– ಗೋವಿಂದರಾಜ ನಗರ ಪೊಲೀಸರಿಂದ ನಟನಿಗೆ ನೋಟಿಸ್
ಬೆಂಗಳೂರು: ಚಿತ್ರಮಂದಿರದಲ್ಲಿ ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ ನೀಡಿದ್ದಕ್ಕೆ ಜೆಸಿ ಸಿನಿಮಾ (JC Cinema) ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಗೋವಿಂದರಾಜ ನಗರ (Govindraj Nagar Police) ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
ಕಳೆದ ಶುಕ್ರವಾರ (ಫೆ.6) ಸೂರ್ಯ ಪ್ರಖ್ಯಾತ್ (Surya Prakyath) ನಟನೆಯ ಜೆಸಿ ಸಿನಿಮಾ ಬಿಡುಗಡೆ ಆಗಿದೆ. ಈ ವೇಳೆ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಣೆಗೆ ನಟ ಪ್ರಖ್ಯಾತ್ ಕೂಡ ಆಗಮಿಸಿದ್ದರು. ಆಗ ಅಭಿಮಾನಿಗಳ ಮಧ್ಯೆ ಲಾಂಗ್ ಹಿಡಿದು ನಟ ಪೋಸ್ ನೀಡಿದ್ದಾರೆ. ಇದನ್ನು ಅಭಿಮಾನಿಗಳು ವಿಡಿಯೋ ಮಾಡಿ, ವೈರಲ್ ಮಾಡಿದ್ದರು. ಇದನ್ನೂ ಓದಿ: ವೈರಲ್ ಆಯ್ತು ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್; ಮದ್ವೆ ಎಲ್ಲಿ – ಯಾವಾಗ?
ಲಾಂಗ್ ಹಿಡಿದುಕೊಂಡಿರುವ ವಿಡಿಯೋ ಆಧಾರದ ಮೇಲೆ ಗೋವಿಂದರಾಜ ನಗರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ. ಸದ್ಯ ಪೊಲೀಸರು ಲಾಂಗ್ ಬಗ್ಗೆ ಸ್ಪಷ್ಟನೆ ಕೊಡುವಂತೆ ನಟ ಸೂರ್ಯ ಪ್ರಖ್ಯಾತ್‌ಗೆ ನೋಟಿಸ್ ನೀಡಿದ್ದಾರೆ.

