ನವದೆಹಲಿ: ಒಂದೇ ದಿನ ಪಾಕಿಸ್ತಾನ (Pakistan) ತಂಡದ ವಿರುದ್ಧ ಭಾರತ (India) ತಂಡ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಭಾನುವಾರ (ಫೆ.15) ಬ್ಯಾಂಕಾಕ್ನಲ್ಲಿ ನಡೆದ ಏಷ್ಯಾ ಕಪ್ ವುಮೆನ್ ರೈಸಿಂಗ್ ಸ್ಟಾರ್ (Aisa Cup Women Rising Star) ಟೂರ್ನಿಯಲ್ಲಿ ಭಾರತ ಎ ತಂಡ ಪಾಕಿಸ್ತಾನದ (Pakistan) ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಅದಾದ ಬಳಿಕ T20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ತಂಡ 61ರನ್ಗಳಿಂದ ಜಯ ಸಾಧಿಸಿದೆ. ಇದನ್ನೂ ಓದಿ: ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ 16-1 ಮುನ್ನಡೆ
ಏಷ್ಯಾ ಕಪ್ ವುಮೆನ್ ರೈಸಿಂಗ್ ಸ್ಟಾರ್ ಟೂರ್ನಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ 18.5 ಓವರ್ಗಳಲ್ಲಿ 93 ರನ್ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ ಇನ್ನೂ 59 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 97 ರನ್ ಹೊಡೆದು ಜಯಗಳಿಸಿತು. ಭಾರತದ ಪರ ದಿನೇಶ್ ವೃಂದ ಔಟಾಗದೇ 55 ರನ್(29 ಎಸೆತ, 12 ಬೌಂಡರಿ) ಅನುಷ್ಕಾ ಶರ್ಮಾ 24 ರನ್(26 ಎಸೆತ, 4 ಬೌಂಡರಿ) ಹೊಡೆದರು. ಪಾಕ್ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ಭರ್ಜರಿ ಜಯ ಬೌಲಿಂಗ್ನಲ್ಲಿ ಸೈಮಾ ಠಾಕೂರ್ ನಾಯಕಿ ರಾಧಾ ಯಾದವ್ , ಪ್ರೇಮಾ ರಾವತ್ ಅವರು ತಲಾ 2 ವಿಕೆಟ್ ಪಡೆದರು.
ಇನ್ನೂ ಪುರುಷರ T20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ನಲ್ಲಿ 175 ರನ್ ಕಲೆಹಾಕಿತ್ತು. ಗೆಲುವಿನ ಗುರಿ ಬೆನ್ನಟ್ಟಿದ್ದ ಪಾಕ್ 18 ಓವರ್ಗಳಲ್ಲಿ 114 ರನ್ ಗಳಿಸಿ ಹೀನಾಯ ಸೋಲು ಕಂಡಿದೆ. ದಾಖಲೆಯ ಜಯದೊಂದಿಗೆ ಗ್ರೂಪ್ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್ 8 ಹಂತವನ್ನು ಪ್ರವೇಶಿಸಿದೆ.ಇದನ್ನೂ ಓದಿ: ಪಾಕ್ ವಿರುದ್ಧ ದಾಖಲೆಯ ಜಯ, ಇತಿಹಾಸ ನಿರ್ಮಾಣ – ಸೂಪರ್ 8ಕ್ಕೆ ಭಾರತ ಎಂಟ್ರಿ

