– ಹನುಮನ ಜನ್ಮಸ್ಥಳದಲ್ಲಿ ‘ಜೈ ಹನುಮಾನ್’ ಚಿತ್ರಕ್ಕೆ ಮುಹೂರ್ತ
ಕೊಪ್ಪಳ: ಅಂಜನಾದ್ರಿ ಬೆಟ್ಟಕ್ಕೆ (Anjanadri Hills) ನಟ ರಿಷಬ್ ಶೆಟ್ಟಿ (Rishab Shetty) ದಂಪತಿ ಭೇಟಿ ನೀಡಿ, ಹನುಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಹನುಮ ಜನ್ಮಸ್ಥಳದಲ್ಲಿ ‘ಜೈ ಹನುಮಾನ್’ ಚಿತ್ರಕ್ಕ ಮುಹೂರ್ತ ಸಿಕ್ಕಿದೆ. ಬೆಳಗ್ಗೆ 11:50ಕ್ಕೆ ಅಂಜನಾದ್ರಿಯಲ್ಲಿ ‘ಜೈ ಹನುಮಾನ್’ ತೆಲುಗು ಸಿನಿಮಾಗೆ ಮುಹೂರ್ತ ನೆರವೇರಿದೆ. ಇದನ್ನೂ ಓದಿ: `Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್

ಜೈ ಹನುಮಾನ್ ಚಿತ್ರದಲ್ಲಿ ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಮುಹೂರ್ತದಲ್ಲಿ ಭಾಗವಹಿಸಲು ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯು ಬೆಟ್ಟಕ್ಕೆ ಆಗಮಿಸಿದ್ದರು. ತೆಲುಗು ಚಿತ್ರ ನಿರ್ದೇಶಕ ಪ್ರಶಾಂತ್ ವರ್ಮ ನಿರ್ದೇಶನದ ಸಿನಿಮಾ ಇದಾಗಿದೆ.

