ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳ ಬಳಿಕ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಇಂದಿನಿಂದ 2 ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದು 2017 ರ ನಂತರದ ಭೇಟಿಯಾಗಿದೆ.
I will be undertaking a State Visit to Israel today and tomorrow. Our nations share a robust and multifaceted Strategic Partnership. Ties have significantly strengthened in the last few years. I will be holding talks with PM Netanyahu, in which we will discuss ways to strengthen…
— Narendra Modi (@narendramodi) February 25, 2026
ಉಭಯ ನಾಯಕರು ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ನೀರು ನಿರ್ವಹಣೆ, ವ್ಯಾಪಾರ ಮತ್ತು ಆರ್ಥಿಕತೆದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಸಾಧ್ಯತೆ ಇದ್ದು, ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಲಿದೆ. ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆ ಖರೀದಿ ಹಾಗೂ 71,000 ಕೋಟಿ ರೂ. ಮೌಲ್ಯದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಏರ್ ಅಂಬುಲೆನ್ಸ್ ಪತನ – ವಿಮಾನದಲ್ಲಿ ಬ್ಲ್ಯಾಕ್‌ಬಾಕ್ಸ್ ಇಲ್ಲ, ಹವಾಮಾನ ರೇಡಾರ್ ಪರಿಶೀಲನೆ
ಮೋದಿ ಸಂದೇಶ ಏನು?
ಈ ಮಧ್ಯೆ ಇಸ್ರೇಲ್ ಭೇಟಿಗೂ ಮುನ್ನ ಪ್ರಧಾನಿ ಮೋದಿ ವಿಶೇಷ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. ʻನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ನಾನು 2026ರ ಫೆಬ್ರವರಿ 25 ರಿಂದ 26 ರ ವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಲಿದ್ದೇನೆʼ. ಇದನ್ನೂ ಓದಿ: Video Viral | ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನ ಪತನ – ಪೈಲಟ್ ಸಾವು
Honoured by the gesture. Looking forward to addressing the Knesset later today. @KnessetENG https://t.co/0PaG9Nutmy
— Narendra Modi (@narendramodi) February 25, 2026
ಭಾರತ ಮತ್ತು ಇಸ್ರೇಲ್ ದೃಢವಾದ ಹಾಗೂ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನ ಹಂಚಿಕೊಂಡಿವೆ. ಇದು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಮಟ್ಟದಲ್ಲಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕೃಷಿ, ಜಲ ನಿರ್ವಹಣೆ, ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಹಾಗೂ ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿ ನೆತನ್ಯಾಹು ಅವರ ಜೊತೆ ಚರ್ಚೆಗಳನ್ನ ನಾನು ನಿರೀಕ್ಷಿಸುತ್ತಿದ್ದೇನೆ. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ.

ಈ ಭೇಟಿಯ ವೇಳೆ, ನಾನು ಇಸ್ರೇಲ್ ಅಧ್ಯಕ್ಷರಾದ ಐಸಾಕ್ ಹೆರ್ಜೋಗ್ ಅವರನ್ನೂ ಭೇಟಿ ಮಾಡಲಿದ್ದೇನೆ. ಇಸ್ರೇಲಿ ಸಂಸತ್ತನ್ನ ಉದ್ದೇಶಿಸಿ ಭಾಷಣ ಮಾಡುವ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಗೌರವವೂ ನನಗೆ ಲಭಿಸಿದೆ. ಇದು ನಮ್ಮ ಎರಡು ರಾಷ್ಟ್ರಗಳನ್ನ ಬೆಸೆಯುವ ಬಲವಾದ ಸಂಸದೀಯ ಮತ್ತು ಪ್ರಜಾಪ್ರಭುತ್ವ ಸಂಬಂಧಗಳಿಗೆ ಗೌರವ ಸಲ್ಲಿಸುವ ಸಂದರ್ಭವಾಗಿದೆ. ಭಾರತ-ಇಸ್ರೇಲ್ ವಿಶೇಷ ಸ್ನೇಹವನ್ನ ದೀರ್ಘಕಾಲದಿಂದ ಪೋಷಿಸುತ್ತಿರುವ ಭಾರತೀಯ ವಲಸಿಗರ ಸದಸ್ಯರೊಂದಿಗೆ ಸಂವಹನ ನಡೆಸಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಇದನ್ನೂ ಓದಿ: ಗೆಳೆಯನ ಮುಂದೆಯೇ 28 ರ ಮಹಿಳೆ ಮೇಲೆ 7 ಕಾಮುಕರಿಂದ ಗ್ಯಾಂಗ್ ರೇಪ್ – 10 ಸಾವಿರ ಕಸಿದು ಎಸ್ಕೇಪ್
ನನ್ನ ಅಧಿಕೃತ ಭೇಟಿಯು ಉಭಯ ದೇಶಗಳ ನಡುವಿನ ನಿರಂತರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಗುರಿಗಳನ್ನ ನಿಗದಿಪಡಿಸುತ್ತದೆ. ಜೊತೆಗೆ ಸದೃಢ, ನವೀನ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

