ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಮಾಜಿ ಎಂಎಲ್‌ಸಿ ಆದ ಪಿ ರಾಮಯ್ಯ (93) (P Ramiah) ಅವರು ನಿಧನರಾಗಿದ್ದಾರೆ.
ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ. ಬಾಲಜಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ವಿದ್ಯುತ್ ಸ್ವಾವಲಂಬನೆಗೆ ಥೋರಿಯಂ ಆಧಾರಿತ ಪರಮಾಣು ವಿದ್ಯುತ್ ಕೇಂದ್ರಗಳು ಏಕೆ ಮುಖ್ಯ?
ನಾಡಿನ ಹಿರಿಯ ಪತ್ರಕರ್ತರು, ನನ್ನ ಚಿರಕಾಲದ ಮಿತ್ರರು, ಹಿತೈಷಿಗಳು ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದ ಸುದ್ದಿ ತಿಳಿದು ಬಹಳ ನೋವುಂಟಾಯಿತು. The Hindu ಪತ್ರಿಕೆಯ ವರದಿಗಾರರಾಗಿ ಅಷ್ಟೇ ಅಲ್ಲದೆ, ಆತ್ಮೀಯ ಒಡನಾಡಿಯಾಗಿ ದಶಕಗಳ ಕಾಲದಿಂದಲೂ ನನಗೆ ಚಿರಪರಿಚಿತರು. 1/2 pic.twitter.com/G0fXB24EOW
— H D Devegowda (@H_D_Devegowda) February 10, 2026
ಪಿ. ರಾಮಯ್ಯ ಅವರ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?
Deeply saddened by the news of the passing of Shri P. Ramaiyya avaru, former Member of the Legislative Council and a towering figure in Karnataka journalism, my mentor and a fatherly presence in my life.
A distinguished embodiment of humane, honest and value-driven journalism,… pic.twitter.com/wVsnCtDoqt
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) February 10, 2026
1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ʻದಿ ಹಿಂದೂʼ ಪತ್ರಿಕೆಯಲ್ಲಿ 5 ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಇಬ್ಬರು ಪುತ್ರರು, ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ.
ಸಂದ ಪ್ರಶಸ್ತಿಗಳು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು. ಇದನ್ನೂ ಓದಿ: ತಮ್ಮ ಪುಸ್ತಕ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ನರವಾಣೆ
ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರ ನಿಧನದಿಂದ ದು:ಖಿತನಾಗಿದ್ದೇನೆ.
‘ದಿ ಹಿಂದೂ’ ಪತ್ರಿಕೆಯಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಪತ್ರಕರ್ತರಾಗಿ ಸದಾ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದ ರಾಮಯ್ಯ ಅವರಲ್ಲಿದ್ದ ರಾಜಕೀಯ, ಇತಿಹಾಸ,… pic.twitter.com/LIT03xDZ3r
— Siddaramaiah (@siddaramaiah) February 10, 2026
ಪತ್ರಿಕೋದ್ಯಮಕ್ಕೆ ಕೊಡುಗೆ
ಪಿ. ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು ‘ಪತ್ರಿಕೋದ್ಯಮದ ತಪಸ್ವಿ’ ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ. ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು.

