ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬೆಳ್ಳಂಬೆಳ್ಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಆದಾಯಕ್ಕೂ ಅಧಿಕ ಆಸ್ತಿಗಳಿಗೆ ಮಾಡಿಕೊಂಡಿರುವ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸವನ್ನ ಲೋಕಾಯುಕ್ತ (Lokayukta) ಪೊಲೀಸರು ಮಾಡುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ. ಪಿಡಬ್ಲ್ಯೂಡಿ ಚೀಫ್ ಇಂಜಿನಿಯರ್ ಪುರುಷೋತ್ತಮ್, ಬೆಂಗಳೂರು ಗ್ರಾಮಾಂತರ ಕರ್ನಾಟಕ ರೆಸಿಡೆನ್ಸಿಯಲ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಸೊಸೈಟಿ ಎಂಜಿನಿಯರ್ ಜನಾರ್ದನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ – ಡಿಕೆ ಶಿವಕುಮಾರ್
ಪರಷೋತ್ತಮ್‌ಗೆ ಸೇರಿದ 11 ಕಡೆ ದಾಳಿ ಮಾಡಿದರೆ, ಜನಾರ್ದನಗೆ ಸೇರಿದ ಎಂಟು ಕಡೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಪುರುಷೋತ್ತಮ್ ದಾಸ್ ನಿವಾಸದಲ್ಲಿ ಚಿನ್ನಾಭರಣ, ನಗದು ಪತ್ತೆ ಆಗಿದೆ.
ಜನಾರ್ದನ ಮನೆಯಲ್ಲಿ 1.70 ಕೋಟಿ ಲಕ್ಷ ನಗದು ಪತ್ತೆಯಾಗಿದೆ. ಆದಾತಕಿಂತ 216% ಅಧಿಕ ಆಸ್ತಿ ಹೊಂದಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಿರಾಸ್ತಿ 3.20 ಕೋಟಿ, ಒಂದು ನಿವೇಶನ, ಮೂರು ಮನೆ, 34 ಎಕರೆ ಕೃಷಿ ಜಮೀನು, ಚರಾಸ್ತಿ 1.70 ಪತ್ತೆಯಾಗಿದೆ. ಚಿನ್ನಾಭರಣ 7.8 ಲಕ್ಷ ಮೌಲ್ಯ, 20 ಲಕ್ಷ ಮೌಲ್ಯದ ವಾಹನಗಳು ಸಹ ಇವೆ. ಇತರೆ 60 ಲಕ್ಷ ಪತ್ತೆಯಾಗಿದೆ. ಜನಾರ್ದನದ್ದು ಒಟ್ಟು 4.42 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: 37,000 ಕೋಟಿ ಹಣ ಬಾಕಿ – ಮಾ.5 ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ

