-ಮಹಿಳೆಯನ್ನ ಬಸ್‌ನಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ನಿಂದನೆ
ಬೆಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರ ಕಂಡು ಕಂಡಕ್ಟರ್ ಸಿಟ್ಟಿಗೆದ್ದು, ಫ್ರೀ ಅಂತಾ ಊರೂರು ಸುತ್ತುತ್ತೀರಾ ಎಂದು ಕಿರಿಕ್ ಮಾಡಿರುವ ಘಟನೆ ಬಿಎಂಟಿಸಿ (BMTC) ಬಸ್‌ನಲ್ಲಿ ನಡೆದಿದೆ.
ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್ ತುಂಬಾ ರಶ್ ಆಗಿತ್ತು. ಇದನ್ನು ಗಮನಿಸಿದ ಕಂಡಕ್ಟರ್ ನಿಮಗೆ ಮನೆಯಲ್ಲಿ ಮಾಡೋದಕ್ಕೆ ಕೆಲಸ ಇಲ್ವಾ? ಫ್ರೀ ಅಂತ ಊರು ಊರು ಸುತ್ತುತ್ತೀರಾ? ಎಂದು ಕಿರಿಕ್ ಮಾಡಿದ್ದಾನೆ. ಜೊತೆಗೆ ಸರ್ಕಾರ ಮತ್ತು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಶಕ್ತಿ ಯೋಜನೆಯನ್ನೂ ಕೂಡ ಟೀಕಿಸಿದ್ದಾನೆ. ಇದನ್ನೂ ಓದಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪರ್ಸನಲ್ ಸೆಕ್ರೆಟರಿ ಮಗ ಆತ್ಮಹತ್ಯೆ
ಇನ್ನೂ ಬಸ್‌ನಲ್ಲಿದ್ದ ಓರ್ವ ಮಹಿಳೆಯನ್ನು ಕೆಂಗೇರಿ ಬಳಿಯೇ ಕೆಳಗಿಳಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಂಡಕ್ಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

