Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ʻದೇವರನಾಡುʼ ಕೇರಳ ʻಕೇರಳಂʼ ಆಗಿದ್ದೇಕೆ? – ಇದು ಕೇವಲ ಹೆಸರಲ್ಲ ಐತಿಹಾಸಿಕ, ಸಾಂಸ್ಕೃತಿಕ ಪಯಣದ ಹಿಂದಿನ ಕಥೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ʻದೇವರನಾಡುʼ ಕೇರಳ ʻಕೇರಳಂʼ ಆಗಿದ್ದೇಕೆ? – ಇದು ಕೇವಲ ಹೆಸರಲ್ಲ ಐತಿಹಾಸಿಕ, ಸಾಂಸ್ಕೃತಿಕ ಪಯಣದ ಹಿಂದಿನ ಕಥೆ!

Latest

ʻದೇವರನಾಡುʼ ಕೇರಳ ʻಕೇರಳಂʼ ಆಗಿದ್ದೇಕೆ? – ಇದು ಕೇವಲ ಹೆಸರಲ್ಲ ಐತಿಹಾಸಿಕ, ಸಾಂಸ್ಕೃತಿಕ ಪಯಣದ ಹಿಂದಿನ ಕಥೆ!

Public TV
Last updated: March 2, 2026 9:11 pm
Public TV
Share
4 Min Read
Keralam
SHARE

ದೇವರ ನಾಡು ಎಂದೇ ಹೆಸರುವಾಸಿಯಾಗಿರುವುದು ಕೇರಳ. ಜೀವನ ಶೈಲಿಯಿಂದ ಹಿಡಿದು, ಅವರ ಆಹಾರ ಪದ್ಧತಿ ಸಹ ವಿಭಿನ್ನ, ಇಲ್ಲಿರುವ ಪ್ರಕೃತಿ ಸೌಂದರ್ಯ ಮನಸ್ಸಿಗೆ ಶಾಂತಿ ನೀಡುತ್ತದೆ. ʻದೇವರ ನಾಡುʼ ಅನ್ನೋ ಹೆಸರಿಗೆ ತಕ್ಕಂತೆಯೇ ಕಂಗೊಳಿಸುತ್ತೆ. ಕಣ್ಣು ಮಿಟುಕಿಸಲು ಸಾಧ್ಯವಾಗದಷ್ಟು ಪ್ರಾಕೃತಿಕ ಸೌಂದರ್ಯ, ನಮ್ಮ ಕಣ್ಣನ್ನು ಕುಕ್ಕುತ್ತದೆ. ಪ್ರವಾಸಿ ತಾಣಗಳಂತೂ ಹೇಳುವುದೇ ಬೇಡ ಒಂದನ್ನೊಂದು ಮೀರಿಸುವಷ್ಟು ಸೊಬಗು. ಇದೀಗ ದೇವರ ನಾಡಿನ ನಾಮ ಸ್ವರೂಪ ಬದಲಿಸಲು ಕೇರಳ ಸರ್ಕಾರ ಮುಂದಾಗಿದೆ.

ಹೌದು.. ಸ್ಥಳೀಯ ಭಾಷೆ, ಅಲ್ಲಿನ ಸಂಸ್ಕೃತಿ, ಸೊಗಡಿಗೆ ತಕ್ಕನಾಗಿ ಸ್ಥಳ, ರಾಜ್ಯಗಳ ಹೆಸರು ಬದಲಾವಣೆ ಮಾಡುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಅಲಹಾಬಾದ್‌ ಪ್ರಯಾಗ್‌ ರಾಜ್‌ ಆದಂತೆ, ಫೈಝಾಬಾದ್‌ ಅಯೋಧ್ಯೆ ಆದಂತೆ, ನೆರೆಯ ಕೇರಳ ʻಕೇರಳಂʼ ಆಗಿದೆ.

ಕಳೆದ ಫೆ.24 ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ʻಕೇರಳಂʼ ಮಾಡಿ ಎಂಬ ಕೇರಳ ರಾಜ್ಯದ ಮನವಿಯನ್ನ ಕೇಂದ್ರದ ಸಚಿವ ಸಂಪುಟ ಸಮಿತಿ ಪುರಸ್ಕರಿಸಿತು. ರಾಜ್ಯದ ಹೆಸರು ಬದಲಿಸುವ ಕೇರಳದ ಮನವಿಯನ್ನ ಪುರಸ್ಕರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರ್ಧಾರವನ್ನ ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಆದ್ರೆ ಇದಕ್ಕೆ ಕಾರಣ ಏನೆಂದು ಯಾರಿಗೂ ತಿಳಿದಿಲ್ಲ. ಹಾಗಾಗಿ ಕೇರಳದ ಹೆಸರನ್ನ ಏಕೆ ಬದಲಾಯಿಸಲಾಯಿತು? ಇದರ ಹಿಂದಿನ ಕಾರಣಗಳೇನು ಮತ್ತು ಈ ಹೆಸರಿನ ಇತಿಹಾಸವೇನು? ಎಂಬುದನ್ನು ತಿಳಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

Kerala 4

`ಕೇರಳಂʼಗೆ ಪ್ರಯತ್ನ ಶುರುವಾಗಿದ್ದು ಎಲ್ಲಿಂದ?
ಭಾಷಾವಾರು ರಾಜ್ಯಗಳ ರಚನೆಯ ಸಂದರ್ಭದಲ್ಲಿ 1956ರ ನ.1 ರಂದು ಕೇರಳ ರಾಜ್ಯ ರಚನೆಯಾದ ದಿನವನ್ನ ‘ಕೇರಳ ಪಿರವಿ ದಿನ’ ಎಂದು ಆಚರಿಸಲಾಗುತ್ತದೆ. ಆಗ ಮಲಯಾಳಂ ಭಾಷೆಯಲ್ಲಿ ‘ಕೇರಳಂ’ ಎಂದೇ ಕರೆಯಲಾಗಿತ್ತು. ಆದರೆ ಸಂವಿಧಾನದ ಮೊದಲನೇ ಪರಿಚ್ಛೇದದಂತೆ ‘ಕೇರಳ’ ಎಂದು ದಾಖಲಾಯಿತು. ಆದರೆ ಸಂವಿಧಾನದ 3ನೇ ವಿಧಿಯಂತೆ ಕೇರಳವನ್ನ ʻಕೇರಳಂʼ ಮಾಡುವ ಪ್ರಯತ್ನ ಆರಂಭವಾಗಿದ್ದು 2024 ಜೂನ್‌ನಲ್ಲಿ. ಕೇರಳದ ವಿಧಾನಸಭೆಯಲ್ಲಿ ಒಕ್ಕೊರೊಲಿನಿಂದ ಅಲ್ಲಿನ ಶಾಸಕರು ಇದಕ್ಕೆ ಬೆಂಬಲ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದರು.

ನಂತರ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತು. ಕೇಂದ್ರವೂ ಅದಕ್ಕೆ ಸಮ್ಮತಿ ಸೂಚಿಸಿದೆ. ಇದರ ಆಧಾರದ ಮೇಲೆ ರಾಷ್ಟ್ರಪತಿ ಅವರು ಕೇರಳ ವಿಧಾನಸಭೆಯ ಮಸೂದೆ ಮೇಲೆ ಅದರ ಅಭಿಪ್ರಾಯವನ್ನು ಕೇಳಲಿದ್ದಾರೆ. ಪ್ರತಿಕ್ರಿಯೆ ನಂತರ ಕೇಂದ್ರ ಮುಂದಿನ ಹೆಜ್ಜೆ ಇಡಲಿದೆ. ರಾಷ್ಟ್ರಪತಿಯವರ ಶಿಫಾರಸಿನಂತೆ ಕೇರಳ (ಹೆಸರು ತಿದ್ದುಪಡಿ) ಮಸೂದೆಯು 2026ರಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗಲಿದೆ. ಅಲ್ಲಿ ಅಂಗೀಕಾರವಾದಲ್ಲಿ ಕೇರಳವು ಅಧಿಕೃತವಾಗಿ ‘ಕೇರಳಂ’ ಆಗಲಿದೆ.

ಭಾಷಾ ಗುರುತು ಮತ್ತು ಮಲಯಾಳಂ ಪ್ರಶ್ನೆ
ಕೇರಳವನ್ನು ‘ಕೇರಳಂ’ ಎಂದು ಕರೆಯಲು ವಿದೇಶಗಳಲ್ಲಿ ನೆಲೆಸಿರುವ ಮಲಯಾಳಿಗಳ ಬೆಂಬಲ ಹೆಚ್ಚಾಗಿದೆ. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಮಲಯಾಳಿಗಳು ಈಗಾಗಲೇ ‘ಕೇರಳಂ’ ಎಂದು ಕರೆಯಲು ಆರಂಭಿಸಿದ್ದಾರಂತೆ. ಒಟ್ಟಿನಲ್ಲಿ ಬಾಂಬೆ ʻಮುಂಬೈ’ ಆದಂತೆ, ಮದ್ರಾಸ್ ಅನ್ನು ʻಚೆನ್ನೈ’ ಎಂದು ಕರೆದಂತೆ ಮಲಯಾಳಿಗಳೂ ಬ್ರಿಟಿಷ್ ಆಡಳಿತದ ಹೆಸರಿನ ಸಂಕೋಲೆಯಿಂದ ಹೊರಬರಲು ನಿರ್ಧರಿಸಿದ್ದಾರೆ. ನಾವು ಹೇಗೆ ಮಾತನಾಡುತ್ತೇವೋ ಜಗತ್ತು ಅದನ್ನೇ ಅನುಸರಿಸುತ್ತದೆ ಎಂಬುದು ಮಲಯಾಳಿಗಳ ವಾದ.

Keralam 2

ಕೇರಳಕ್ಕೆ ಪರಶುರಾಮನ ನಂಟು
ವಿಷ್ಣುವಿನ 6ನೇ ಅವತಾರವಾದ ಪರಶುರಾಮನಿಗೂ ಕೇರಳಕ್ಕೂ ನೇರ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕೇರಳಪೋತಿ (ಕೇರಳ ಜಾನಪದ ಕಥೆಗಳ ಸಂಗ್ರಹ) ಸೇರಿದಂತೆ ಹಲವಾರು ಪುರಾಣಗಳಲ್ಲಿ ಪರಶುರಾಮನ ಕಥೆಯನ್ನು ಉಲ್ಲೇಖಿಸಲಾಗಿದೆ. ಕ್ಷತ್ರಿಯರನ್ನು ಸಂಹರಿಸಿದ ಪಾಪ ಪರಿಹಾರಕ್ಕಾಗಿ ಇಡೀ ಭೂಮಿಯನ್ನ ಶಿವನಿಗೆ ದಾನ ಮಾಡುತ್ತಾನೆ. ಇದರಿಂದ ಅವನು ಭೂಮಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಬಳಿಕ ಪರಶುರಾಮನು ತಪಸ್ಸು ಆಚರಣೆಗಾಗಿ ಸ್ವಲ್ಪ ಭೂಮಿಯನ್ನು ಕೇಳುತ್ತಾನೆ. ಆದ್ರೆ ದಾನ ಮಾಡಿದ ಯಾವುದೇ ಭೂಮಿಯನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಶಿವ ಹೇಳುತ್ತಾನೆ. ಆಗ ವರುಣದೇವ ಪರಶುರಾಮನನ್ನ ಸಮುದ್ರ ತೀರಕ್ಕೆ ಕರೆದೊಯ್ದು, ಇಲ್ಲಿಂದ ನಿನಗೆ ಬೇಕಾದಷ್ಟು ಭೂಮಿಯನ್ನ ತೆಗೆದುಕೋ, ಆ ಜಾಗದಿಂದ ಸಮುದ್ರವು ಹಿಂದೆ ಸರಿಯುತ್ತದೆ ಎಂದು ಹೇಳುತ್ತಾನೆ. ಆಗ ಪರಶುರಾಮನು ತನ್ನ ಕೊಡಲಿಯನ್ನು ಎಸೆಯುತ್ತಾನೆ. ಕೊಡಲಿ ಬಿದ್ದ ಜಾಗದಿಂದೆಲ್ಲಾ ಸಮುದ್ರ ಹಿಂದೆ ಸರಿಯುತ್ತದೆ, ಒಂದು ಸ್ಥಳ ನಿರ್ಮಾಣವಾಗುತ್ತದೆ. ಅದೇ ಇಂದಿನ ಕೇರಳ (ಕೇರಳಂ) ಎಂದು ಕರೆಯಲಾಗುತ್ತದೆ. ಇದರ ಅರ್ಥ ನೀರು ಮತ್ತು ಆಲಂ ಅಂತ. ಆಲಂ ಎಂದ್ರೆ ಭೂಮಿ. ಅಂದ್ರೆ ನೀರಿನಿಂದ ಹೊಮ್ಮಿದ ಭೂಮಿ ಅನ್ನೋದು ಸ್ಥಳ ಪುರಾಣದ ಕಥೆ.

ಅಶೋಕನ ಶಾಸನಗಳಲ್ಲೂ ʻಕೇರಳಪುತ್ರʼ ಉಲ್ಲೇಖ
ಪುರಾಣದಿಂದ ಇತಿಹಾಸದ ಕಡೆಗೆ ಚಲಿಸುತ್ತಾ ಹೋದಂತೆ ಕೇರಳದ ಕುರಿತು ಇನ್ನಷ್ಟು ಅಚ್ಚರಿ ಸಂಗತಿಗಳನ್ನ ಗಮನಿಸಬಹುದು. ʻಕೇರಳʼ ಹೆಸರಿನ ಆರಂಭಿಕ ಪುರಾವೆಗಳು ಕ್ರಿ.ಪೂ. 3ನೇ ಶತಮಾನದ ಮೌರ್ಯ ಚಕ್ರವರ್ತಿ ಅಶೋಕನ ಶಾಸನಗಳಲ್ಲಿ ಕಂಡುಬರುತ್ತವೆ. ಇತಿಹಾಸಕಾರ ಡಿ.ಸಿ. ಸರ್ಕಾರ್ ತಮ್ಮ ಸಂಶೋಧನೆಯಲ್ಲಿ ʻಕೇರಳಪುತ್ರʼ ಎಂಬ ಹೆಸರು ಅಶೋಕನ ಶಾಸನಗಳಲ್ಲಿ ಕಂಡುಬರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಇದರ ಅರ್ಥ ʻಕೇರಳದ ಮಗʼ ಅಥವಾ ʻಕೇರಳದ ಆಡಳಿತಗಾರʼ. ಇತಿಹಾಸಕಾರ ಆರ್.ಸಿ. ಮಜುಂದಾರ್ ತಮ್ಮ ʻಪ್ರಾಚೀನ ಭಾರತʼ ಪುಸ್ತಕದಲ್ಲಿ ʻಕೇರಳಪುತ್ರʼ ಎಂಬ ಪದ ಮತ್ತು ವಿಳಾಸವನ್ನು ಉಲ್ಲೇಖಿಸಿದ್ದಾರೆ.

Kerala 3

ಚೇರ ರಾಜವಂಶ ಮತ್ತು ಕೇರಳ ಪದದ ಐತಿಹಾಸಿಕ ಪಯಣ
ಪ್ರಾಚೀನ ದಕ್ಷಿಣ ಭಾರತದ ಇತಿಹಾಸದ ಪರಿಣಿತರಾದ ಕೆ.ಎ. ನೀಲಕಂಠ ಶಾಸ್ತ್ರಿ ಅವರು ತಮ್ಮ ʻಎ ಹಿಸ್ಟರಿ ಆಫ್ ಸೌತ್ ಇಂಡಿಯಾ’ ಪುಸ್ತಕದಲ್ಲಿ ಚೇರ, ಚೋಳ ಮತ್ತು ಪಾಂಡ್ಯ ರಾಜವಂಶಗಳನ್ನ ಕುರಿತು ಉಲ್ಲೇಖಿಸಿದ್ದಾರೆ. ಇದು ‘ಕೇರಳ’ ಎಂಬ ಹೆಸರನ್ನ ಚೇರ ರಾಜವಂಶಕ್ಕೆ ಸಂಬಂಧಿಸಿರಬಹುದು ಎಂದು ಸೂಚಿಸುತ್ತದೆ. ಚೇರ ಆಡಳಿತಗಾರರ ಪ್ರದೇಶವನ್ನ ಕಾಲಾನಂತರದಲ್ಲಿ ʻಚೇರಲಂ’ ಎಂದು ಕರೆಯಲಾಗುತ್ತಿತ್ತು ಮತ್ತು ಇದು ʻಕೇರಳ’ವಾಗಿ ವಿಕಸನಗೊಂಡಿತು ಎಂದು ಶಾಸ್ತ್ರಿ ವಾದಿಸುತ್ತಾರೆ. ಹಾಗಾಗಿಯೇ ʻಚೇರ’ ದಿಂದ ʻಕೇರ’ ಆಗಿ ನಂತರ ʻಕೇರಳʼ ಆಗಿದೆ ಅನ್ನೋದು ಇತಿಹಾಸಕಾರರ ಉಲ್ಲೇಖ.

ಇನ್ನೂ ಭೌಗೋಳಿಕ ಸಂಗತಿಗಳನ್ನ ಚರ್ಚಿಸುವಾಗ ಮತ್ತೊಂದು ಸಂಗತಿ ಬಲವಾಗಿ ಕಾಣುತ್ತದೆ. ಕೇರಳವು ʻಚರಲ್ʼ (ಪರ್ವತ ಇಳಿಜಾರು) ಪದದಿಂದ ಹುಟ್ಟಿಕೊಂಡಿದೆ ಎಂದು ಇಲ್ಲಿನ ಕೆಲವರು ನಂಬುತ್ತಾರೆ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳು ಕೇರಳದ ಭೌಗೋಳಿಕತೆಯ ಪ್ರಮುಖ ಭಾಗವಾಗಿದೆ. ಸಮುದ್ರದ ಕಡೆಗೆ ಅವುಗಳ ಇಳಿಜಾರು ಮತ್ತು ನಂತರ ಕರಾವಳಿಯ ಕಡೆಗೆ ವಿಸ್ತರಿಸಿರುವ ವಿಶಾಲವಾದ ಬಯಲು ಪ್ರದೇಶಗಳು ಚೇರಲ್, ಚೇರಲ, ಚೇರಲಂ ಮತ್ತು ಕೇರಳಂನ ಪ್ರಯಾಣಕ್ಕೆ ಹೊಂದಿಕೆಯಾಗುತ್ತವೆ.

ಹೀಗಾಗಿ, ʻಕೇರಳ’ ಕೇವಲ ಭೌಗೋಳಿಕ ಹೆಸರಲ್ಲ, ಆದರೆ 2,000 ವರ್ಷಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಾ ಪ್ರಯಾಣದ ಫಲಿತಾಂಶವಾಗಿದೆ.

Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
8 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
8 hours ago
Iran Foreign Minister Abbas Araghchi
Latest

ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Public TV
By Public TV
8 hours ago
Abhishek Sharma 1
Cricket

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

Public TV
By Public TV
8 hours ago
Caste Census
Bengaluru City

ಜನಗಣತಿಗೆ ಗೈರಾದ್ರೆ ಕಠಿಣ ಕ್ರಮ – 1 ಸಾವಿರ ದಂಡದೊಂದಿಗೆ 3 ವರ್ಷ ಜೈಲು

Public TV
By Public TV
9 hours ago
Narendra Modi
Latest

ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?