ಡಿಯರ್.. ಪ್ರೇಮಿ.. ಇವತ್ತು ಪ್ರೇಮಿಗಳದ್ದೇ ದಿನವಂತೆ… (Valentine’s Day) ನನ್ನ ಜೊತೆ ನೀನಿರುವ.. ನಿನ್ನ ಒಲವಿನ ನೆರಳಿರುವ ತನಕ ದಿನವೂ ಪ್ರೇಮದ ದಿನವೇ.. ಪ್ರೇಮಿಗಳ ದಿನವೇ..!
ಇಲ್ಲಿಯವರೆಗೂ ನೀನೊಬ್ಬ ಅಪರಿಚಿತ.. ಇನ್ನೂ ಹಾಗಲ್ಲ.. ನಿನ್ನ ಕೈಗೆ ಈ ಚೀಟಿ ಇಟ್ಟು ಚಿರಪರಿಚಿತಳಾಗುವ ಹೆಜ್ಜೆ ಇಡುತ್ತಿದ್ದೇನೆ. ಇಷ್ಟು ದಿನ ಎದುರಿಗೆ ಸಿಕ್ತಿದ್ದ ಸ್ಮೈಲ್.. ಇನ್ಮುಂದೆ ಸದಾ ಸಿಗ್ಬೇಕು.. ಇಷ್ಟು ದಿನ ನೋಡಿದ ಹಾಗೇ ಕದ್ದು ಮುಚ್ಚಿ ನೀನು ನನ್ನ ನೋಡ್ಬಾರದು.
ನಿನಗಂತೂ ಧೈರ್ಯ ಇಲ್ಲ.. ಅದು ಗೊತ್ತಾಗಿನೇ ನಾನೇ ಮುಂದೆ ಬಂದು ಮನಸ್ಸಲ್ಲಿ ಇರೋದನ್ನ ಹೇಳ್ತಿದಿನಿ.. ʻಈ ಲವ್ ಇದೆಲ್ಲ ಬೇಡ.. ಸಾಧನೆ ಮಾಡ್ಬೇಕು.. ಫ್ರೇಂಡ್ ಆಗಿರೋಣʼ ಅಂತೆಲ್ಲ ಕತೆ ಹೇಳ್ಬೇಡ.. ತುಂಬಾ ಒಳ್ಳೆಯವನಾಗೋಕೆ ಹೋಗ್ಬೇಡ ಕಣೋ… ಚೆನ್ನಾಗಿರಲ್ಲ..!! ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!

ಅವತ್ತು ನಿನ್ನ ಬೈಕ್ ಅಂತ ಗೊತ್ತಿಲ್ದೇ ಮಿರರ್ ನೋಡ್ಕೊಂಡು ಮೇಕಪ್ ಮಾಡ್ತಿದ್ದೆ.. ನೀನು ಬಂದು, ಮುಗಿಯೋ ತನಕನೂ ಕಾದು ಬೈಕ್ ತಗೊಂಡು ಹೋದೆ.. ಆ ದಿನ.. ನಿನ್ನ ಪುಟ್ಟ ಕಣ್ಣಲ್ಲೇ ತಿನ್ನೋ ಥರ ನೋಡ್ತಿದ್ದೇ.. ನಿಂಗೆ ಬೈದ್ಬಿಡ್ಬೇಕು ಅನ್ನಿಸಿತ್ತು.. ಆಮೇಲೆ ನೀನು ಬೈಕ್ ತಗೊಂಡು ಹೋದಾಗ, ಗಾಡಿಗಾಗಿ ನಿಂತಿದ್ದು ಅಂತ ಗೊತ್ತಾಗಿ ತುಂಬಾ ನಗು ಬಂತು..
ಆ ಗ್ಯಾಪ್‌ಲ್ಲಿ ನೀನು ತುಂಬಾ ಗೆರೆ ಹಾಕ್ಬಿಟ್ಟೆ ಅಲ್ವಾ… I Mean.. ತುಂಬಾ ಲೈನ್ ಹೊಡ್ದೆ ಅಲ್ವಾ..? ನೋಡು ಇವಾಗ ಹೇಗಾಗಿದೆ.. ಪ್ರೀತಿ ಹುಟ್ಟೋಕೆ.. ಹೂ ಅರಳೋಕೆ ಕಾರಣ.. ಘಳಿಗೆ ದಿನ ಮುಹೂರ್ತ ಎಲ್ಲಾ ಇರಲ್ಲ.. ಆದ್ರೂ ಪ್ರೇಮಿಗಳ ದಿನವನ್ನೇ ಆಯ್ಕೆ ಮಾಡ್ಕೊಂಡು ನಿನಗೆ ಹೇಳ್ತಿದಿನಿ.. ಎದೆಯಂಗಳದಲ್ಲಿ ಬಿಡಿಸಿದ ಪ್ರೀತಿ ಅನ್ನೋ ರಂಗೋಲಿನ ನೀನೇ ಅಳ್ಸ್ಬೇಡ ಪ್ಲೀಸ್..
ನನಗೆ ನಂಬಿಕೆ ಇದೆ, ನಿನ್ನ ಜೊತೆ ನಾನು ತುಂಬಾ ಖುಷಿಯಾಗಿ ಇರ್ತೀನಿ ಅಂತ.. ನಿನಗೂ ಕೊಡಬಾರದ ಕಾಟ ಕೊಟ್ಟು ಚೆನ್ನಾಗೇ ನೋಡ್ಕೋತಿನಿ.. ಧೈರ್ಯದಿಂದ ಒಪ್ಕೋಬಹುದು.. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
– ಗೋಪಾಲಕೃಷ್ಣ

