ರಾಯಚೂರು: ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವ ಹಿನ್ನೆಲೆ ರಾಯರ ಭಕ್ತರೊಬ್ಬರು ಮಠಕ್ಕೆ ಕೋಟ್ಯಂತರ ರೂ. ಮೌಲ್ಯದ ನವರತ್ನ ಕವಚ (Navaratna Kavach) ಸಮರ್ಪಣೆ ಮಾಡಿದ್ದಾರೆ.
ಸುಮಾರು ಒಂದೂವರೆ ಕೋಟಿ ವೆಚ್ಚದ ನವರತ್ನ ಕವಚವನ್ನ ರಾಯರ ಮಠದ 37ನೇ ಪೀಠಾಧಿಪತಿ ಸುಜಯೀಂದ್ರ ತೀರ್ಥರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗಿದೆ. ರಾಯರ ಗುರುವೈಭವೋತ್ಸವ ಹಿನ್ನೆಲೆ ಭಕ್ತಿ ಸೇವೆಯಾಗಿ ಬೆಂಗಳೂರಿನ ಭಕ್ತ ಸಂಪತ್ ಕುಮಾರ್ ಕವಚ ಸಮರ್ಪಿಸಿದ್ದಾರೆ. ಇದನ್ನೂ ಓದಿ: ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿ ಹಿಂದೂಗಳ ಮನೆಗೆ ಕಲ್ಲು- ಏಳು ಬಾಲಕರು ಅರೆಸ್ಟ್

ರಾಯರ ಮೇಲೆ ಭಕ್ತಿ ಹೆಚ್ಚಾಗುವಂತೆ ಸುಜಯೀಂದ್ರ ತೀರ್ಥರು ಆಶೀರ್ವದಿಸಿದ್ದ ಹಿನ್ನೆಲೆ ಸ್ವಪ್ನ ಆದೇಶದಂತೆ ನವರತ್ನ ಕವಚ ಸಮರ್ಪಣೆ ಮಾಡುತ್ತಿರುವುದಾಗಿ ರಾಯರ ಭಕ್ತ ಸಂಪತ್ ಕುಮಾರ್ ಹೇಳಿದ್ದಾರೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಬೃಂದಾವನಕ್ಕೆ ಕವಚ ಸಮರ್ಪಿಸಿದರು.
ಇನ್ನೂ ಇದೇ ವೇಳೆ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಮೂರ್ತಿ ಪೂಜೆಗೆ ರಜತ ಶೇಷವಾಹನ ಪೀಠ ಸಮರ್ಪಣೆ ಮಾಡಲಾಯಿತು. ನಾನಾ ಭಕ್ತರು ಸೇವಾ ರೂಪದಲ್ಲಿ ರಜತ ಶೇಷವಾಹನ ಪೀಠವನ್ನ ಮಠಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ

