Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 9ಕ್ಕೆ ಹಿಜಾಬ್, 13ಕ್ಕೆ ಮದುವೆ – ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 9ಕ್ಕೆ ಹಿಜಾಬ್, 13ಕ್ಕೆ ಮದುವೆ – ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು?

Latest

9ಕ್ಕೆ ಹಿಜಾಬ್, 13ಕ್ಕೆ ಮದುವೆ – ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು?

Public TV
Last updated: March 9, 2026 7:07 am
Public TV
Share
4 Min Read
Iran Khamenei
SHARE

ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಜಂಟಿ ಯುದ್ಧ ಹಲವು ಕಾರಣಗಳಿಂದ ಪ್ರಾರಂಭವಾದರೂ ಕೂಡ ಖಮೇನಿ ಸಾವಿನ ಬಳಿಕ ಯುದ್ಧ ತೀವ್ರಗೊಂಡಿದೆ. ಇರಾನ್ ಇಸ್ರೇಲ್ ವಿರುದ್ಧ ಖಮೇನಿ (Khamenei) ಸಾವಿನ ಸಾವಿನ ಸೇಡು ತೀರಿಸಿಕೊಳ್ಳಲು ಮುಂದಾದರೂ ಇರಾನ್ ಸ್ಥಳೀಯರೇ  ಖುಷಿಪಟ್ಟಿದ್ದರು. ಯಾಕೆ? ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು? ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

Israel Iran airstrikes

1989ರಲ್ಲಿ ಇರಾನಿನ ಇಸ್ಲಾಮಿಕ್ ಕ್ರಾಂತಿಯ ಪಿತಾಮಹ ಅಯತೋಲ್ಲಾ     ಖೋಮೆನಿ ನಿಧನರಾದರು. ಅದಾದ ನಂತರ ಅಲಿ ಖಮೇನಿ ಇರಾನ್ ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದರು. ಇದಕ್ಕೂ ಮೊದಲು ಇರಾನ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆಡಳಿತದ ಜೊತೆ ಜೊತೆಗೆ ರಾಜಕೀಯವಾಗಿಯೂ ಹಾಗೂ ಧಾರ್ಮಿಕವಾಗಿಯು ಸಂಪೂರ್ಣ ಹಿಡಿತದೊಂದಿಗೆ ಆಡಳಿತವನ್ನು ನಡೆಸಿದರು. ಈ ಸಮಯದಲ್ಲಿ ಇರಾನ್ ನ ಅಧ್ಯಕ್ಷರಿಗಿಂತ ಹೆಚ್ಚಿನ ಅಧಿಕಾರ ಖಮೇನಿ ಕೈಯಲ್ಲಿತ್ತು. ಮಿಲಿಟರಿ, ವಿದೇಶಾಂಗ ನೀತಿ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇತ್ತು. 

Iran Ayatollah Ali Khamenei

ಇದೇ ವೇಳೆ ಇರಾನ್ ನಲ್ಲಿ ಕಟ್ಟು ನಿಟ್ಟಿನ ಕಾನೂನುಗಳನ್ನ ಜಾರಿಗೊಳಿಸಿದರು. ಮಹಿಳೆಯರಿಗೆ ಒಂಬತ್ತನೇ ವಯಸ್ಸಿಗೆ ಹಿಜಬ್ ಧರಿಸುವಂತೆ ಹಾಗೂ ಕಠಿಣವಾದಂತಹ ಸಾಮಾಜಿಕ ನಿರ್ಬಂಧಗಳನ್ನು ಜಾರಿಗೊಳಿಸಿದ್ದರು.

ಅಲ್ಲದೆ ಮಹಿಳೆಯರ ಉಡುಪು ಹಾಗೂ ಅವರ ನಡವಳಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಪಡೆಯನ್ನು ಜಾರಿಗೊಳಿಸಿದರು. ಈ ಮೂಲಕ ಪೊಲೀಸರು ಮಹಿಳೆಯರ ಉಡುಪು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅವರ ನಡವಳಿಕೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

Ayatollah Ali Khamenei

ಇದಕ್ಕೆ ಉದಾಹರಣೆಯಾಗಿ 2022 ರಲ್ಲಿ ಯುವತಿಯೊಬ್ಬಳು ಹಿಜಬ್ ಧರಿಸದ ಕಾರಣಕ್ಕೆ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದರು. ಈ ವೇಳೆ ಆ ಯುವತಿ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದರು. ಇದರಿಂದಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಇದಾದ ಬಳಿಕ ಖಮೇನಿ ಆಡಳಿತ ತುಂಬಾ ಕ್ರೂರವಾಗಿ ಕಾಣಿಸಲು ಶುರುವಾಯಿತು. 

ತಮ್ಮ ಆಡಳಿತದಲ್ಲಿ ಹಿಜಾಬ್ ಕಡ್ಡಾಯ, ಬಾಲ್ಯ ವಿವಾಹ ಮತ್ತು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಹಾಗೂ ಕೆಲವು ನಿಯಮಗಳನ್ನ ಜಾರಿಗೊಳಿಸಿದರು. 

Ayatollah Ali Khameneii

ಹಿಜಬ್ ಕಡ್ಡಾಯ:

ಖಮೇನಿ. ಆಡಳಿತದಲ್ಲಿ ಹಿಜಬ್ ಧರಿಸುವುದು ಕಡ್ಡಾಯವಾಗಿ ನಿಯಮ ಜಾರಿಗೊಳಿಸಿದರು. ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪೋಲಿಸ್ ಪಡೆಯು ಕಠಿಣವಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 9ನೇ ವಯಸ್ಸು ದಾಟಿದ ಬಳಿಕ ಪ್ರತಿ ಬಾಲಕಿ ಅಥವಾ ಯುವತಿ ಹಿಜಬ್ ಧರಿಸುವುದು ಕಡ್ಡಾಯವೆಂದು ಪೋಷಿಸಿದರು. ಇದಾದ ಬಳಿಕ ಯುವತಿಯ ಸಾವಿನಿಂದ ಖಮೇನಿ ಆಡಳಿತ ಕಠಿಣವಾಗಿ ಕಾಣಲಾರಂಬಿಸಿತ್ತು

Hijab 1

ಬಾಲ್ಯ ವಿವಾಹ: 

ಇರಾನ್ ನ ಕೆಲವು ಕಾನೂನುಗಳ ಪ್ರಕಾರ, 13 ವರ್ಷ ದಾಟಿದ ಹುಡುಗಿಯರು ಮದುವೆಯಾಗಲು ಅವಕಾಶವಿದೆ. ಈ ನಿಯಮವು ಖಮೇನಿ ಆಡಳಿತದಲ್ಲಿ ಜಾರಿಗೆ ಬಂದಿದ್ದು, ಒಂದು ದೌರ್ಜನ್ಯಕಾರಿ ಪದ್ಧತಿಯಂತಲೇ ಕರೆಯಲಾಗಿದೆ. 13 ವರ್ಷ ದಾಟಿದ ಹುಡುಗಿ ಹಾಗೂ 15 ವರ್ಷ ದಾಟಿದ ಹುಡುಗ ಮದುವೆಯಾಗುವುದು ಇರಾನ್ ನ ಕಾನೂನು. ತಂದೆಯ ಪೋಷಕರು ಹಾಗೂ ನ್ಯಾಯಾಲಯದ ಒಪ್ಪಿಗೆ ಮೇರೆಗೆ 9ನೇ ವಯಸ್ಸಿಗೆ ತಮ್ಮ ಮಗಳ ಮದುವೆಯನ್ನು ಮಾಡುವ ಅವಕಾಶವಿದೆ. 

ಇರಾನ್ ನಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಖಮೇನಿ ತಮ್ಮ ಆಡಳಿತದಲ್ಲಿ ಈ ನಿಯಮವನ್ನ ಜಾರಿಗೊಳಿಸಿದರು. ಆದರೆ ಈ ಬಾಲ್ಯ ವಿವಾಹ ಪದ್ಧತಿ ಕ್ರಮೇಣವಾಗಿ ಹಣದಾಸೆಗಾಗಿ ಬಳಸಿಕೊಳ್ಳುವಂತಾಯಿತು. 

Child Marriage Bride

ಇರಾನ್ ನಲ್ಲಿ ಪ್ರತಿವರ್ಷ ಸುಮಾರು 25 ಸಾವಿರದಿಂದ 30,000 ಹುಡುಗಿಯರು 15 ವರ್ಷಕ್ಕಿಂತ ಮೊದಲೇ ವಿವಾಹವಾಗುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹದ ಕಾರಣದಿಂದಾಗಿ ಸುಮಾರು 20 ರಿಂದ 30 ಶೇಕಡಾದಷ್ಟು ಹುಡುಗಿಯರು ಶಿಕ್ಷಣವನ್ನು ಅರ್ಧದಲ್ಲಿ ತ್ಯಜಿಸಿಬಿಡುತ್ತಾರೆ. ಇನ್ನು 15 ವರ್ಷಕ್ಕಿಂತಲೇ ಮೊದಲು ಮದುವೆಯಾಗುವುದರಿಂದ ಗರ್ಭಿಣಿಯಾದಾಗ ಮರಣ ಪ್ರಮಾಣವು 5 ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಸಂಸ್ಥೆ ವರದಿ ಎಂದು ತಿಳಿಸಿದೆ.

ಶಿಕ್ಷಣ ಮತ್ತು ಉದ್ಯೋಗ: 

ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ಖಮೇನಿ ತಮ್ಮ ಆಡಳಿತದಲ್ಲಿ ಅನೇಕ ನಿರ್ಬಂಧಗಳನ್ನು ಹೇರಿದ್ದರು. ಇದರಿಂದಾಗಿ ಪುರುಷರ ಅಧಿಪತ್ಯ ಸ್ಥಾಪಿಸುವ ಕಾನೂನುಗಳನ್ನು ಕೂಡ ಜಾರಿಗೊಳಿಸಿದ್ದರು. 

ಅದಲ್ಲದೆ ಖಮೇನಿ ಆಡಳಿತದಲ್ಲಿ ಮಹಿಳೆಯರನ್ನ ಕೇವಲ ಮನೆ ಕೆಲಸ ಹಾಗೂ ಮಕ್ಕಳ ಪಾಲನೆಗೆ ಎಂದು ಸೀಮಿತಗೊಳಿಸಲಾಗಿದೆ. ಇದರ ಹೊರತಾಗಿ ಉನ್ನತ ಶಿಕ್ಷಣದಿಂದ ಮಹಿಳೆಯರನ್ನ ಹೊರಗಿಡಲಾಗಿದೆ. ಅಲ್ಲದೆ ಪುರುಷರ ಅನುಮತಿ ಇಲ್ಲದೆ ಮಹಿಳೆಯರು ಪ್ರಯಾಣ ಮಾಡುವುದು ಮತ್ತು ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿದೆ.

ಇನ್ನು ಪುರುಷ ಪ್ರಧಾನವಾಗಿದ್ದು, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಪುರುಷ ಹಾಗೂ ಮಹಿಳೆಯರ ನಡುವೆ ಪುರುಷರಿಗೆ ಅತಿ ಹೆಚ್ಚು, ಮಹಿಳೆಯರಿಗೆ ಕಡಿಮೆ ಸಂಬಳ ನೀಡುವ ಕೆಲವು ಅಂಶಗಳು ಕಂಡುಬರುತ್ತವೆ. ಮಹಿಳೆಯರು ಶಿಕ್ಷಿತರಾದರು ಕೂಡ ಅವರು ಸ್ವತಂತ್ರರಲ್ಲ ಎನ್ನುವುದು ಇಲ್ಲಿನ ಒಂದು ಪದ್ಧತಿ.

Iran Women Celebration On Ayatollah Ali Khamenei Death

ಈ ಕೆಲವು ಕಠಿಣ ನಿಯಮಗಳನ್ನ ಜಾರಿಗೊಳಿಸಿದ ಖಮೇನಿಯು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿ ‘ ದಿ ಎಪಿಕ್ ಪ್ಯೂರಿ’ ಎಂಬ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಬಲಿ ಪಡೆದರು. 2020ರ ಮಾರ್ಚ್ 1ರಂದು ಇರಾನ್ ಸರ್ಕಾರ ಮತ್ತು ಮಾಧ್ಯಮಗಳು ಖಮೇನಿ ನಿಧನರಾಗಿದ್ದಾರೆ ಎಂದು ಅಧಿಕೃತವಾಗಿ ಖಚಿತ ಪಡಿಸಿದವು.  ಖಮೇನಿ ಸಾವಿನ ನಂತರ ಖಮೇನಿ ಜಾರಿ ತಂದಂತಹ ನಿಯಮಗಳು ಇಲ್ಲಿಗೆ ಅಂತ್ಯವಾದವು ಎಂದು ಖುಷಿಯಲ್ಲಿ ಸಂಭ್ರಮಿಸಿದ್ದರು.

TAGGED:americaayatollah ali khameneiiranIsraelಅಲಿ ಖಮೇನಿಇರಾನ್ಇಸ್ರೇಲ್
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

WhatsApp
Court

ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ತೊಡಗಿದ್ದ 9,400 ವ್ಯಾಟ್ಸಪ್ ಖಾತೆಗಳು ಡಿಲೀಟ್‌

Public TV
By Public TV
8 seconds ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
17 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
35 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
36 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
53 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
53 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?