ಚಿಕ್ಕಮಗಳೂರು: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಹುಣಸೆಹಳ್ಳಿ ಸಮೀಪದ ಪುರದ ಬಳಿ ಮಹಿಳೆಯನ್ನು ಬಲಿ ಪಡೆದ ಅರ್ಧ ಗಂಟೆಯಲ್ಲೇ ಕಾಡಾನೆ ಸೆರೆ ಹಿಡಿದಿದ್ದಾರೆ. ಕಾಡಾನೆಗೆ ಅರವಳಿಕೆ ಚುಚ್ಚುಮದ್ದನ್ನು ಹೊಡೆದಿದ್ದಾರೆ. ಅರವಳಿಕೆ ಪ್ರಭಾವದಿಂದ ಬೆರಣಗೋಡು ಸಮೀಪದ ಕೆರೆಮನೆ ಬಳಿ ಆನೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಕಾಡಾನೆ ಸೆರೆಗೆ ಬಂದಿದ್ದ ಜ್ಯೂ.ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ!
ಆನೆ ಸೆರೆಗೆ ಸಾಕಾನೆಗಳನ್ನು ಕೊಂಡೊಯ್ಯಲಾಗಿದೆ. 4 ಆನೆ ತಳ್ಳಿದರೂ ಕಾಡಾನೆ ಅಲುಗಾಡದೇ ನಿಂತಿದೆ. ಕಾಡಾನೆ ಸೆರೆಗೆ ಸಾಕಾನೆಗಳೇ ಹೈರಾಣಾಗಿವೆ.
ಈ ಕಾಡಾನೆ ಬೋರಮ್ಮ (33) ಎಂಬವರ ಮೇಲೆ ಇಂದು (ಫೆ.22) ಬೆಳಗ್ಗೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದೇ ಆನೆ ಫೆ.19 ರಂದು ಕಾರ್ಮಿಕನೊಬ್ಬನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದನ್ನೂ ಓದಿ: ಮದವೇರಿದ್ದ ಕಾಡಾನೆಗೆ ಮಹಿಳೆ ಬಲಿ – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

