ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ದಲಿತ ಸಿಎಂ ಚರ್ಚೆಗೆ ಬಲ ಬರುತ್ತಿದೆ. ಈ ಬೆನ್ನಲ್ಲೇ ಅಖಾಡಕ್ಕೆ ಗೃಹ ಸಚಿವ ಪರಮೇಶ್ವರ್ (G Parameshwar) ಅಖಾಡಕ್ಕೆ ಇಳಿದಿದ್ದಾರೆ. ಸಿಎಂ (CM) ಆಗಲು ತಾವೂ ಸಮರ್ಥರು, ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿ ಅಂತ ಪರಮೇಶ್ವರ್ ಪರೋಕ್ಷ ಸಂದೇಶ ನೀಡಿದ್ದಾರೆ.
ದಲಿತ ಸಿಎಂ ಚರ್ಚೆ ಕಾವು ಪಡೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿದ ಪರಮೇಶ್ವರ್, ತಮ್ಮ ಸಾಮರ್ಥ್ಯ ಬಗ್ಗೆಯೂ ಕ್ಲೈಮ್ ಮಾಡಿಕೊಂಡರು. ನಾನು ಎಷ್ಟು ಸಲ ನನ್ನ ಸಾಮರ್ಥ್ಯ ಬಗ್ಗೆ ಸಾಬೀತು ಮಾಡಲಿ? ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿ ಕೆಲಸ ಮಾಡಿದ್ದೆ, ಸಾಮರ್ಥ್ಯ ಇಲ್ಲದೇ ಕೆಲಸ ಮಾಡಲು ಆಗುತ್ತಿತ್ತಾ? ಎರಡು ಸಲ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ, ಸಾಮರ್ಥ್ಯ ಇಲ್ಲದೇ ಈ ಕೆಲಸ ಆಗುತ್ತಾ? ರಾಜ್ಯದ ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ, ಸಾಮರ್ಥ್ಯ ಇಲ್ಲದೇ ಉಪಮುಖ್ಯಮಂತ್ರಿ ಮಾಡ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉದ್ಯೋಗಾಂಕ್ಷಿಗಳು ಬಿಜೆಪಿ ಮಾತು ಕೇಳಿ FIR ಹಾಕಿಸಿಕೊಳ್ಳಬೇಡಿ: ಪ್ರದೀಪ್ ಈಶ್ವರ್
ನನ್ನ ಸಾಮರ್ಥ್ಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂಥದ್ದು ಇಲ್ಲ. I am proved beyond doubt that I am capable ಆದರೆ ಸನ್ನಿವೇಶಗಳು ಬರಬೇಕು, ಪಕ್ಷದ ತೀರ್ಮಾನಗಳು ಆಗಬೇಕು ಅಷ್ಟೇ ಅಂತ ಪರಮೇಶ್ವರ್ ಗಟ್ಟಿಯಾಗಿಯೇ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮಹಿಳೆ ದಾರುಣ ಸಾವು

