– ಈಶಾನ್ಯ ಭಾರತದಲ್ಲಿ ಭದ್ರತೆ ಬಲಪಡಿಸಲಿರುವ ಏರ್ಸ್ಟ್ರಿಪ್
– 5,450 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಗುವಾಹಟಿ: ಅಸ್ಸಾಂನ (Assam) ದಿಬ್ರುಗಢ ಜಿಲ್ಲೆಯ ಮೊರಾನ್ ಬೈಪಾಸ್ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಹೆದ್ದಾರಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು (ELF) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಉದ್ಘಾಟಿಸಿದರು.
ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ (C-130J Aircraft) ಐತಿಹಾಸಿಕ ಲ್ಯಾಂಡಿಂಗ್ ಆಗುವ ಮೂಲಕ ಉದ್ಘಾಟಿಸಿದರು. ಬಳಿಕ ಸುಖೋಯ್ ಸು-30 ಎಂಕೆಐ ಮತ್ತು ರಫೇಲ್ ಫೈಟರ್ ಜೆಟ್ಗಳ ಟಚ್-ಅಂಡ್-ಗೋ ವಾಯುಪ್ರದರ್ಶನಗಳನ್ನ ನಡೆಸಲಾಯಿತು. ಇದನ್ನೂ ಓದಿ: ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ
ಚುನಾವಣಾ ರಾಜ್ಯ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಹತ್ತಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ದಿಬ್ರುಗಢ ಜಿಲ್ಲೆಯ ಮೊರಾನ್ ಬೈಪಾಸ್ನಲ್ಲಿರುವ ತುರ್ತು ಲ್ಯಾಂಡಿಂಗ್ (Emergency Landing) ಸೌಲಭ್ಯ ಮೋದಿ ಉದ್ಘಾಟಿಸಿದರು. ಈಶಾನ್ಯ ರಾಜ್ಯಗಳಲ್ಲಿ ನಿರ್ಮಾಣದ ಮೊದಲ ತುರ್ತು ಲ್ಯಾಡಿಂಗ್ ವ್ಯವಸ್ಥೆ ಭಾರತದ ಭದ್ರತಾ ವಿಚಾರದಲ್ಲೂ ಗೇಮ್ ಚೇಂಜರ್ ಆಗಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ
ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ತುರ್ತು ಲ್ಯಾಂಡಿಂಗ್ ಸೌಲಭ್ಯವು 4.2 ಕಿಮೀ ಉದ್ದವಿದೆ. ಇದು ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು ಇಳಿಯಲು ಹಾಗೂ ಟೇಕಾಫ್ ಆಗಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಈಶಾನ್ಯ ಭಾಗದ ಮೊದಲ ಹೆದ್ದಾರಿ ತುರ್ತು ಲ್ಯಾಂಡಿಂಗ್ ಸೌಲಭ್ಯವಾಗಿದೆ.
ಒಂದು ದಿನದ ಹಿಂದಷ್ಟೇ ಚಾಬುವಾ ವಾಯುನೆಲೆಗೆ ಆಗಮಿಸಿದ್ದ ಪ್ರಧಾನಿಗಳನ್ನು ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಇತರ ಹಿರಿಯ ರಾಜ್ಯ ಅಧಿಕಾರಿಗಳು ಸ್ವಾಗತಿಸಿದ್ರು. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 7 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

ಏನಿದು ತುರ್ತು ಲ್ಯಾಂಡಿಂಗ್ ಸೌಲಭ್ಯ?
* ದಿಬ್ರುಗಢ ಜಿಲ್ಲೆಯ ಮೊರಾನ್ ಬೈಪಾಸ್ನಲ್ಲಿರುವ ತುರ್ತು ಲ್ಯಾಂಡಿಂಗ್ ಸೌಲಭ್ಯ ಎಂಬುದು ರಾಷ್ಟ್ರೀಯ ಹೆದ್ದಾರಿ-127 ರ 4.2 ಕಿಲೋಮೀಟರ್ ಪ್ರತ್ಯೇಕ ಬಲಪಡಿಸಿದ ರಸ್ತೆಯ ಭಾಗವಾಗಿದೆ.
* ಇದು ವಿಶೇಷವಾಗಿ ವಿಮಾನಗಳ ತುರ್ತು ಲ್ಯಾಂಡಿಂಗ್ಗಾಗಿ ಅಭಿವೃದ್ಧಿಪಡಿಸಲಾಗಿದೆ.
* ಸುಮಾರು 100 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಿದ್ದು, ಈಶಾನ್ಯ ಭಾರತದಲ್ಲಿ ನಿರ್ಮಾಣವಾದ ಮೊದಲ ಎರ್ಮಜೆನ್ಸಿ ಲ್ಯಾಂಡಿಂಗ್ ಸೌಲಭ್ಯವಾಗಿದೆ.
* ಇದು ಸೈನ್ಯದ ಕಾರ್ಯತಂತ್ರದ ಅಗತ್ಯಗಳಿಗೆ ಅನುಗುಣವಾಗಿ ಭಾರತೀಯ ವಾಯುಪಡೆಯ ಫೈಟರ್ ಜೆಟ್ಗಳು ಮತ್ತು ಟ್ರಾನ್ಸ್ಪೋರ್ಟ್ ವಿಮಾನಗಳಿಗೆ ಲ್ಯಾಡಿಂಗ್ ವ್ಯವಸ್ಥೆ ಕಲ್ಪಿಸುತ್ತದೆ.
* ಯುದ್ಧ ಸೇರಿ ವಿಪತ್ತುಗಳ ಸಂದರ್ಭದಲ್ಲಿ ತುರ್ತು ಪ್ರತಿಕ್ರಿಯೆಗೆ ಸಹಾಯಕವಾಗಿದೆ. ಚೀನಾ ಗಡಿಯ ಸಮೀಪದಲ್ಲಿರುವುದರಿಂದ ರಕ್ಷಣಾ ಸಾಮರ್ಥ್ಯವನ್ನ ಹೆಚ್ಚಿಸುತ್ತದೆ.
* ರನ್ ವೇ 40 ಟನ್ಗಳಷ್ಟು ತೂಕದ ಯುದ್ಧ ವಿಮಾನಗಳನ್ನು ಮತ್ತು 74 ಟನ್ಗಳಷ್ಟು ಗರಿಷ್ಠ ಟೇಕ್-ಆಫ್ ತೂಕದ ಸಾರಿಗೆ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
5,450 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಇನ್ನು ಅಸ್ಸಾಂ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ, ಗುವಾಹಟಿಯ ಲಚಿತ್ ಘಾಟ್ನಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳು ಈಶಾನ್ಯ ಪ್ರದೇಶದಾದ್ಯಂತ ಸಂಪರ್ಕ, ಡಿಜಿಟಲ್ ಮೂಲಸೌಕರ್ಯ, ಉನ್ನತ ಶಿಕ್ಷಣ ಮತ್ತು ನಗರ ಚಲನಶೀಲತೆಯನ್ನ ಹೆಚ್ಚಿಸುವ ಗುರಿಯನ್ನ ಹೊಂದಿವೆ. ಇದಲ್ಲದೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕುಮಾರ ಭಾಸ್ಕರ್ ವರ್ಮಾ ಸೇತುವನ್ನ ಮೋದಿ ಪರಿಶೀಲಿಸಲಿದರು. ಸುಮಾರು 3,030 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 6-ಪಥದ ಎಕ್ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ ಸೇತುವೆಯು ಗುವಾಹಟಿಯನ್ನ ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ.

