Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 16 ಎಸೆತಗಳಲ್ಲಿ 44 ರನ್‌ – ಇಂಗ್ಲೆಂಡಿಗೆ ರೋಚಕ ಜಯ, ಸೋತರೂ ನ್ಯೂಜಿಲೆಂಡಿಗಿದೆ ಸೆಮಿ ಅವಕಾಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | 16 ಎಸೆತಗಳಲ್ಲಿ 44 ರನ್‌ – ಇಂಗ್ಲೆಂಡಿಗೆ ರೋಚಕ ಜಯ, ಸೋತರೂ ನ್ಯೂಜಿಲೆಂಡಿಗಿದೆ ಸೆಮಿ ಅವಕಾಶ

Cricket

16 ಎಸೆತಗಳಲ್ಲಿ 44 ರನ್‌ – ಇಂಗ್ಲೆಂಡಿಗೆ ರೋಚಕ ಜಯ, ಸೋತರೂ ನ್ಯೂಜಿಲೆಂಡಿಗಿದೆ ಸೆಮಿ ಅವಕಾಶ

Public TV
Last updated: February 27, 2026 11:18 pm
Public TV
Share
3 Min Read
Rehan Ahmed Will Jacks
SHARE

ಕೊಲಂಬೋ: ಕೊನೆಯಲ್ಲಿ ರೆಹಾನ್‌ ಅಹ್ಮದ್‌ (Rehan Ahmed ) ಮತ್ತು ವಿಲ್‌ ಜಾಕ್ಸ್‌ (Will Jacks) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಸೂಪರ್‌ 8 ಪಂದ್ಯದಲ್ಲಿ ನ್ಯೂಜಿಲೆಂಡ್‌(New Zealand) ವಿರುದ್ಧ ಇಂಗ್ಲೆಂಡ್‌(England) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 7 ವಿಕೆಟ್‌ಗೆ 159 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನೂ 3 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ಜಯ ಸಾಧಿಸಿದೆ.

ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಇಂಗ್ಲೆಂಡ್‌ ಗ್ರೂಪ್‌ ಎರಡರಲ್ಲಿ 6 ಅಂಕ ಸಂಪಾದಿಸಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಈ ಪಂದ್ಯವನ್ನು ಸೋತಿದ್ದರೂ ನ್ಯೂಜಿಲೆಂಡ್‌ ಸೆಮಿ ಆಸೆ ಇನ್ನೂ ಜೀವಂತವಾಗಿದೆ.

ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಾಕ್‌ ಭಾರೀ ಅಂತರದಿಂದ ಗೆದ್ದರಷ್ಟೇ ಸೆಮಿ ಫೈನಲ್‌ ಪ್ರವೇಶಲಿದೆ. ಇಲ್ಲದಿದ್ದರೆ ನ್ಯೂಜಿಲೆಂಡ್‌ ಸೆಮಿಗೆ ಅರ್ಹತೆ ಪಡೆಯಲಿದೆ.

Comeback against New Zealand ✅
Unbeaten in the Super 8 stage ✅

All eyes on Sri Lanka vs Pakistan – the decider for the second semi-final spot 🇳🇿 🇵🇰🔥

Up next: ICC Men’s #T20WorldCup 2026 👉 SUPER 8 | #SLvPAK | SAT, 28th FEB, 6 PM pic.twitter.com/SXrr8Ilg1n

— Star Sports (@StarSportsIndia) February 27, 2026

ಕೊನೆಯ 18 ಎಸೆತಗಳಲ್ಲಿ ಇಂಗ್ಲೆಂಡಿಗೆ 43 ರನ್‌ ಬೇಕಿದ್ದಾಗ ಪಂದ್ಯ ನ್ಯೂಜಿಲೆಂಡ್‌ ಪರವೇ ಇತ್ತು. ಆದರೆ ಫಿಲಿಪ್ಸ್‌ ಎಸೆದ 18ನೇ ಓವರ್‌ನಲ್ಲಿ 22 ರನ್‌ ಬಂದಾಗ ಪಂದ್ಯ ನ್ಯೂಜಿಲೆಂಡ್‌ನಿಂದ ಜಾರಲು ಆರಂಭವಾಯಿತು. ನಾಯಕ ಸ್ಯಾಟ್ನರ್‌ ಎಸೆದ 19ನೇ ಓವರ್‌ನಲ್ಲಿ 16 ರನ್‌ ಬಂದಾಗ ಇಂಗ್ಲೆಂಡ್‌ ಗೆಲುವು ಖಚಿತವಾಯಿತು. ಕೊನೆಯ ಓವರ್‌ನಲ್ಲಿ 5 ರನ್‌ ಬೇಕಿತ್ತು. ಮೊದಲ ಎರಡು ಎಸೆತಗಳಲ್ಲಿ ಸಿಂಗಲ್‌ ರನ್‌ ಬಂದರೆ ಮೂರನೇ ಎಸೆತದಲ್ಲಿ ಕೀಪರ್‌ ಹಿಂದೆ ಬೌಂಡರಿ ಹೋದ ಕಾರಣ ಇಂಗ್ಲೆಂಡ್‌ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತು.

ವಿಲ್‌ ಜಾಕ್ಸ್‌ ಮತ್ತು ರೆಹಾನ್‌ ಅಹ್ಮದ್‌ ಮುರಿಯದ 7ನೇ ವಿಕೆಟಿಗೆ 16 ಎಸೆತಗಳಲ್ಲಿ 44 ರನ್‌ ಚಚ್ಚಿದ್ದರು. ವಿಲ್‌ ಜಾಕ್ಸ್‌ 32 ರನ್‌(18 ಎಸೆತ, 4 ಬೌಂಡರಿ, 1 ಸಿಕ್ಸ್‌), ರೆಹಾನ್‌ ಅಹ್ಮದ್‌ 19 ರನ್‌(7 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಉಳಿದಂತೆ ಇಂಗ್ಲೆಂಡ್‌ ಪರವಾಗಿ ಟಾಮ್ ಬ್ಯಾಂಟನ್ 33 ರನ್‌, ಸ್ಯಾಮ್‌ ಕರ್ರನ್‌ 24 ರನ್‌, ನಾಯಕ ಹ್ಯಾರಿ ಬ್ರೂಕ್‌ 26 ರನ್‌ ಹೊಡೆದರು.

ನ್ಯೂಜಿಲೆಂಡ್‌ ಪರವಾಗಿ ಗ್ಲೇನ್‌ ಫಿಲಿಪ್ಸ್‌ 39 ರನ್‌, ಟಿಮ್ ಸೀಫರ್ಟ್35 ರನ್‌, ಫಿನ್‌ ಅಲೆನ್‌ 29 ರನ್‌ ಹೊಡೆದರು. ಕೊನೆಯ 30 ಎಸೆತಗಳಲ್ಲಿ ನ್ಯೂಜಿಲೆಂಡ್‌ ಕೇವಲ 34 ರನ್‌ ಹೊಡೆದಿದ್ದು ಮುಳುವಾಯಿತು.

UNBELIEVABLE! 🤯

England are two down, but the skipper is playing a different game altogether. 🔥

ICC Men’s #T20WorldCup, SUPER 8, #ENGvNZ | LIVE NOW ➡️ https://t.co/ueqfaabxcO pic.twitter.com/V04ipszmPY

— Star Sports (@StarSportsIndia) February 27, 2026

 

ಪಾಕಿಗೆ ಹೇಗೆ ಅವಕಾಶ?
ನ್ಯೂಜಿಲೆಂಡ್‌ 1.390 ನೆಟ್‌ ರನ್‌ ರೇಟ್‌ನೊಂದಿಗೆ 3 ಅಂಕ ಪಡೆದಿದ್ದರೆ ಶ್ರೀಲಂಕಾ 0.461 ರನ್‌ ರೇಟ್‌ನೊಂದಿಗೆ 1 ಅಂಕ ಪಡೆದಿದೆ. ಶನಿವಾರ ಶ್ರೀಲಂಕಾ ಮತ್ತು ಪಾಕ್‌ ಮಧ್ಯೆ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿ 65 ರನ್‌ಗಳಿಂದ ಜಯಗಳಿಸಿದರೆ ಅಥವಾ ಚೇಸ್‌ ಮಾಡಿ 13 ಓವರ್‌ಗಳ (150  ರನ್‌ ಗುರಿ) ಒಳಗಡೆ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್‌ ಪ್ರವೇಶ ಮಾಡಲಿದೆ. ಈ ರೀತಿಯ ಜಯ ಸಿಗದೇ ಇದ್ದರೆ ನ್ಯೂಜಿಲೆಂಡ್‌ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.  ಶ್ರೀಲಂಕಾ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದ ಕಾರಣ ಗೆದ್ದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಶ್ರೀಲಂಕಾದ ಸೋಲಿನ ಅಂತರದ ಮೇಲೆ ನ್ಯೂಜಿಲೆಂಡ್‌ ಸೆಮಿ ಭವಿಷ್ಯ ನಿಂತಿದೆ.

 

It all boils down to this in Group 2 🔥

What are your predictions for tomorrow? 👀

ICC Men’s #T20WorldCup 2026 👉 SUPER 8 | #SLvPAK | SAT, 28th FEB, 6 PM pic.twitter.com/Gbn4NrcqUr

— Star Sports (@StarSportsIndia) February 27, 2026

TAGGED:ಇಂಗ್ಲೆಂಡ್ಟಿ20 ವಿಶ್ವಕಪ್ನ್ಯೂಜಿಲೆಂಡ್ಪಾಕಿಸ್ತಾನ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Sadiq Pailwan 1
Bengaluru City

ನಮ್ಮ ಕ್ಷೇತ್ರದಲ್ಲಿ ಸಮರ್ಥ್‌ರನ್ನು ಗೆಲ್ಲಿಸುತ್ತೇವೆ – ಉಪಕದನದಿಂದ ಹಿಂದೆ ಸರಿದ ಪೈಲ್ವಾನ್‌

Public TV
By Public TV
17 seconds ago
Four drown in Tungabhadra river near Kandakur in Kosagi mandal of Andhra Pradesh
Crime

ಆಂಧ್ರಪ್ರದೇಶ | ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣ

Public TV
By Public TV
44 minutes ago
Siddaramaiah DK Shivakumar Randeep Surjewala
Bengaluru City

ಕರ್ನಾಟಕ, ತಮಿಳುನಾಡಿಗೆ ಕಳುಹಿಸಿಲ್ಲ ಯಾಕೆ? ಗುಜರಾತಿಗೆ ಯಾಕೆ ತೈಲ ಟ್ಯಾಂಕರ್‌ ಹೋಗಬೇಕಿತ್ತು?- ಡಿಕೆಶಿ ಕಿಡಿ

Public TV
By Public TV
46 minutes ago
Reliance Industries
Latest

ಕೇಂದ್ರದ ನಿರ್ಧಾರದಿಂದ ಇಂದು ಒಂದೇ ದಿನ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ 87 ಸಾವಿರ ಕೋಟಿ ಕುಸಿತ

Public TV
By Public TV
2 hours ago
rama navami special worship to the lord rama in mantralayam
Districts

ಮಂತ್ರಾಲಯದಲ್ಲಿ ರಾಮನವಮಿ ಸಂಭ್ರಮ – ಮೂಲ ರಾಮದೇವರಿಗೆ ವಿಶೇಷ ಪೂಜೆ

Public TV
By Public TV
2 hours ago
milk producers association secretary commits suicide in tarikere
Chikkamagaluru

ತರೀಕೆರೆ | ಹಿಂದಿನ ದಾಖಲೆ ಕೇಳಿ ಮಾನಸಿಕ ಕಿರುಕುಳ ಆರೋಪ – ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?