– ಗಂಟೆಗಟ್ಟಲೆ ಬಾಗಿಲಲ್ಲೇ ಕಾಯುತ್ತಿರುವ ಅಧಿಕಾರಿಗಳು
ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ (Hassan Municipal Corporation) ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದ್ದು ಬೆಳಗ್ಗೆ 5.15 ಕ್ಕೆ ಸತ್ಯನಾರಾಯಣ ಅವರ ಮನೆಯೊಳಗೆ ಪರಿಶೀಲನೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಬಂದು ಕಾಯುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಮನೆಯ ಲೈಟ್ ಆಫ್ ಮಾಡಿದ್ದು ಮನೆಯ ಬಾಗಿಲು ತೆರೆಯದ ಸತ್ಯನಾರಾಯಣ ಅಧಿಕಾರಿಗಳನ್ನ ಸತಾಯಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

ಸತತ 2 ಗಂಟೆಯಿಂದ ಮನೆಯ ಬಾಗಿಲು ತೆಗೆಸಲು ಲೋಕಾಯುಕ್ತ ಅಧಿಕಾರಿಗಳು ಹರಸಾಹಸಡಪಡುತ್ತಿದ್ದಾರೆ. ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಸತ್ಯನಾರಾಯಣ ಬಾಗಿಲು ತೆರೆಯುತ್ತಿಲ್ಲ. ಮನೆಯ ಸುತ್ತಲೂ ಓಡಾಡಿ ಬಾಗಿಲು ತೆರಸಲು ಪ್ರಯತ್ನಿಸುತ್ತಿದ್ದು ಸತತ 2 ಗಂಟೆಗೂ ಹೆಚ್ಚು ಕಾಲದಿಂದ ಮನೆಯ ಬಳಿಯೇ ಬೀಡುಬಿಟ್ಟಿದ್ದಾರೆ. ಸತ್ಯನಾರಾಯಣ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ.
ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಭೇಟಿ
ಇನ್ನೂ ಸತ್ಯನಾರಾಯಣ ಬಾಗಿಲು ತೆರೆಯದೇ ಸತಾಯಿಸುತ್ತಿರುವ ಕಾರಣ ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಕೂಟ ಭೇಟಿ ನೀಡಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ವಾರ್ ಎಫೆಕ್ಟ್; ವಾರದೊಳಗೆ ದುಬಾರಿಯಾಗಲಿದೆ ಡ್ರೈಫ್ರೂಟ್ಸ್

