ಬೆಂಗಳೂರು: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರಿಯಕರ ವಿಡಿಯೋ ಮಾಡಿ, ಡೆತ್‌ನೋಟ್ ಬರೆದಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್‌ನಲ್ಲಿ (Anekal) ನಡೆದಿದೆ.
ಒರಿಸ್ಸಾ ಮೂಲದ ಮಂಜುಳಾ ಮತ್ತು ದೀಪಾಂಕ್ ಆತ್ಮಹತ್ಯೆ ಮಾಡಿಕೊಂಡ ಜೋಡಿ. ದೀಪಾಂತ್‌ಗೆ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೂ, ಮತ್ತೊಂದು ಮದುವೆಯಾಗಿ ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇಬ್ಬರು ಕಳೆದ 15 ದಿನಗಳ ಹಿಂದೆ ಒರಿಸ್ಸಾದಿಂದ ಬಂದು ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದ ಲವಕುಶ ಲೇಔಟ್‌ನಲ್ಲಿ ವಾಸವಾಗಿದ್ದರು. ಹೊಟ್ಟೆಪಾಡಿಗಾಗಿ ಗಂಡ ಬೊಮ್ಮಸಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಮಂಜುಳ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಆಂಧ್ರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 18 ಮಂದಿ ದುರ್ಮರಣ
ಇದೇ ಮಂಗಳವಾರ ರಾತ್ರಿ ದೀಪಾಂತ್ ಹಾಗೂ ಪತ್ನಿ ಮಂಜುಳಾ ನಡುವೆ ಜಗಳವಾಗಿದೆ. ಜಗಳದಿಂದ ಮನನೊಂದಿದ್ದ ಮಂಜುಳ, ದೀಪಾಂಕ್ ಹೊರಗಡೆ ಹೋಗಿದ್ದಾಗ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದಿಂದ ಬಂದ ಗಂಡ ದೀಪಾಂಕ್ ಪತ್ನಿ ಶವ ನೋಡಿ ಗಾಬರಿಯಾಗಿದ್ದಾನೆ. ಶವದ ಮುಂದೆ ಅಳುತ್ತಲೇ ವಿಡಿಯೋ ಮಾಡಿ ಡೆತ್‌ನೋಟ್ ಬರೆದಿಟ್ಟು ತಾನು ನೇಣಿಗೆ ಶರಣಾಗಿದ್ದಾನೆ.
ಸೂರ್ಯನಗರ ಪೊಲೀಸರು ಎರಡು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಅತ್ತಿಬೆಲೆ ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಮಲ್ಲೇಶ್‌ಗೌಡ ಸೂರ್ಯನಗರ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

