– ಸೈರನ್ ಕೂಗುತ್ತಿದ್ದಂತೆ ಎಸ್ಕೇಪ್
ಬೆಂಗಳೂರು: ಇಲ್ಲಿನ ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ (Canara Bank) ಕಳುವಿಗೆ ವಿಫಲ ಯತ್ನ ನಡೆದಿದೆ. ಬ್ಯಾಂಕ್ ಗ್ರಿಲ್ ಕೊರೆದು ಒಳನುಗ್ಗಿದ್ದ ಕಳ್ಳರು, ಸೈರನ್ ಕೂಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರು ಬ್ಯಾಂಕ್ ಹಿಂಬದಿ ಗ್ರಿಲ್ ಕೊರೆದು ಒಳನುಗ್ಗಿದ್ದರು. ಸೈರನ್ ಮೊಳಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ; ತನಿಖೆ ಚುರುಕು
ಬ್ಯಾಂಕ್‌ನ ಒಳನುಗ್ಗಿ ಕಳ್ಳರು ಇಂಚಿಂಚು ಜಾಲಾಡಿದ್ದರು. ಸ್ಟ್ರಾಂಗ್ ರೂಮ್‌ನ ವೈಯರ್‌ಕಟ್ ಮಾಡಿದ್ದರು. ವೈಯರ್‌ಕಟ್ ಮಾಡುತ್ತಿದಂತೆ ಸೈರನ್ ಸದ್ದು ಮೊಳಗಿದೆ. ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬ್ಯಾಂಕ್‌ಗೆ ಶ್ವಾನ ದಳ, ಸೋಕೋ ಟೀಂ ಭೇಟಿ ಪರಿಶೀಲನೆ ನಡೆಸಿದೆ. ಯಾವ ಭಾಗದಿಂದ ಹೊರಹೋಗಿದ್ದಾರೆ ಎಂದು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಲಾಗಿದೆ.
ಬ್ಯಾಂಕ್ ಅಲ್ಲದೇ ಎಟಿಎಂ ಬಳಿಯೂ ಕಳ್ಳತನಕ್ಕೆ ಯತ್ನ ನಡೆದಿತ್ತು. ಹಲಸೂರು ಗೇಟ್ ಸಮೀಪ ಎಟಿಎಂ ಬಳಿ ಕಳ್ಳತನಕ್ಕೆ ಯತ್ನಿಸಿದ್ದರು. ಕಳ್ಳ ಕಬ್ಬಿಣದ ರಾಡ್‌ನಿಂದ ಎಟಿಎಂ ಹೊಡೆದಿದ್ದಾನೆ. ಅಲ್ಲಿಯೂ ವಿಫಲ ಯತ್ನದ ಬಳಿಕ ವಾಪಸ್ ಓಡಿ ಹೋಗಿದ್ದಾನೆ. ಇದೇ ಕಳ್ಳನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಮೆಟ್ರೋ ಹೊಸ ದರ ನಿಗದಿ ಸಾಧ್ಯತೆ – ಡಿಕೆಶಿಗೆ ಆಡಿಟ್ ರಿಪೋರ್ಟ್ ಸಲ್ಲಿಕೆ ಮಾಡಲಿರೋ BMRCL

