– ರಾಜ್ಯದ ಜನ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಕಾಯುತ್ತಿದ್ದಾರೆ
ಹಾವೇರಿ: ಕರ್ನಾಟಕ ಕಾಂಗ್ರೆಸ್ (Karnataka Congress) ಸರ್ಕಾರದ ಕುಸ್ತಿಯ ಗುದ್ದಾಟ ಬಜೆಟ್ (Budget) ನಂತರ ಅಂತಿಮ ಘಟ್ಟಕ್ಕೆ ತಲುಪಲಿದೆ. ಅದು ಕಾದಾಟವೇ ಆಗಲಿದೆ. ಸಂಧಾನ ಆಗಲು ಸಾಧ್ಯವಿಲ್ಲ. ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಮೇಲೆ ಜನರ ವಿಶ್ವಾಸ ಸಂಪೂರ್ಣ ಹೋಗಿದೆ. ಜನ ಈ ಸರ್ಕಾರ ಕಿತ್ತೊಗೆಯಲು ಕಾಯುತ್ತಿದ್ದಾರೆ. ಈಗ ಅದರ ಕಾವು ಶಾಸಕರಿಗೆ ಮುಟ್ಟುತ್ತಿದೆ. ಅನಿಶ್ಚಿತತೆಯ ವಾತಾವರಣ ಬಹಳ ದಿನ ಅದರ ತಾವು ಮತ್ತೊಮ್ಮೆ ಆರಿಸಿ ಬರುವುದಿಲ್ಲ ಎನ್ನುವ ಆತಂಕ ಶಾಸಕರಿಗಿದೆ. ಕೆಲವರು ವಿದೇಶಕ್ಕೆ ಕೆಲವರು ರೆಸಾರ್ಟ್ಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಲು ಯಾವುದೇ ಶಕ್ತಿ ಇಲ್ಲ. ಬರುವಂತಹ ದಿನಗಳಲ್ಲಿ ಇವರನ್ನು ಜನರು ಫಾರಿನ್ನಿಗಾದರೂ, ದೆಹಲಿಗಾದರೂ ಕರ್ನಾಟಕದ ಚುಕ್ಕಾಣಿಯನ್ನು ಕೈಬಿಡಿಸಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಆಂಧ್ರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 18 ಮಂದಿ ದುರ್ಮರಣ
ಶಿವಮೊಗ್ಗದಲ್ಲಿ ನಡೆದ ಅಪ್ರಾಪ್ತ ಬಾಲಕನ ಕೊಲೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದ ಘಟನೆ ಅತ್ಯಂತ ಮನಸಿಗೆ ನೋವಾಗುವಂತದ್ದು. ಸಣ್ಣ ವಯಸ್ಸಿನಲ್ಲಿ ಗಾಂಜಾ ಸೇದಿದ್ದಾರೆ ಎನ್ನುವ ಸಂಶಯ ಶುರುವಾಗಿದೆ. ಕರ್ನಾಟಕದಲ್ಲಿ ಗಾಂಜಾ ಬಳಕೆ ಶಾಲೆ ಮಟ್ಟಕ್ಕೆ ಹೋಗಿದೆ ಎಂದು ನಾವು ಹೇಳುತ್ತಿದ್ದೆವು, ಅದು ಸತ್ಯವಾಗಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಈ ರೀತಿಯ ಕೋಮು ಭಾವನೆ ಮೂಡಿದರೆ ಸಮಾಜ ಮುಂದೆ ಹೇಗೆ ಹೋಗುತ್ತದೆ. ಇವರು ಕೇವಲ ಕುರ್ಚಿ ಸಲುವಾಗಿ ಕಚ್ಚಾಡುತ್ತಾ ಕುಳಿತರೆ ಸಮಾಜ ಹೇಗೆ ನಡೆಯುತ್ತದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಅಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯ ಕಾಯ್ದುಕೊಂಡು ಹೋಗಲು ವಿಫಲವಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕರ್ನಾಟಕವನ್ನು ಪಾಪರ್ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್

