ಚಿಕ್ಕಮಗಳೂರು: ಶನಿವಾರ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯಲ್ಲಿ (Bhadra River) ಈಜಲು ಹೋಗಿ ಸಾವನ್ನಪ್ಪಿದ್ದ ಇಬ್ಬರು ಯುವಕರ ಮೃತದೇಹ ಇಂದು ಪತ್ತೆಯಾಗಿದೆ.
ಮೂಲತಃ ಕೊಡಗು ಜಿಲ್ಲೆಯ ಅಭಿಷೇಕ್ (27) ಹಾಗೂ ಯೋಗೀಶ್ (17) ಕಳಸದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಕಳಸ ತಾಲೂಕಿನ ಬಾಳೆಹೊಳೆ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿ ಭದ್ರಾ ನದಿಯ ಆಳದ ಪರಿಚಯವಿಲ್ಲದ ಕಾರಣ ಇಬ್ಬರೂ ಸಾವನ್ನಪ್ಪಿದ್ದರು. ಪೊಲೀಸರು ಸಂಜೆವರೆಗೂ ಮೃತ ದೇಹ ಹುಡುಕಿ ಕತ್ತಲಾದ ಮೇಲೆ ಶೋಧ ಕಾರ್ಯ ನಿಲ್ಲಿಸಿದ್ದರು. ಇಂದು ಮತ್ತೆ ಪೊಲೀಸ್ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಇದು ತಜ್ಞರು ಶೋಧ ಕಾರ್ಯ ನಡೆಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇದನ್ನೂ ಓದಿ: ಮಹಾಶಿವರಾತ್ರಿ | ಶ್ರೀರಾಮ ಪ್ರತಿಷ್ಠಾಪಿಸಿದ ಶಿವಲಿಂಗ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಅಭಿಷೇಕ್ ಅಕ್ಕ ಕಳಸಾದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಯುವಕರು ಕಳಸಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಮೃತ ದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಕಟ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ – ತಪ್ಪಿದ ಭಾರೀ ದುರಂತ

