ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸುತ್ತಿರುವ ಟಾಕ್ಸಿಕ್ (Toxic) ಸಿನಿಮಾದ ಬಿಡುಗಡೆ ಪೋಸ್ಟ್‌ಪೋನ್ ಮಾಡಿದ ಬೆನ್ನಲ್ಲೇ ಇದೀಗ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಲವ್ ಮಾಕ್ಟೇಲ್-3 (Love Mocktail-3) ಸಿನಿಮಾದ ರಿಲೀಸ್ ಡೇಟ್ ಕೂಡ ಬದಲಾಗಿದೆ.
ಈ ಮೊದಲು ಲವ್ ಮಾಕ್ಟೇಲ್-3 ಸಿನಿಮಾ ಏ.10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಇದೀಗ ಡಾರ್ಲಿಂಗ್ ಕೃಷ್ಣ (Darling Krishna) ಸಿನಿಮಾ ಬಿಡುಗಡೆಯನ್ನು ಪ್ರಿ-ಪೋನ್‌ಗೊಳಿಸಿದ್ದು, ಮಾ.19ಕ್ಕೆ ರಿಲೀಸ್ ಆಗಲಿದೆ. ಟಾಕ್ಸಿಕ್ ರಿಲೀಸ್ ಡೇಟ್ ಮುಂದೂಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಿಮ್ಮನ್ನು ರಂಜಿಸೋಕೆ ಬೇಗ ಬರಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ
View this post on Instagram
ಲವ್ ಮಾಕ್ಟೇಲ್-2ರ ಮುಂದುವರಿದ ಭಾಗ ಇದಾಗಿದ್ದು, ತಂದೆ ಹಾಗೂ ಮಗಳ ನಡುವಿನ ಬಾಂಧವ್ಯ, ಭಾವನಾತ್ಮಕ ಸಂಬಂಧವನ್ನು ತೋರಿಸಲಿದೆ. ಈ ಮೊದಲು ಫೆ.23ಕ್ಕೆ ರಿಲೀಸ್ ಮಾಡಲು ನಿರ್ಧರಿಸಿತ್ತು. ಆದರೆ ಬೇರೆ ಸಿನಿಮಾ ರಿಲೀಸ್‌ಗಿದ್ದ ಕಾರಣ ಮುಂದೂಡಿತ್ತು. ಇನ್ನೂ ಮಾರ್ಚ್ನಲ್ಲಿ ಟಾಕ್ಸಿಕ್ ಆಗುವುದಾಗಿ ಘೋಷಿಸಿತ್ತು. ಹೀಗಾಗಿ ಏ.10ಕ್ಕೆ ರಿಲೀಸ್ ಮಾಡಲು ನಿರ್ಧರಿಸಿತ್ತು. ಇದೀಗ ಟಾಕ್ಸಿಕ್ ಮುಂದೂಡಿದ ಕಾರಣ ಮಾ.19ಕ್ಕೆ ತೆರೆಕಾಣಲು ಸಿದ್ಧವಾಗಿದೆ.

