆಸಿದ್ದು, ಕ್ಷಿಪಣಿ ಮಳೆ ಸುರಿಸಿದೆ. ಬಲಿಷ್ಠ ಏರ್ ಡಿಫೆನ್ಸ್ ಸಿಸ್ಟಂ ಹೊಂದಿರುವ ಇಸ್ರೇಲ್ ಐರನ್‌ಡೋಮ್ ಭೇದಿಸಿ ಹೆಜ್ಬೊಲ್ಲಾ ದಾಳಿ ನಡೆಸಿದೆ. ಲೆಬನಾನ್ ಗಡಿಯಲ್ಲಿ ಹೆಜ್ಬೊಲ್ಲಾ ರಾಕೆಟ್ ದಾಳಿ ಮಾಡಲಾಗಿದೆ. ಇಸ್ರೇಲ್ ಅಮೇರಿಕಾ ಜಂಟಿಯಾಗಿ ಇರಾನ್ ವಿರುದ್ಧ ಆರಂಭಿಸಿರುವ ಯುದ್ಧ ಆರಂಭವಾಗಿ 11 ದಿನವಾಗಿದೆ. ಇರಾನ್ ವಿರುದ್ಧ ಅಮೇರಿಕಾ ಮತ್ತು ಇಸ್ರೇಲ್ ದಾಳಿ ತೀವ್ರಗೊಂಡಿದೆ. ಶ್ರೀಲಂಕಾ ಬಳಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನಿನ ನೌಕಾ ಹಡಗನ್ನು ಹೊಡೆದು ಆಗಿದೆ. ಇದರ ಬೆನ್ನಲೆ ಈಗ ಸೊಲೈಮಾನಿ ದರ್ಜೆಯ ಇರಾನಿನ ಮತ್ತೊಂದು ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆ ದಾಳಿ ನಡೆಸಿದೆ.ಇದನ್ನೂ ಓದಿ: ಇರಾನ್ ಯುದ್ಧ| ಎಲ್‌ಪಿಜಿ ಕನಿಷ್ಠ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದ ಕೇಂದ್ರ

