ನವದೆಹಲಿ: ಗುಂಡಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ 5 ದಿನಗಳ ನಂತರ, ತೆರೆದ ಮ್ಯಾನ್‌ಹೋಲ್‌ಗೆ (Manhole) ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 32 ರಲ್ಲಿ ಘಟನೆ ನಡೆದಿದೆ. ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಬಿರ್ಜು ಕುಮಾರ್ ರೈ ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ – ಶಂಕಿತ ಗನ್‌ಮ್ಯಾನ್ ಸೇರಿ 10 ಮಂದಿ ಸಾವು
ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಬಿರ್ಜು ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ನಡಿಗೆಯ ಸಮಯದಲ್ಲಿ ಬಿರ್ಜು ಆಕಸ್ಮಿಕವಾಗಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದ. ಅವನ ಮುಂದೆ ನಡೆದುಕೊಂಡು ಹೋಗುತ್ತಿದ್ದ ಅವನ ಸ್ನೇಹಿತನಿಗೆ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಮಂಗಳವಾರವಷ್ಟೇ ಈ ವಿಷಯ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ನೆರೆಯ ನೋಯ್ಡಾದಲ್ಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ತಮ್ಮ ಗ್ರ್ಯಾಂಡ್ ವಿಟಾರಾ ಕಾರು ಸೆಕ್ಟರ್ 150 ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಕಡೆಗೆ ತಿರುವು ಪಡೆಯುತ್ತಿದ್ದಾಗ ದಟ್ಟವಾದ ಮಂಜಿನಿಂದ ಜಾರಿ ಸಾವನ್ನಪ್ಪಿದರು. ರಸ್ತೆ ಮತ್ತು ಹೊಂಡದ ನಡುವಿನ ಚರಂಡಿಯ ಸುತ್ತಲೂ ಎರಡು ತಡೆಗೋಡೆಗಳಿದ್ದವು. ಇದನ್ನೂ ಓದಿ: ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ – ಮಾ.9 ರಂದು ಚರ್ಚೆ ಸಾಧ್ಯತೆ

