ಬೆಂಗಳೂರು: ಗ್ಯಾರಂಟಿಗಳು (Guarantee Scheme) ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂದು ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವ್ರೇ ತಿಳಿಸಿದ್ರು.
ಆರೋಗ್ಯ ಇಲಾಖೆ (Helth Department) ವತಿಯಿಂದ ಹಮ್ಮಿಕೊಂಡಿದ್ದ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ನಮ್ಮ ಸರ್ಕಾರ ಎಲ್ಲಾ ಹುದ್ದೆಗಳ ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳಕ್ಕೂ ಕ್ರಮವಹಿಸಿದೆ: ಪ್ರಿಯಾಂಕ್ ಖರ್ಗೆ

200 ಯೂನಿಟ್ ಉಚಿತ ಕರೆಂಟ್, ಗೃಹಲಕ್ಷ್ಮಿ, ಫ್ರೀ ಬಸ್, ಅನ್ನಭಾಗ್ಯ, ಶಕ್ತಿಯೋಜನೆಯಂತಹ ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ. ಸರ್ಕಾರಕ್ಕೆ ಇದರಿಂದ ಹೊರೆಯಾಗುತ್ತಿರಬಹುದು, ಆದ್ರೆ ನಿಮಗೆ ಮಾನಸಿಕವಾಗಿ ಧೈರ್ಯ ತುಂಬಲು ಹಾಗೂ ಆರ್ಥಿಕವಾಗಿ ಶಕ್ತಿ ತುಂಬಲು ಇಂತಹ ದೊಡ್ಡ ತೀರ್ಮಾನವನ್ನ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.
ಜೇಬಲ್ಲಿ 10 ರೂಪಾಯಿ ಇದ್ರೆ ಕೊಡೋನು 100 ರೂಪಾಯಿ ಕೊಡೋಕೆ ಮುಂದೆ ಬರ್ತಾನೆ. ಆದ್ದರಿಂದ ಸರ್ಕಾರಕ್ಕೆ ಹೊರೆಯಾದ್ರೂ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ ಎಂದರು. ಇದನ್ನೂ ಓದಿ: ನಿಂತ ಕೆಲಸ ಮತ್ತೆ ಆರಂಭಿಸಿ – ಡಿಕೆಶಿ ನಿವಾಸಕ್ಕೆ ತೆರಳಿ ಮುನಿರತ್ನ ಮನವಿ

