ದಾವಣಗೆರೆ: 2,000 ರೂ. ಮೌಲ್ಯದ ಟಿ.ವಿ ಕದ್ದು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾವಣಗೆರೆ (Davanagere) ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದೇವರಾಜ ಅರಸು ಬಡಾವಣೆಯ ಫಕೀರ (50) ಎಂದು ಗುರುತಿಸಲಾಗಿದೆ. 1998ರ ಸೆ.23ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ರಂಗನಾಥ ಬಡಾವಣೆಯ ರುದ್ರಯ್ಯ ಎಂಬುವರ ಮನೆಯಲ್ಲಿ ಟಿ.ವಿ ಕಳವಾಗಿತ್ತು. ದೂರು ಆಧರಿಸಿ ಪೊಲೀಸರು ರವಿ ಮತ್ತು ಮುನಾವರ್ ಎಂಬುವರನ್ನು ಬಂಧಿಸಿ ಕಳವಾಗಿದ್ದ ಟಿ.ವಿ ಜಪ್ತಿ ಮಾಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಫಕೀರ ಹಾಗೂ ರಾಜ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: 200 ಗ್ರಾಂ ಚಿನ್ನಾಭರಣ ಕದ್ದು ಸೈಟ್ ಖರೀದಿ – ಉಂಡ ಮನೆಗೆ ದ್ರೋಹ ಬಗೆದ ಕಳ್ಳಿ ಬಂಧನ
ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ 2019ರವರೆಗೆ ಪೊಲೀಸರು ಪ್ರಯತ್ನಿಸಿದ್ದರು. ನಂತರ ಇದನ್ನು ಬಹುದಿನಗಳಿಂದ ಪತ್ತೆಯಾದ ಪ್ರಕರಣದ ಪಟ್ಟಿಗೆ ಸೇರಿಸಿದ್ದರು. ಈಗ ಮತ್ತೆ ಅರೋಪಿಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಶಾಲಾ ಆವರಣದ ಬಾವಿಯಲ್ಲಿ ವಿದ್ಯಾರ್ಥಿ ಶವ ಪತ್ತೆ – ಆತ್ಮಹತ್ಯೆ ಶಂಕೆ

