ಶಿವಮೊಗ್ಗ: ಖಾಸಗಿ ಬಸ್ (Bus) ಒಂದರ ಚಕ್ರದ ವೀಲ್ಹ್ ಕಟ್ ಆಗಿ ಅಡಿಕೆ ತೋಟಕ್ಕೆ ನುಗ್ಗಿದ ಘಟನೆ ಶಿಕಾರಿಪುರ (Shikaripura) ತಾಲೂಕಿನ ಶೀರಿಹಳ್ಳಿ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕೇರೂರ್‌ನಿಂದ ಶಿವಮೊಗ್ಗಕ್ಕೆ (Shivamogga) ಬರುತ್ತಿದ್ದ ಖಾಸಗಿ ಬಸ್ ಶೀರಿಹಳ್ಳಿ ಗ್ರಾಮದ ಬಳಿ ಚಲಿಸುತ್ತಿದ್ದಾಗ ಹಠಾತ್ತನೆ ವೀಲ್ಹ್ ಕಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಅಡಕೆ ತೋಟಕ್ಕೆ ನುಗ್ಗಿ, ಅಲ್ಲಿನ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ತೆಂಗಿನ ಮರಕ್ಕೆ ಡಿಕ್ಕಿ ಹೊಡೆಯದೇ ಇದ್ದಲ್ಲಿ ಬಸ್ ಪಲ್ಟಿಯಾಗಿ ಪ್ರಯಾಣಿಕರ ಪ್ರಾಣಹಾನಿಯಾಗುವ ಸಾಧ್ಯತೆಯಿತ್ತು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿಯ ಬರ್ಬರ ಹತ್ಯೆ
ಬಸ್ಸಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್ ಬಯಲು

