ಬೆಂಗಳೂರು: ದಲಿತರಿಗೆ ಸಿಎಂ (Dalit CM) ಅವಕಾಶ ಕೊಡಬೇಕು ಎಂದ ಮಹದೇವಪ್ಪವರು ನಮ್ಮ ರಾಷ್ಟ್ರೀಯ ನಾಯಕರು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಭಾನುವಾರ ಮಡಿಕೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಹದೇವಪ್ಪ (Mahadevappa) ದಲಿತರು ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಸದಾ ಕಾಂಗ್ರೆಸ್‌ನೊಂದಿಗೆ ಬೆನ್ನೆಲುಬಾಗಿ ನಿಂತಿರುವುದರಿಂದ ದಲಿತರಿಗೆ ಸಿಎಂ ನೀಡಬೇಕು ಎಂದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ದಲಿತ ನಾಯಕರೇ ಸಿಎಂ ಆಗಬೇಕು – ಹೈಕಮಾಂಡ್‌ಗೆ ಸಚಿವ ಮಹದೇವಪ್ಪ ಒತ್ತಾಯ
ಮಹದೇವಪ್ಪನವರ ಈ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಮಹದೇವಪ್ಪ ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ ಮಾಡುತ್ತೇನೆ ಎಂದು ಡಿಕೆಶಿ ತಲೆಬಾಗಿ ನಮಸ್ಕರಿಸಿದರು.
ಇದೇ ವೇಳೆ ಕಾಂಗ್ರೆಸ್‌ನಲ್ಲಿ ಮಾತ್ರ ಒಕ್ಕಲಿಗರಿಗೆ ಸಿಎಂ ಆಗಲು ಅವಕಾಶ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಡಿಕೆಶಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

