ಬೆಂಗಳೂರು: ತಂದೆ-ತಾಯಿಯನ್ನು ಹತ್ಯೆ ಮಾಡಿದ ಪುತ್ರನಿಂದಲೇ ಪೋಷಕರ ಅಂತ್ಯಸಂಸ್ಕಾರ ನೆರವೇರಿಸಲು ಕೋರ್ಟ್ ಅವಕಾಶ ಕಲ್ಪಿಸಿದೆ.
ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ಶ್ಯಾಮಲಾ ಭಟ್ ಅಂತ್ಯಸಂಸ್ಕಾರಕ್ಕೆ ಆರೋಪಿ ಪುತ್ರ ರೋಹನ್ ಭಟ್‌ಗೆ ಕೋರ್ಟ್ ಅನುಮತಿ ನೀಡಿದೆ. ವಿದೇಶದಿಂದ ಆಗಮಿಸಿರುವ ಮೃತರ ಪುತ್ರಿ ಕೋರ್ಟ್‌ಗೆ ಮನವಿ ಮಾಡಿದ್ದರು. ಸಹೋದರನಿಂದಲೇ ತಂದೆ-ತಾಯಿ ಅಂತ್ಯಸಂಸ್ಕಾರಕ್ಕೆ ಕೋರಿದ್ದರು. ಸೋದರಿ ಮನವಿ ಹಿನ್ನೆಲೆ ಕೋರ್ಟ್ ಅವಕಾಶ ನೀಡಿದೆ. ಇದನ್ನೂ ಓದಿ: ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಅರೆಸ್ಟ್
ನಿಮ್ಹಾನ್ಸ್‌ನಿಂದ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಆರೋಪಿಯನ್ನು ಪೊಲೀಸರು ಕರೆತಂದು, ಹತ್ಯೆ ಆರೋಪಿ ಪುತ್ರನಿಂದಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಆರೋಪಿ ರೋಹನ್ ಭಟ್, ಸ್ಕಿಜೋಫ್ರೇನಿಯಾ ಎಂಬ ಮನೋ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದೇ ಕಾರಣಕ್ಕೆ ವಿದೇಶದ ಕೆಲಸಕ್ಕೆ ಟೆಕ್ಕಿ ರೋಹನ್ ರಾಜೀನಾಮೆ ನೀಡಿದ್ದ. ಇದನ್ನೂ ಓದಿ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

