ಟೆಹ್ರಾನ್: ಚೀನಾದ (China) ಶಸ್ತ್ರಾಸ್ತಗಳನ್ನು ಬಲವಾಗಿ ನಂಬಿದ್ದರಿಂದ ಇರಾನ್ (Iran) ಸರ್ವೋಚ್ಛ ನಾಯಕ ಖಮೇನಿ(Ayatollah Khamenei) ಪ್ರಾಣ ಕಳೆದುಕೊಂಡರೇ ಎಂಬ ಪ್ರಶ್ನೆ ಈಗ ಎದ್ದಿದೆ.
ಹೌದು. ಇರಾನ್ ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದರೂ ಕ್ಷಿಪಣಿಗಳನ್ನು, ಯುದ್ಧ ವಿಮಾನಗಳ ದಾಳಿಯನ್ನು ತಡೆಯುವ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿರಲಿಲ್ಲ. ತನ್ನ ಬಳಿ ಈ ವ್ಯವಸ್ಥೆ ಇಲ್ಲದ ಕಾರಣ ಈ ಹಿಂದೆ ರಷ್ಯಾದಿಂದ S-300PMU-2 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿತ್ತು. ಹೀಗಿದ್ದರೂ 2025 ಜೂನ್‌ನಲ್ಲಿ ಅಮೆರಿಕ (USA) ಮತ್ತು ಇಸ್ರೇಲ್(Israel) ಇರಾನಿನ ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.
ತನ್ನ ನೆಲೆಯ ಮೇಲೆ ನಡೆದ ದಾಳಿ ವೇಳೆ ಇಸ್ರೇಲ್, ಅಮೆರಿಕದ ಯುದ್ಧ ವಿಮಾನಗಳನ್ನು ಸರಿಯಾಗಿ ಗುರುತಿಸದ್ದಕ್ಕೆ ಇತ್ತೀಚಿಗೆ ಚೀನಾ (China) ನಿರ್ಮಿತ HQ-9B ವಾಯು ರಕ್ಷಣಾ ವ್ಯವಸ್ಥೆಯನ್ನು ಇರಾನ್ ಖರೀದಿಸಿತ್ತು.
ಚೀನಾ ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೋರೇಷನ್ HQ-9B ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆ. ಇದು 200 ಕಿಮೀ ವ್ಯಾಪ್ತಿಯ ಗುರಿಗಳನ್ನು ಪತ್ತೆ ಮಾಡುತ್ತದೆ ಮತ್ತು ಫೈಟರ್ ಜೆಟ್‌ಗಳು, ಬಾಂಬರ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಕಡಿಮೆ-ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಣೆ ನೀಡುತ್ತದೆ ಎಂದು ಚೀನಾ ಹೇಳಿತ್ತು. ಚೀನಾ HQ-9B ವ್ಯವಸ್ಥೆಯನ್ನು ಬೀಜಿಂಗ್, ಟಿಬೆಟ್ ಮತ್ತು ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ನಿಯೋಜಿಸಿದೆ. ಇದನ್ನೂ ಓದಿ: 15 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ

ಭವಿಷ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಮೊದಲೇ ಊಹಿಸಿದ್ದ ಇರಾನ್ ಚೀನಾದಿಂದ HQ-9B ಏರ್ ಡಿಫೆನ್ಸ್ ಸಿಸ್ಟಂ ಖರೀದಿಸಿತ್ತು. ಆದರೆ ಈ ವಾಯು ರಕ್ಷಣಾ ವ್ಯವಸ್ಥೆ ಯುದ್ಧ ವಿಮಾನಗಳನ್ನು ಗುರುತಿಸಲು ವಿಫಲವಾಗಿದ್ದು ಇರಾನ್ ಸರ್ವೋಚ್ಛ ನಾಯಕ ಖಮೇನಿಯೇ ಸೇರಿದಂತೆ ಟಾಪ್ ಕಮಾಂಡರ್‌ಗಳು ಇಸ್ರೇಲ್, ಅಮೆರಿಕ ದಾಳಿಗೆ ಹತರಾಗಿದ್ದಾರೆ. ಇದನ್ನೂ ಓದಿ: ಇರಾನ್ ವಿರುದ್ಧ ಹೋರಾಟದಲ್ಲಿ ಮುಸ್ಲಿಮ್ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿದ್ದು ಯಾಕೆ?
ಈ ಹಿಂದೆ ಇರಾನ್ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯ ಅಬೋಲ್ಫಜ್ಲ್ ಜೊಹ್ರೆವಾಂಡ್ ಚೀನಾ ತನ್ನ HQ-9 ವ್ಯವಸ್ಥೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದರು. ಆದರೆ ಚೀನಾ HQ-9 ವಿತರಣೆ ಮಾಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದೆ. ಆದರೆ ಈಗ ಹಲವು ಮಾಧ್ಯಮಗಳು ಇರಾನ್‌ನಲ್ಲಿ ನಿಯೋಜಿಸಿದ್ದ HQ-9 ವ್ಯವಸ್ಥೆ ದಾಳಿ ತಡೆಯುವಲ್ಲಿ ವಿಫಲವಾಗಿದೆ ಎಂದು ವರದಿ ಮಾಡಿವೆ.

ಆಪರೇಷನ್ ಸಿಂಧೂರದ ವೇಳೆಯೂ ವಿಫಲ
ಚೀನಾ ಪಾಕಿಸ್ತಾನಕ್ಕೆ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಿತ್ತು. ಆದರೆ ಭಾರತ ಬ್ರಹ್ಮೋಸ್ ಕ್ಷಿಪಣಿ ಹಾರಿಸಿ ಈ HQ-9 ವ್ಯವಸ್ಥೆಯನ್ನೇ ಧ್ವಂಸ ಮಾಡಿ ಪಾಕ್ ಮಿಲಿಟರಿ ಮತ್ತು ವಾಯು ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿತ್ತು. ಪಾಕಿಸ್ತಾನವೂ ಡ್ರೋನ್ ಮತ್ತು ಕ್ಷಿಪಣಿಯನ್ನು ಭಾರತಕ್ಕೆ ಹಾರಿಸಿತ್ತು. ಆದರೆ ಭಾರತದ ಸ್ವದೇಶಿ ನಿರ್ಮಿತ ಆಕಾಶ್ ವ್ಯವಸ್ಥೆ ಮತ್ತು ರಷ್ಯಾದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಎಲ್ಲವನ್ನು ಆಕಾಶದಲ್ಲೇ ಛಿದ್ರ ಮಾಡಿತ್ತು. ಇದನ್ನೂ ಓದಿ: 30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್ ರೂಪಿಸಿದ್ದ ರಣತಂತ್ರ ಹೇಗಿತ್ತು?

ದಾಳಿಯ ಸಮಯದಲ್ಲಿ ಯಂತ್ರಗಳು ಬಹಳ ಮುಖ್ಯ. ಯಂತ್ರಗಳ ಜೊತೆ ಇವುಗಳನ್ನು ನಿರ್ವಹಣೆ ಮಾಡುವವರು ಸಹ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆಪರೇಷನ್ ಸಿಂಧೂರದ ಸಮಯದಲ್ಲಿ 20 ವರ್ಷದ ಸುಮಾರು 3 ಸಾವಿರ ಅಗ್ನಿವೀರರು ಏರ್ ಡಿಫೆನ್ಸ್‌ನಲ್ಲಿ ವಿಭಾಗದಲ್ಲಿ ಕೆಲಸ ಮಾಡಿ ಯಶಸ್ವಿಯಾಗಿ ಪಾಕ್ ಡ್ರೋನ್ ಮತ್ತು ಕ್ಷಿಪಣಿಗಳನ್ನು ಧ್ವಂಸ ಮಾಡಿ ದೇಶವನ್ನು ರಕ್ಷಿಸಿದ್ದರು.

