– ಬಿಜೆಪಿ ಅವಧಿಯಲ್ಲಿ ಒಂದೊಂದು ಹುದ್ದೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಗೊತ್ತಿದೆ
ಬೆಂಗಳೂರು: ನಮ್ಮ ಸರ್ಕಾರ ಎಲ್ಲಾ ಹುದ್ದೆ (Job) ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ (Job Aspirants Protest) ಕುರಿತು ಬೆಂಗಳೂರಿನಲ್ಲಿ ಸಚಿವರು ಮಾತನಾಡಿದರು. ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ದ ಇದೆ. ಯುವಕರ ಸಮಸ್ಯೆಗಳ ಅರಿವಿದೆ, ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, ಎಲ್ಲವನ್ನು ಸರಿಪಡಿಸಿಕೊಂಡು ನೇಮಕಾತಿ ಆಗಲಿದೆ ಗುರುವಾರ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

ತಕ್ಷಣಕ್ಕೆ ಮಾಡಬಹುದಾದ ನೇಮಕಾತಿಗಳನ್ನ ತಕ್ಷಣ ಮಾಡುತ್ತೇವೆ. ಮೀಸಲಾತಿನೂ ಇರಬೇಕು ಸಾಮಾಜಿಕ ನ್ಯಾಯದ ಪರನೂ ಇರಬೇಕು ಸಂವಿಧಾನನದ ಪ್ರಕಾರ ಮಾಡುವಾಗ ಕೆಲವೆಲ್ಲ ಆಗುತ್ತದೆ. ಯಾರಾದ್ರೂ ಕೋರ್ಟ್‌ಗೆ ಹೋದ್ರೆ ಅದು ನ್ಯಾಯಾಲಯದ ಮೇಲೆ ನಿರ್ಧಾರ ಆಗುತ್ತೆ. ಅಲ್ಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ ಅಂತ ಹೋದಾಗ ಕೆಲವು ತಡವಾಗಬಹುದು ಎಂದಿದ್ದಾರೆ.
ಇನ್ನೂ ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬೇರೆ ಏನಿದ್ದರೂ ಪರಿಶೀಲಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಎಷ್ಟು ಹಗರಣಗಳು ಆಗಿತ್ತು ಗೊತ್ತಿದೆ. ಅವರಿದ್ದಾಗ ಯಾರ‍್ಯಾರು ಒಂದೊಂದು ಹುದ್ದೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯದ 43 ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ. ಶೀಘ್ರವೇ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುವಂತೆ ಧಾರವಾಡದಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಉದ್ಯೋಗ ಭರ್ತಿಯಾಗದ್ದಕ್ಕೆ ಬಿಜೆಪಿ ಕಾರಣ – ನಾವು 40 ಸಾವಿರ ನೇಮಕಾತಿ ಮಾಡಿದ್ದೇವೆ: ಸಿಎಂ

ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಭರ್ತಿ?
* ಶಾಲಾ ಶಿಕ್ಷಣ & ಸಾಕ್ಷರತೆ : 79,694
* ಆರೋಗ್ಯ & ವೈದ್ಯಕೀಯ ಶಿಕ್ಷಣ : 37,572
* ಒಳಾಡಳಿತ ಇಲಾಖೆ : 28,188
* ಉನ್ನತ ಶಿಕ್ಷಣ : 13,599
* ಪಶುಸಂಗೋಪನೆ : 11,020
* ಕಂದಾಯ ಇಲಾಖೆ : 10,867
* ಗ್ರಾಮೀಣಾಭಿವೃದ್ಧಿ : 10,504
* ಪರಿಶಿಷ್ಟ ಜಾತಿ ಕಲ್ಯಾಣ : 9,646
* ಹಿಂದುಳಿದ ವರ್ಗಗಳ ಕಲ್ಯಾಣ : 8,525
* ಆರ್ಥಿಕ ಇಲಾಖೆ : 7,668
* ಕಾನೂನು ಇಲಾಖೆ : 7,659
* ಕೃಷಿ ಇಲಾಖೆ : 6,876
* ಅರಣ್ಯ ಇಲಾಖೆ : 6,478
* ಸಿಬ್ಬಂದಿ & ಆಡಳಿತ ಸುಧಾರಣೆ : 6,190

