ಇಸ್ಲಾಮಾಬಾದ್: ಪಾಕಿಸ್ತಾನವನ್ನು (Pakistan) ಅಮೆರಿಕ (America) ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡಿದೆ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಬೇಸರ ಹೊರಹಾಕಿದ್ದಾರೆ.
ಸಂಸತ್ತಿನಲ್ಲಿ ಮತನಾಡಿದ ಆಸಿಫ್, ಅಮೆರಿಕದ ಬೆಂಬಲವನ್ನು ಅನುಸರಿಸುವುದು ಗಂಭೀರ ತಪ್ಪು ಲೆಕ್ಕಾಚಾರ. ಇದರ ಪರಿಣಾಮಗಳನ್ನು ಪಾಕಿಸ್ತಾನ ದಶಕಗಳ ನಂತರವೂ ಅನುಭವಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ – ಮಾ.9 ರಂದು ಚರ್ಚೆ ಸಾಧ್ಯತೆ
2001 ರ ನಂತರದ ಅವಧಿಯಲ್ಲಿ ಅಮೆರಿಕ ನೇತೃತ್ವದ ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಬೆಂಬಲಿಸಲು ಪಾಕಿಸ್ತಾನ ತಾಲಿಬಾನ್ ವಿರುದ್ಧ ತಿರುಗಿಬಿತ್ತು. ಆದರೆ, ಪಾಕಿಸ್ತಾನ ಹಿಂಸಾಚಾರ, ಮೂಲಭೂತವಾದ ಮತ್ತು ಆರ್ಥಿಕ ಒತ್ತಡದಲ್ಲಿ ಸಿಲುಕಿರುವಾಗ ಅಮೆರಿಕ ಹಿಂದೆ ಸರಿಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಾವು ಅನುಭವಿಸಿದ ನಷ್ಟಗಳನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ. ಆ ನಿರ್ಧಾರಗಳು ಬದಲಾಯಿಸಲಾಗದ ತಪ್ಪುಗಳಾಗಿದ್ದು, ಇತರರಿಂದ ನಡೆಸಲ್ಪಡುವ ಸಂಘರ್ಷಗಳಲ್ಲಿ ಪಾಕಿಸ್ತಾನವನ್ನು ಒಂದು ಕೈಗೊಂಬೆಯನ್ನಾಗಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ – ಶಂಕಿತ ಗನ್‌ಮ್ಯಾನ್ ಸೇರಿ 10 ಮಂದಿ ಸಾವು

