Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ – ಏನಿದು ʻಪಿಎಂ ರಾಹತ್‌ʼ ಯೋಜನೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ – ಏನಿದು ʻಪಿಎಂ ರಾಹತ್‌ʼ ಯೋಜನೆ?

Latest

ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ – ಏನಿದು ʻಪಿಎಂ ರಾಹತ್‌ʼ ಯೋಜನೆ?

Public TV
Last updated: February 22, 2026 10:56 pm
Public TV
Share
5 Min Read
PM Rahat
SHARE

ದೇಶದ ಜನರ ಹಿತಕ್ಕಾಗಿ ಹಾಗೂ ಕಲ್ಯಾಣಕ್ಕೋಸ್ಕರ ಅಲ್ಲಿನ ಸರ್ಕಾರ ಒಂದಲ್ಲ ಒಂದು ರೀತಿ ಯೋಜನೆಗಳನ್ನ ತರುವ ಮೂಲಕ ಸಹಾಯಮಾಡುತ್ತದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ (Central Government) ಹೊಸ ಯೋಜನೆಗಳನ್ನು ತರುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಪಿಎಂ ಮುದ್ರಾ ಯೋಜನೆ, ಪಿಎಂ ಜನ್ ಧನ್ ಯೋಜನೆ ಸೇರಿದಂತೆ ಈವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಲವು ಯೋಜನೆಗಳು ಜಾರಿಗೆ ಬಂದಿವೆ. 

ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ರಾಹತ್ (PM Rahat) ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಈ ಯೋಚನೆ ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲಿದ್ದು, ಆರ್ಥಿಕವಾಗಿ ಬೆನ್ನೆಲುಬಾಗಲಿದೆ. ಫೆಬ್ರವರಿ 14ರಂದು ಭಾರತ ಸರ್ಕಾರ ರಸ್ತೆ ಅಪಘಾತದ ಸಂತ್ರಸ್ತರಿಗೆ ರಾಷ್ಟ್ರ ವ್ಯಾಪಿ ನಗದು ರಹಿತ ತುರ್ತು ಚಿಕಿತ್ಸಾ ಯೋಜನೆಯನ್ನ ಜಾರಿಗೆ ತಂದಿತು. ಅದೇ ಪಿಎಂ ರಾಹತ್ ಯೋಜನೆ. ಏನಿದು ಯೋಜನೆ? ಇದರ ಲಾಭ ಪಡೆದುಕೊಳ್ಳುವುದು ಹೇಗೆ? ಸಿಗುವ ನಗದು ಎಷ್ಟು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Accident

ಏನಿದು ಪಿಎಂ ರಾಹತ್ ಯೋಜನೆ?
ರಸ್ತೆ ಅಪಘಾತದಲ್ಲಿ (Road Accident) ಗಾಯಗೊಂಡ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಹಾಗೂ ನಗದು ರಹಿತ ಚಿಕಿತ್ಸೆ ನೀಡುವ ಕುರಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ರಾಹತ್ ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಿದರು. 

ಕೆಲವೊಮ್ಮೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ಸಹಾಯ ಸಿಗದೆ ಅಥವಾ ಕೊರತೆಯಿಂದಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಇದನ್ನು ತಪ್ಪಿಸುವ ಉದ್ದೇಶದೊಂದಿಗೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. 

pm modi mann ki baat

ಭಾರತ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ನಾಗರಿಕರನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಪ್ರತಿ ವರ್ಷ ಸಾವಿನ ಸಂಖ್ಯೆಯು ಹೆಚ್ಚಾಗುತ್ತದೆ. ಗಾಯಗೊಂಡವರ ಪೈಕಿ ಆಸ್ಪತ್ರೆಗೆ ದಾಖಲಿಸದೆ ಸಾವನ್ನಪ್ಪಿದವರು ಹೆಚ್ಚು. ಹೀಗಾಗಿ ಒಂದು ವೇಳೆ ರಸ್ತೆ ಅಪಘಾತವಾದ ಮೊದಲ ಗಂಟೆಯೊಳಗೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರೆ ಸುಮಾರು 50ರಷ್ಟು ಜನರು ಬದುಕುಳಿಯುತ್ತಾರೆ. 

ಲಾಭ ಪಡೆಯುವುದು ಹೇಗೆ? 

  • ರಸ್ತೆ ಅಪಘಾತವಾದಾಗ ಸಂತ್ರಸ್ತರು ಅಥವಾ ಸ್ಥಳೀಯರು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (emergency response support system) ನೀಡುವ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. 
  • ಈ ಮೂಲಕ ಅಪಘಾತಕ್ಕೊಳಗಾದವರು  ಮೊದಲ ಒಂದು ಗಂಟೆಯೊಳಗೆ ಅಥವಾ ಗೋಲ್ಡನ್ ಅವರ್ ಒಳಗಡೆ ಆಸ್ಪತ್ರೆಗೆ  ತಲುಪುವಲ್ಲಿ ಸಹಾಯ ಮಾಡುತ್ತದೆ
  • ಸ್ಥಳದಲ್ಲಿರುವ ಯಾವುದೇ ವ್ಯಕ್ತಿ ಹತ್ತಿರದ ಆಸ್ಪತ್ರೆಯ ಮಾಹಿತಿ ಪಡೆಯಲು ಅಥವಾ ಆಂಬುಲೆನ್ಸ್ ಕರೆ ಮಾಡಲು ಈ ನಂಬರ್ಗೆ ಕರೆ ಮಾಡಬೇಕು.
  • ಈ ಯೋಜನೆ ಅಡಿಯಲ್ಲಿ ಯಾವುದೇ ವರ್ಗದ ರಸ್ತೆ ಅಪಘಾತದ ಸಂತ್ರಸ್ತರು ಅಪಘಾತವಾದಾಗಿನಿಂದ ಏಳು ದಿನಗಳ ವರೆಗೆ 1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು.
  • ಈ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಂಯೋಗದೊಂದಿಗೆ ಜಾರಿಗೆ ಬಂದಿದೆ. 
  • ಈ ಯೋಜನೆ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು, ಪೋಲಿಸ್ ದೃಢೀಕರಣ, ಚಿಕಿತ್ಸೆ, ಅಂತಿಮ ಪಾವತಿಯಾಗುವವರೆಗೂ ಪ್ರತಿಯೊಂದು ಡಿಜಿಟಲ್ ಆಗಿ ಸಕ್ರಿಯವಾಗಿರುತ್ತದೆ. 
  • ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ಮೋಟಾರ್ ವಾಹನ ಅಪಘಾತನಿಧಿ ಚಿಕಿತ್ಸೆಯ ಹಣವನ್ನ ಮರುಪಾವತಿ ಮಾಡುತ್ತದೆ. 
  • ಅಪಘಾತದಲ್ಲಿ ನಿಯಮ ಉಲ್ಲಂಘನೆ ಮಾಡಿದ ವಾಹನಕ್ಕೆ ವಿಮೆ ಮಾಡಿಸಿದ್ದಲ್ಲಿ ವಿಮಾ ಕಂಪನಿಗಳು ಪಾವತಿ ಮಾಡುತ್ತದೆ. 
  • ವಿಮೆ ಮಾಡದ ಮತ್ತು ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಭಾರತ ಸರ್ಕಾರ ಬಜೆಟ್ ಹಂಚಿಕೆಯ ಮೂಲಕ ಪಾವತಿ ಮಾಡುತ್ತದೆ 
  • ಇನ್ನು ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ರಾಜ್ಯ ಆರೋಗ್ಯ ಸಂಸ್ಥೆಯು 10 ದಿನಗಳ ಒಳಗೆ ಹಣ ಮರುಪಾವತಿ ಮಾಡುತ್ತದೆ. ಈ ಮೂಲಕ ಆಸ್ಪತ್ರೆಗೆ ಆರ್ಥಿಕ ಭರವಸೆ ಹಾಗೂ ನಿರಂತರ ಚಿಕಿತ್ಸೆ ನೀಡಲು ಸಹಾಯಮಾಡುತ್ತದೆ

AMBULANCE

ಏನಿದು ಗೋಲ್ಡನ್ ಅವರ್?
ರಸ್ತೆ ಅಪಘಾತವಾಗಿ ಮೊದಲ ಒಂದು ಗಂಟೆಯ ಒಳಗಡೆ ಗಾಯಗೊಂಡ ವ್ಯಕ್ತಿಯನ್ನು ಅಥವಾ ಸಂತ್ರಸ್ಥರನ್ನು ಆಸ್ಪತ್ರೆಗೆ ತಲುಪಿಸಿದರೆ ಆ ಅದನ್ನ ಸಾಮಾನ್ಯವಾಗಿ ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ.

108 Ambulance services relaunched. 262 new ambulances added with advanced life support. Dinesh Gundu Rao 3

ಯೋಜನೆಯ ಅಗತ್ಯವೇನು? 

  • ಭಾರತದಲ್ಲಿ ಪ್ರತಿವರ್ಷ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಹಣದ ಕೊರತೆ ಒಂದು ದೊಡ್ಡ ಅಡಚಣೆ. ಹೀಗಾಗಿ ಅಂತಹ ಜನರಿಗೆ ತ್ವರಿತ ಚಿಕಿತ್ಸೆ, ಯಾವುದೇ ಹಣದ ಯೋಜನೆ ಇಲ್ಲದೆ ಚಿಕಿತ್ಸೆ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 
  • ಇನ್ನು ಅಪಘಾತ ಸ್ಥಳದಿಂದ ತಕ್ಷಣ ಸೇವೆ, ಅಪಘಾತದ ಸಂಪೂರ್ಣ ಮಾಹಿತಿ ಸಂಗ್ರಹಣೆ ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿ, ವೈದ್ಯಕೀಯ ಮಾಹಿತಿ ಹಾಗೂ ಸಂಪೂರ್ಣ ಹಣದ ವ್ಯವಹಾರದ ಕುರಿತು ಇದು ಮಾಹಿತಿ ಪಡೆದುಕೊಳ್ಳುತ್ತದೆ. 
  • ಆಸ್ಪತ್ರೆಗೆ ದಾಖಲಿಸಿದ ಬಳಿಕ ಹಣದ ಕೊರತೆ ಇಲ್ಲದಿದ್ದರೆ ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಶುರು ಮಾಡಬಹುದು ಇದರಿಂದ ವ್ಯಕ್ತಿಯ ಜೀವ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. 
  • ಒಂದು ವೇಳೆ ನಿಮಗೆ ಈ ಯೋಜನೆಯ ಅಗತ್ಯವೇ ಬರುವುದಿಲ್ಲ ಎಂದಾದರೂ ಕೂಡ ಅಂದರೆ ಆರ್ಥಿಕ ಸಮಸ್ಯೆ ಇಲ್ಲ ಎಂದರೆ ಬೇರೆಯವರಿಗಾದರೂ ಕೂಡ ಸಹಾಯ ಮಾಡುವ ಉದ್ದೇಶದಿಂದ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.

Money

ಪ್ರತಿ ಜಿಲ್ಲೆಯ ರಸ್ತೆ ಸುರಕ್ಷತಾ ಕಮಿಟಿಯ ನೇತೃತ್ವದಲ್ಲಿ ಕುಂದು ಕೊರತೆ ನಿವಾರಣ ಅಧಿಕಾರಿಗಳು ಇದಕ್ಕೆ ಸಹಕಾರಿಯಾಗಿರುತ್ತಾರೆ. ಯೋಜನೆಯ ಕುಂದು ಕೊರತೆಗಳನ್ನ ಆಲಿಸಿ, ತನಿಖೆ ಮಾಡುವ ಮತ್ತು ಅದಕ್ಕೆ ಪರಿಹಾರ ನೀಡುವ ಜವಾಬ್ದಾರಿಯನ್ನು ಈ ಅಧಿಕಾರಿಗಳು ಹೊಂದಿರುತ್ತಾರೆ.

ಯಾರು ಅರ್ಹರು?
ಪಿಎಂ ರಾಹತ್ ಯೋಜನೆಯ ಲಾಭ ಪಡೆಯಬೇಕೆಂದರೆ ಯಾರೆಲ್ಲಾ ಅರ್ಹರಾಗಿರುತ್ತಾರೆ. 

  • ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಅಥವಾ ಸಂತ್ರಸ್ತರೆಲ್ಲರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. 
  • ಇದಕ್ಕೆ ಯಾವುದೇ ರೀತಿಯ ವಯಸ್ಸು ಅಥವಾ ಆದಾಯದ ಮಿತಿ ಅನುಸರಿಸುವುದಿಲ್ಲ. ಯಾರೇ ಕೂಡ ಅಪಘಾತದಲ್ಲಿ ಗಾಯಗೊಂಡರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ವಾಹನ ಚಾಲಕನ ತಪ್ಪಿದ್ದರು ಅಥವಾ ತಪ್ಪಿಲ್ಲದೆ ಇದ್ದರೂ, ಒಂದು ವೇಳೆ ಪ್ರಯಾಣಿಕನ ತಪ್ಪಿದ್ದರೆ ಅಥವಾ ಇಲ್ಲದೆ ಇದ್ದರೆ ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳಿಗೂ ಕೂಡ ಇದು ಅನ್ವಯಿಸುತ್ತದೆ. ಆದರೆ ಅಪಘಾತ ಭಾರತದ ಒಳಗೆ ಸಂಭವಿಸಿದರೆ ಮಾತ್ರ.
  • ಅಪಘಾತದಲ್ಲಿ ಗಾಯಗೊಂಡವರಿಗೆ ಐಸಿಯು, ಶಸ್ತ್ರಚಿಕಿತ್ಸೆ, ಔಷಧಿ ಹಾಗೂ ಡಯಾಗ್ನೋಸ್ಟಿಕ್ ಸೇರಿದಂತೆ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳು ಈ ಯೋಜನೆ ಅಡಿಯಲ್ಲಿ ಲಭ್ಯವಿರುತ್ತದೆ.  ಈ ಸಂದರ್ಭದಲ್ಲಿ ಯಾವುದೇ ಅರ್ಜಿ ಭರ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ.
  • ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಕುಟುಂಬಸ್ಥರು ಆಸ್ಪತ್ರೆಗೆ ಯಾವುದೇ ಹಣವನ್ನ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. 1.5ಲಕ್ಷ ರೂಪಾಯಿಯನ್ನು ಸರ್ಕಾರವೇ ಕ್ಲೈಮ್ ಮಾಡುತ್ತದೆ

Rajiv Gandhi Hospital 1

TAGGED:accidentCentral govtPM ModiPM Rahatಕೇಂದ್ರ ಸರ್ಕಾರಪಿಎಂ ರಾಹತ್ಪ್ರಧಾನಮಂತ್ರಿ ನರೇಂದ್ರ ಮೋದಿರಸ್ತೆ ಅಪಘಾತ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood

You Might Also Like

Snehamayi Krishna 2
Bengaluru City

ಸ್ನೇಹಿಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

Public TV
By Public TV
19 minutes ago
Sringeri Bandh
Chikkamagaluru

ರೈತ ಹೋರಾಟಗಾರರ ಮೇಲೆ ಪೊಲೀಸರ ಲಾಠಿಚಾರ್ಜ್‌ – ಇಂದು ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಬಂದ್

Public TV
By Public TV
50 minutes ago
Powerful Drug Lord El Mencho
Latest

‘ಪವರ್‌ಫುಲ್‌ ಡ್ರಗ್ಸ್‌ ಲಾರ್ಡ್‌’ ಎಲ್‌ ಮೆಂಚೊಗೆ ಗುಂಡಿಕ್ಕಿ ಹತ್ಯೆಗೈದ ಮೆಕ್ಸಿಕನ್‌ ಸೇನೆ

Public TV
By Public TV
52 minutes ago
mukul roy
Latest

ಮಾಜಿ ರೈಲ್ವೆ ಸಚಿವ, ಬಂಗಾಳದ ‘ರಾಜಕೀಯದ ಚಾಣಕ್ಯ’ ಮುಕುಲ್ ರಾಯ್ ನಿಧನ

Public TV
By Public TV
1 hour ago
mobile ban
Bengaluru City

ರಾಜ್ಯದ 16 ವರ್ಷದೊಳಗಿನ ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧ?

Public TV
By Public TV
1 hour ago
hassan couple suicide
Crime

ಬದುಕು ಕೊಟ್ಟ ಅಪ್ಪ-ಅಮ್ಮನ ಬಗ್ಗೆ ನಿರ್ಲಕ್ಷ್ಯ; ತುತ್ತು ಊಟಕ್ಕೂ ಪರದಾಡಿ ವೃದ್ಧ ದಂಪತಿ ಆತ್ಮಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?