– ಮಹದೇವಪ್ಪ ಅವ್ರ ಶ್ರಮದಿಂದಲೇ 2018 ರಲ್ಲಿ 80 ಸೀಟು ಬಂದಿತ್ತು; ವ್ಯಂಗ್ಯ
ಬೆಂಗಳೂರು: ರೈತರ (Farmers) ಮಕ್ಕಳ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಹಾಗಾಗಿ ರೈತರ ಮನೆ ಸೊಸೆ ಆಗುವವರಿಗೆ ಭತ್ಯೆ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಶಾಸಕ ಕುಣಿಗಲ್ ರಂಗನಾಥ್ (Kunigal Ranganath) ತಿಳಿಸಿದರು.
ಬೆಂಗಳೂರಿನಲ್ಲಿ (Bengaluru) ಬಜೆಟ್ ನಲ್ಲಿ ನಿರೀಕ್ಷೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೀರಾವರಿ ಯೋಜನೆಗಳ ಬಗ್ಗೆ ಕೇಳಿದ್ದೇವೆ, ನಮ್ಮ ತಾಲೂಕಿಗೆ ಮೆಡಿಕಲ್ ಕಾಲೇಜು (Medical College) ಕೇಳಿದ್ದೇನೆ, ಅದು ನನ್ನ ಆಸೆಯಾಗಿದೆ. ಸರ್ಕಾರದಿಂದ ಆಗಿಲ್ಲ ಎಂದರೂ PPP (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾಡೆಲ್ ನಲ್ಲಿ ಮಾಡಬಹುದು ಎಂದರು. ಇದನ್ನೂ ಓದಿ: Rajya Sabha Elections: 10 ರಾಜ್ಯಗಳ 37 ಸ್ಥಾನಗಳಿಗೆ ಮಾ.16 ರಂದು ಮತದಾನ

ಮುಂದುವರಿದು… ಇವತ್ತಿನ ದಿನ ರೈತರ ಮಕ್ಕಳ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಹಾಗಾಗಿ ರೈತರ ಮನೆ ಸೊಸೆ ಆಗುವವರಿಗೆ ಭತ್ಯೆ ಕೊಡಬೇಕು. ರೈತರ ಮಕ್ಕಳನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ ಅಥವಾ ಅವರ ಮಕ್ಕಳಿಗೆ ಭತ್ಯೆ ನೀಡಬೇಕು. ಕಾನೂನು ಅಡಿಯಲ್ಲಿ ಭತ್ಯೆ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ರು. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್ಐಆರ್
ಮಹದೇವಪ್ಪ ಹೇಳಿಕೆಗೆ ಟಾಂಗ್
ಇನ್ನೂ ನಾಯಕತ್ವ ಚರ್ಚೆಯನ್ನ ನಾಯಿಗೆ ಹೋಲಿಸಿದ ಸಚಿವ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹದೇವಪ್ಪ (HC Mahadevappa) ಅವರು ಹಿರಿಯರು, ವೈದ್ಯರಿದ್ದಾರೆ ಅವರ ಆಶೀರ್ವಾದ ನುಡಿಗಳು ಇವು. ಅಂತಹ ಹಿರಿಯರಿಗೆ ಇಂತಹ ಹೇಳಿಕೆಗಳು ಶೋಭೆ ತರುವಂತದ್ದಲ್ಲ. 2018 ರಲ್ಲಿ ಅವರು ಪಕ್ಷ ಅಧಿಕಾರಕ್ಕೆ ತರಲು ತನು ಮನ ಧನ ವಹಿಸಿ ದುಡಿದದ್ದು ಎಲ್ಲಾ ಕಾರ್ಯಕರ್ತರಿಗೆ ಗೊತ್ತು. 2018 ರಲ್ಲಿ ಏನಾಗಿದೆ ಅಂತ ಅವರನ್ನೆ ಕೇಳಿ. ಮಹದೇವಪ್ಪ ತಾನೇ 2018 ರಲ್ಲಿ ಸಿದ್ದರಾಮಯ್ಯ ಜೊತೆಗೆ ಪಕ್ಷವನ್ನ ಮುನ್ನಡೆಸಿದ್ದು, ಅವರ ಶ್ರಮದಿಂದಲೇ 80 ಸೀಟು ಬಂದಿತ್ತು. ಇನ್ಮುಂದೆಯೂ ಅವರೇ ಲೀಡ್ ತೆಗೆದುಕೊಳ್ಳುತ್ತಾರೆ ಎಂದರೆ ನಾವು ಅವರ ಹಿಂದೆ ಹೋಗೋದಕ್ಕೆ ರೆಡಿ ಎಂದು ವ್ಯಂಗ್ಯವಾಡಿದರು.

