ವಿಜಯಪುರ: ಮಹಾಶಿವರಾತ್ರಿ (Maha Shivratri) ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆ ಕಳ್ಳತನ (Theft) ಮಾಡಿರುವ ಘಟನೆ ವಿಜಯಪುರ (Vijayapura) ನಗರದ ಶಾರದಾ ನಗರದಲ್ಲಿ ನಡೆದಿದೆ.
ಸೋಮಶೇಖರ ಗಣಿ ಎಂಬವರ ಮನೆ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಶಿವಗಿರಿಗೆ ಕುಟುಂಬಸ್ಥರು ತೆರಳಿದ್ದರು. ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಮ್ಯಾಚ್ ಇದ್ದ ಕಾರಣ ಬೀದಿಯಲ್ಲೂ ಜನರಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ – ಸ್ವಕುಳ ಸಾಳಿ ಸಮಾಜದ 15 ಕುಟುಂಬಕ್ಕೆ ಬಹಿಷ್ಕಾರ ಶಿಕ್ಷೆ
ಸದ್ಯ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು, ಶ್ವಾನದಳ ತಂಡಗಳಿಂದಲೂ ಪರೀಕ್ಷೆ ನಡೆದಿದೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 18 ಟ್ರಾಫಿಕ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಜಿಬಿಎ ಪ್ಲ್ಯಾನ್

