Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

Latest

ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

Public TV
Last updated: February 23, 2026 9:19 pm
Public TV
Share
2 Min Read
Rahul Gandhi Gym Trainer Mohammad Deepak
SHARE

ನವದೆಹಲಿ: ಉತ್ತರಾಖಂಡದ (Uttarakhand) ಕೋಟ್ ದ್ವಾರದಲ್ಲಿ ಅಂಗಡಿಯೊಂದರಲ್ಲಿ ಮುಸ್ಲಿಂ ವ್ಯಕ್ತಿಯ ಪರವಾಗಿ ಮಾತನಾಡಿ ಭಾರೀ ಸುದ್ದಿಯಾಗಿದ್ದ ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ (Mohammad Deepak) ಅವರನ್ನು ವಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ನಾನು ನಿಮ್ಮ ಜಿಮ್‌ಗೆ ಸೇರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೋಟ್ ದ್ವಾರದಲ್ಲಿ (Kotdwar) ಜಿಮ್ ಹೊಂದಿರುವ ದೀಪಕ್ ಕುಮಾರ್ ಅವರು, ಬಾಬಾ ಹೆಸರಿನ ಮುಸ್ಲಿಂ ವ್ಯಕ್ತಿಯೊಬ್ಬರ ಬಟ್ಟೆ ಅಂಗಡಿಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಜರಂಗದಳದ ಕಾರ್ಯಕರ್ತರನ್ನು ಎದುರಿಸಿದ್ದರು. ನಂತರ ಹಲ್ಕ್ ಹೆಸರಿನ ಅವರ ಜಿಮ್ ಅನ್ನು ಒಂದು ಡಜನ್‌ಗೂ ಹೆಚ್ಚು ಜನ ತೊರೆದಿದ್ದರು. ಪರಿಣಾಮ ಅವರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದೀಗ ರಾಹುಲ್ ಗಾಂಧಿ ಅವರು ದೀಪಕ್ ಅವರಿಗೆ ವೈಯಕ್ತಿಕ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ – ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ

Rahul Gandhi Gym Trainer Mohammad Deepak 1

ದೀಪಕ್ ಅವರು ಇಂದು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ 10, ಜನಪಂಥ್ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕ ವೈಭವ್ ವಾಲಿಯಾ, ದೀಪಕ್ ಅವರ ಸ್ನೇಹಿತ ವಿಜಯ್ ರಾವತ್ ಮತ್ತು ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಿಷನ್ ಪ್ರಕೃತಿ | ಕುಂದಾಪುರ, ಚಾ. ನಗರ ಸೇರಿ ರಾಜ್ಯದ 10 ಶಾಲೆಗಳಿಗೆ ʻಅತ್ಯುತ್ತಮ ಶಾಲೆʼ ಪ್ರಶಸ್ತಿ‌

ಜನವರಿ 26 ರಂದು ಕೋಟ್ ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ ಮತ್ತು ಮ್ಯಾಚಿಂಗ್ ಸೆಂಟರ್ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬಜರಂಗದಳವನ್ನು ಎದುರಿಸಿ, ತಾನು ಮೊಹಮ್ಮದ್ ದೀಪಕ್ ಎಂದು ಪರಿಚಯಿಸಿಕೊಂಡಿದ್ದ ದೀಪಕ್ ಕುಮಾರ್ ಅವರು ರಾಷ್ಟ್ರೀಯ ಗಮನ ಸೆಳೆದಿದ್ದರು. ಅಂಗಡಿಯ ಮಾಲೀಕರು ಸಂಸ್ಥೆಯ ಹೆಸರನ್ನು ಬದಲಾಯಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು ಎನ್ನಲಾಗಿದೆ. ಅಂಗಡಿ ಮಾಲೀಕರು ನಿರಾಕರಿಸಿದಾಗ, ವಾದ ನಡೆಯಿತು, ನಂತರ ದೀಪಕ್ ಅಂಗಡಿಯವರನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದರು. ಇದನ್ನೂ ಓದಿ: ಮಾ.11 ರಿಂದ ಒಪಿಡಿ ಸೇವೆ ಬಂದ್‌ – ಸರ್ಕಾರದ ವಿರುದ್ಧ ಸಿಡಿದ ವೈದ್ಯರು

Rahul Gandhi Gym Trainer Mohammad Deepak 2

ರಾಹುಲ್ ಗಾಂಧಿಯವರೊಂದಿಗಿನ ಭೇಟಿಯ ನಂತರ ಮಾತನಾಡಿದ ದೀಪಕ್, ಕಾಂಗ್ರೆಸ್ ನಾಯಕ ತಮ್ಮನ್ನು ಭೇಟಿ ಮಾಡಲು ಆಹ್ವಾನಿಸಿದ್ದರು. ಅಂಗಡಿಯವನ ಪರವಾಗಿ ನಿಲ್ಲುವುದು ಸರಿಯಾದ ಕೆಲಸ. ನೀನು ಯಾವ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡುವ ಅಗತ್ಯ ಇಲ್ಲ ಎಂದು ನನಗೆ ಧೈರ್ಯ ತುಂಬಿದರು. ಭಯದಿಂದ ಬದುಕಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು ಮತ್ತು ಕೋಟ್ ದ್ವಾರಕ್ಕೆ ಭೇಟಿ ನೀಡಿ ಅವರ ಜಿಮ್‌ನ ಸದಸ್ಯತ್ವ ಪಡೆಯುವುದಾಗಿ ತಿಳಿಸಿದ್ದಾರೆ ಎಂದರು. ಸಭೆಯ ಸಮಯದಲ್ಲಿ ಸೋನಿಯಾ ಗಾಂಧಿ ಅವರನ್ನು ಪರಿಚಯಿಸಲಾಯಿತು ಎಂದು ದೀಪಕ್ ಹೇಳಿದರು. ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

TAGGED:Gym trainerKotdwarMohammad DeepakNew DelhiRahul GandhiUttarakhandಉತ್ತರಾಖಂಡಕೋಟ್ ದ್ವಾರಜಿಮ್ ಟ್ರೈನರ್ನವದೆಹಲಿಮೊಹಮ್ಮದ್ ದೀಪಕ್ ಕುಮಾರ್ರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories

You Might Also Like

Jharkhand Ranchi Air Ambulence Crash
Latest

ಜಾರ್ಖಂಡ್‌ನ ರಾಂಚಿಯಲ್ಲಿ ಏರ್ ಅಂಬುಲೆನ್ಸ್ ಪತನ

Public TV
By Public TV
1 hour ago
ICC Mens T20 World Cup West Indies vs Zimbabwe West Indies won by 107 runs
Cricket

ಸಿಕ್ಸರ್‌, ಬೌಂಡರಿಯಿಂದಲೇ ವಿಂಡೀಸ್‌ಗೆ 178 ರನ್‌ – ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ

Public TV
By Public TV
1 hour ago
Double Decker Bus Overturns In Lucknow
Crime

ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ – ಐವರು ದುರ್ಮರಣ, 16 ಮಂದಿಗೆ ಗಾಯ

Public TV
By Public TV
2 hours ago
ಸಾಂದರ್ಭಿಕ ಚಿತ್ರ
Bengaluru City

ಜಕ್ಕೂರಿನಲ್ಲಿ ಸಿಎಂ, ಡಿಸಿಎಂ ಜೊತೆ ಸುರ್ಜೇವಾಲಾ ಕ್ಲೋಸ್‌ ಡೋರ್‌ ಮೀಟಿಂಗ್‌

Public TV
By Public TV
2 hours ago
Baldota Factory
Districts

ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್ – ಮಂಗಳವಾರ ಖಾಸಗಿ ಶಾಲೆಗಳಿಗೆ ರಜೆ

Public TV
By Public TV
2 hours ago
Indias Big Decolonisation Move Chakravarti Rajagopalachari replaces Lutyens at Rashtrapati Bhavan Delhi 1
Latest

ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ – ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?