ಚೆನ್ನೈ: ಬ್ಯಾಟಿಂಗ್‌ನಲ್ಲಿ ಪರಾಕ್ರಮ ತೋರಿದ ಟೀಂ ಇಂಡಿಯಾ ಜಿಂಬಾಬ್ವೆಗೆ (India vs Zimbabwe) 257 ಬೃಹತ್ ಮೊತ್ತದ ಗುರಿ ನೀಡಿದೆ.
ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತು. ಹಿಂದಿನ ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದ ಅಭಿಷೇಕ್ ಶರ್ಮಾ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದಂತೆ ಕಂಡಿತು. 30 ಬಾಲ್‌ಗೆ ತಲಾ 4 ಫೋರ್ ಮತ್ತು ಸಿಕ್ಸರ್ ಸಿಡಿಸಿ ಅರ್ಧಶತಕ (55 ರನ್) ಗಳಿಸಿದರು.
ರಿಂಕು ಸಿಂಗ್ ಬದಲಿ ಆಟಗಾರನಾಗಿ ಆಡಿದ ಸಂಜು ಸ್ಯಾಮ್ಸನ್ 24, ಇಶಾನ್ ಕಿಶನ್ 38, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ 33, ಹಾರ್ದಿಕ್ ಪಾಂಡ್ಯ ಔಟಾಗದೇ 23 ಬಾಲ್‌ಗೆ 50 ರನ್ ಹಾಗೂ ತಿಲಕ್ ವರ್ಮಾ ಔಟಾಗದೇ 44 ರನ್ ಗಳಿಸಿದರು. ಅಂತಿಮವಾಗಿ ತಂಡವು 20 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.
ಜಿಂಬಾಬ್ವೆ ಪರ ರಿಚರ್ಡ್ ನ್ಗರವಾ, ಬ್ಲೆಸ್ಸಿಂಗ್ ಮುಜರಬಾನಿ, ಟಿನೋಟೆಂಡಾ ಮಾಪೋಸಾ, ಸಿಕಂದರ್ ರಾಝಾ ತಲಾ 1 ವಿಕೆಟ್ ಪಡೆದರು.

