ಅಹಮದಾಬಾದ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಹೀನಾಯ ಸೋಲಿನಿಂದಾಗಿ ಸತತ 13 ಟಿ20 ವಿಶ್ವಕಪ್ (T20 World Cup) ಪಂದ್ಯ ಗೆಲ್ಲುವ ಭಾರತದ(Team India) ಕನಸು ಭಗ್ನಗೊಂಡಿದೆ.
2024 ರ ಟಿ20 ವಿಶ್ವಕಪ್ ಪಂದ್ಯಗಳು ಅಮೆರಿಕ ಮತ್ತು ವೆಸ್ಟ್‌ಇಂಡೀಸ್ ನೆಲದಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಸತತ 8 ಪಂದ್ಯಗಳನ್ನು ಭಾರತ ಗೆದ್ದು 2ನೇ ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್, ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ಸತತ 12 ಪಂದ್ಯಗಳಲ್ಲಿ ಜಯಶಾಲಿಯಾಗಿ ಭಾರತ ಸೂಪರ್ 8ಕ್ಕೆ ಅರ್ಹತೆ ಪಡೆದಿತ್ತು. ಆದರೆ ಈಗ ಆಫ್ರಿಕಾ ವಿರುದ್ಧ ಸೋಲಿನಿಂದಾಗಿ ಗೆಲುವಿನ ಓಟ ಅಂತ್ಯಗೊಂಡಿದೆ. ಇದನ್ನೂ ಓದಿ: ಕಳಪೆ ಬೌಲಿಂಗ್, ಬ್ಯಾಟಿಂಗ್‌ಗೆ ಬೆಲೆತೆತ್ತ ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು
Jasprit Bumrah wastes no time and removes the danger man, Quinton de Kock, in this all-important Super 8 clash. 🔥
ICC Men’s #T20WorldCup | SUPER 8 | #INDvSA | LIVE NOW 👉 https://t.co/dZWPZfqfbO pic.twitter.com/23RqtAxaoq
— Star Sports (@StarSportsIndia) February 22, 2026
ಮೊದಲು ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 187 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯ್ತು. ಇಂದಿನ ಪಂದ್ಯದಲ್ಲಿ ಸೋತರೂ ಟಿ20 ವಿಶ್ವಕಪ್‌ನಲ್ಲಿ ಸತತ ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.
ಟಿ20ಯಲ್ಲಿ ಸತತ ಜಯಗಳು
12 – ಭಾರತ – 2024, 2026
8 – ದಕ್ಷಿಣ ಆಫ್ರಿಕಾ – 2024
8– ಆಸ್ಟ್ರೇಲಿಯಾ – 2022, 2024
7 – ಭಾರತ – 2012, 2014
6 – ಭಾರತ -2007, 2009

