ಭೋಪಾಲ್: ವ್ಯಾನ್‌ಗೆ (Van) ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದು, ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಭಿಂಡ್ (Bhind) ಜಿಲ್ಲೆಯಲ್ಲಿ ನಡೆದಿದೆ.
ಗೋಹದ್ ಚೌರಾಹಾ ಪೊಲೀಸ್ ಠಾಣಾ ವ್ಯಾಪ್ತಿಯ ಗಿಲ್ ಧಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿ 719ರಲ್ಲಿ ಇಂದು ಮುಂಜಾನೆ 2:30ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಗೋಹದ್ ಚೌರಾಹಾ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ಧಕಾಡ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗಳನ್ನ ಪ್ರೀತಿಸಿದ್ದ ಯುವಕನ ಮೇಲೆ ಕೇಸ್ ಕೊಟ್ಟ ತಾಯಿ – ಜೈಲಿಂದ ಹೊರಬಂದಿದ್ದ ಯುವಕನಿಂದ ಕೊಲೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ತಕ್ಷಣ ಗೋಹದ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಕೆಲವರನ್ನು ವೈದ್ಯರ ಸೂಚನೆ ಮೇರೆಗೆ ಗ್ವಾಲಿಯರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಕ್ಕಿ ರಭಸಕ್ಕೆ ವ್ಯಾನ್ ಸಂಪೂರ್ಣವಾಗಿ ಛಿದ್ರಗೊಂಡಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ & ಕಾಶ್ಮೀರದಲ್ಲಿ 2 IED ಪತ್ತೆ – ಭದ್ರತಾ ಪಡೆಗಳಿಂದ ನಿಷ್ಕ್ರಿಯ
ಮದುವೆಗೆ ತೆರಳಿದ್ದ ಬಸ್ ಜನರನ್ನು ಇಳಿಸಿ ಭಿಂಡ್‌ನಿಂದ ಗ್ವಾಲಿಯರ್‌ಗೆ ಹೋಗುತ್ತಿತ್ತು. ಈ ಬಸ್ ಗಿಲ್ ಧಾಬಾ ಬಳಿ ಬರುತ್ತಿದ್ದಂತೆ, ಗ್ವಾಲಿಯರ್‌ನಿಂದ ಭಿಂಡ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವ್ಯಾನ್‌ನಲ್ಲಿದ್ದ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಟ್ರಂಪ್ ಸುಂಕ ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್ – ಭಾರತ ಫಸ್ಟ್ ರಿಯಾಕ್ಷನ್
ಮೃತರನ್ನು ಭರತ್ ಶರ್ಮಾ, ಅತುಲ್ ಶಿವಾರೆ, ಜಗದೀಶ್ ಭದೌರಿಯಾ, ಪ್ರದೀಪ್ ಪ್ರಜಾಪತಿ ಮತ್ತು ಆನಂದ್ ಭದೌರಿಯಾ ಎಂದು ಗುರುತಿಸಲಾಗಿದೆ ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ರವೀಂದ್ರ ವಾಸ್ಕಾಲೆ ತಿಳಿಸಿದ್ದಾರೆ. ಅಪಘಾತಕ್ಕೆ ಅತಿವೇಗವೇ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಇದು ಅವರ ಜಾಯಮಾನದಲ್ಲಿ ಬಂದಿದೆ: ಹೆಚ್‌ಡಿಕೆ
ಅಪಘಾತದಲ್ಲಿ ಗಾಯಗೊಂಡ ಕೇತು ಶರ್ಮಾ (10), ಸಂತೋಷ್ ಶರ್ಮಾ (37), ಮೇವರಂ ಭದೌರಿಯಾ (61), ರಾಮ್ಲಖಾನ್ (59), ಮೀರಾ (30), ಮತ್ತು ಸುಖವೀರ್ ಶರ್ಮಾ (50) ಗ್ವಾಲಿಯರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಯಾರ ನಾಯಕತ್ವ ಬಂದ್ರೆ ಕಮಿಷನ್ ಹೋಗುತ್ತೆ ಅಂತ ಜನ ತೀರ್ಮಾನಿಸಲಿ: ಹೆಚ್‌ಡಿಕೆ

