ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧ ಇಂದು ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮೂರು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ (Team India) ಪರ ಹೊಸ ದಾಖಲೆ ಬರೆದಿದ್ದಾರೆ.
ಒತ್ತಡದ ಸಮಯದಲ್ಲೂ ಹರಿಣರ ವಿರುದ್ಧ ಪ್ರಾಬಲ್ಯ ಮೆರೆದ ಬುಮ್ರಾ 4 ಓವರ್‌ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ವಿಕೆಟ್ (wicket) ಪಡೆದ ನಂ.1 ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

24 ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದ ಅಶ್ವಿನ್ (Ravichandran Ashwin) ಅಗ್ರಸ್ಥಾನದಲ್ಲಿದ್ದರು. ಆದ್ರೆ 22 ಪಂದ್ಯಗಳಲ್ಲೇ ಬುಮ್ರಾ ಈ ದಾಖಲೆ ಮುರಿದಿದ್ದಾರೆ. ಕಾರ್ಬಿನ್ ಬಾಷ್ ವಿಕೆಟ್ ಪಡೆಯುವ ಮೂಲಕ 33 ವಿಕೆಟ್ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ಇನ್ನುಳಿದಂತೆ ಅರ್ಷ್‌ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
T20 WC ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯರು
* ಜಸ್‌ಪ್ರೀತ್ ಬುಮ್ರಾ – 33 ವಿಕೆಟ್ – 22 ಪಂದ್ಯ
* ಆರ್. ಅಶ್ವಿನ್ – 32 ವಿಕೆಟ್ – 24 ಪಂದ್ಯ
* ಅರ್ಷ್‌ದೀಪ್ ಸಿಂಗ್ – 32 ವಿಕೆಟ್ – 18 ಪಂದ್ಯ
* ಹಾರ್ದಿಕ್ ಪಾಂಡ್ಯ – 29 ವಿಕೆಟ್ – 29 ಪಂದ್ಯ
* ರವೀಂದ್ರ ಜಡೇಜಾ – 22 ವಿಕೆಟ್ – 30 ಪಂದ್ಯ

