ಕಾಠ್ಮಂಡು: ಝೆನ್‌ಜೀ ಪ್ರತಿಭಟನೆ ಬಳಿಕ ನೇಪಾಳದಲ್ಲಿ (Nepal) ಮಹಾರಾಜಕೀಯ ಕ್ರಾಂತಿ ಆಗಿದೆ. ರ‍್ಯಾಪರ್ ಆಗಿ ಜನಪ್ರಿಯತೆ ಗಳಿಸಿದ್ದ ಬಲೇಂದ್ರ ಶಾರ (Balendra Shah) ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಪ್ರಚಂಡ ಗೆಲುವು ಸಾಧಿಸಿದೆ.
ನಾಲ್ಕು ಬಾರಿ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿಯ ವಿರುದ್ಧ ಸ್ಪರ್ಧಿಸಿದ್ದ ಬಲೇಂದ್ರ ಶಾ 50,000 ಮತಗಳ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದಾರೆ. 165 ಸೀಟ್‌ಗಳ ಚುನಾವಣೆಯಲ್ಲಿ 119 ಸೀಟ್‌ನಲ್ಲಿ ಆರ್‌ಎಸ್‌ಪಿ ಜಯಭೇರಿ ಭಾರಿಸಿದೆ. ಇದನ್ನೂ ಓದಿ: ದೇಶದ ಮೊದಲ ‘ರಿಂಗ್ ಮೆಟ್ರೋ’ ಉದ್ಘಾಟಿಸಿದ ಮೋದಿ
ರಾಜಧಾನಿ ಕಠ್ಮಂಡು ಕಣಿವೆಯ 3 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಆರ್‌ಎಸ್‌ಪಿ ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ, ಆರ್‌ಎಸ್‌ಪಿ ಸರ್ಕಾರ ರಚನೆ ಮಾಡಲಿದ್ದು, 35 ವರ್ಷದ ಬಲೇಂದ್ರ ಶಾ ಪ್ರಧಾನಿಯಾಗಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್ – ಇನ್ಮುಂದೆ ರಾತ್ರಿಯೂ ಬರಲಿದೆ ಕಸದ ಗಾಡಿಗಳು

