ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ (Iran) ಸೇನಾ ಸಾಮರ್ಥ್ಯಕ್ಕೆ ಗಣನೀಯ ಹಾನಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ನಮ್ಮ ದಾಳಿಯಿಂದ ಇರಾನ್‌ನ ನೌಕಾಪಡೆ, ವಾಯುಪಡೆ ಮತ್ತು ಸಂವಹನ ಮೂಲಭೂತ ಸೌಕರ್ಯಗಳು ತೀವ್ರವಾಗಿ ಹಾನಿಗೀಡಾಗಿವೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ಸೇನಾಪಡೆಯು ಇರಾನ್‌ನ 42 ಯುದ್ಧನೌಕೆಗಳನ್ನು ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ.
ಇರಾನ್‌ನ ಬಹುತೇಕ ವಾಯುಪಡೆ ಶಕ್ತಿ ಮತ್ತು ದೂರಸಂಪರ್ಕ ವ್ಯವಸ್ಥೆಗಳನ್ನು ನಾಶಗೊಳಿಸಿದೆ. ಇರಾನ್‌ನ ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸೌಕರ್ಯಗಳ ಮೇಲೆ ಈ ಹಿಂದೆ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಗಳು ನಡೆಯುವುದಕ್ಕೂ ಮುನ್ನ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವ ಹಂತಕ್ಕೆ ಸಮೀಪಿಸಿತ್ತು. ಈ ಕಾರ್ಯಾಚರಣೆ ಮಹತ್ವದ ಯಶಸ್ಸಾಗಿದ್ದು, ಇರಾನ್‌ನ ಸೇನಾ ಸಾಮರ್ಥ್ಯಗಳಿಗೆ ಈ ದಾಳಿಗಳು ನಿರ್ಣಾಯಕ ಹೊಡೆತ ನೀಡಿವೆ ಎಂದಿದ್ದಾರೆ.

