– ಸಾಲೂರು ಮಠಕ್ಕೂ ಭೇಟಿ
– ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು
ಚಾಮರಾಜನಗರ: ಮಹಾಶಿವರಾತ್ರಿ (Maha Shivratri) ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪತ್ನಿ ಉಷಾ ಶಿವಕುಮಾರ್ ಮಾದಪ್ಪನ ದರ್ಶನ ಪಡೆದಿದ್ದಾರೆ.
ಸಾಲೂರು ಮಠಕ್ಕೂ ಕೂಡ ಭೇಟಿ ನೀಡಿದ ಉಷಾ ಶಿವಕುಮಾರ್ ಸಾಲೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಸಾಲೂರು ಶ್ರೀಗಳ ಗದ್ದುಗೆಗೂ ಕೂಡ ಪೂಜೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸಿಎಂ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಡುವೆ ಡಿಕೆಶಿ ಕುಟುಂಬ ಮಾದಪ್ಪನ (Male Mahadeshwara Hills) ದರ್ಶನ ಪಡೆದಿದೆ. ಕನಕಪುರ ಭಾಗದ ಮುಖಂಡರು ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ: ನ್ಯಾಯ ಒದಗಿಸೋದ್ರಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ನಂ.1 – ಪರಮೇಶ್ವರ್ ಮೆಚ್ಚುಗೆ

ಮಹಾಶಿವರಾತ್ರಿ ಹಿನ್ನಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರ ಆಗಮನವಾಗಿದೆ. ಬೆಳಗ್ಗಿನಿಂದಲೂ ಮಲೆ ಮಹದೇಶ್ವರನ ದರ್ಶನವನ್ನು ಭಕ್ತ ಗಣ ಪಡೆಯುತ್ತಿದೆ. ಮಹದೇಶ್ವರನಿಗೆ ವಿಶೇಷ ಅಭಿಷೇಕ, ಮಾದಪ್ಪನ ಗರ್ಭಗುಡಿಗೆ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಮಾದಪ್ಪನಿಗೆ ಬೆಳ್ಳಿ ರಥ ಸೇರಿದಂತೆ ವಿವಿಧ ಉತ್ಸವಗಳು, ಕಳೆದ ಮೂರ್ನಾಲ್ಕು ದಿನಗಳಿಂದ ಪಾದಯಾತ್ರೆ ಮೂಲಕವೂ ಭಕ್ತರ ದಂಡು ಆಗಮಿಸಿದೆ. ಇದನ್ನೂ ಓದಿ: RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ

ಬೆಟ್ಟದಲ್ಲಿ ಮಾದಪ್ಪನ ಸ್ಮರಣೆ ಮಾಡುತ್ತಿದ್ದಾರೆ. ಇಂದು ರಾತ್ರಿ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ, ಭಕ್ತರಿಂದ ಜಾಗರಣೆ ನಡೆಯಲಿದೆ. ಭಕ್ತರಿಗೆ ಪ್ರಾಧಿಕಾರದಿಂದ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಐಡಿ ಕಾರ್ಡ್ ತೋರಿಸಿ – ಜರ್ಮನಿಯಲ್ಲಿ ಅಸಿಮ್ ಮುನೀರ್‌ಗೆ ಮುಜುಗರ

