ನವದೆಹಲಿ: ಲೋಕಸಭೆಯಲ್ಲಿ (Lok Sabha) ಕಾಂಗ್ರೆಸ್ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು (Kiren Rijiju) ಬಿಡುಗಡೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಕಿರಣ್ ರಿಜುಜು ತನ್ನ ಸಂಸದರು ಲೋಕಸಭೆಯಲ್ಲಿ ಪ್ರದರ್ಶಿಸಿದ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಕಾಂಗ್ರೆಸ್ ಹೆಮ್ಮೆಪಡಬೇಕು. ನಾವು ನಮ್ಮ ಬಿಜೆಪಿಯ ಮಹಿಳಾ ಸಂಸದರಿಗೆ ಕಾಂಗ್ರೆಸ್ ಸಂಸದರನ್ನು ಎದುರಿಸಲು ಅವಕಾಶ ನೀಡಿದ್ದರೆ ಅದು ತುಂಬಾ ಕೊಳಕು ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ ಮತ್ತು ಪಾವಿತ್ರ್ಯವನ್ನು ರಕ್ಷಿಸಲು ನಾವು ಹೆಚ್ಚಿನ ಪ್ರಬುದ್ಧತೆ ಹೊಂದಿದ್ದೇವೆ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸಂಸದರ ವರ್ತನೆಯಿಂದ ಬಿಜೆಪಿ ಮತ್ತು ಎನ್‌ಡಿಎ ಸಂಸದರು ತುಂಬಾ ಸಿಟ್ಟಾಗಿದ್ದಾರೆ. ಟ್ರೆಶರಿ ಬೆಂಚ್ ದಾಟಿ ಪ್ರಧಾನಿ ಆಸನದ ಬಳಿ ಬಂದು ಅವರು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಳಾ ಸಂಸದರು ಪ್ರಧಾನಿಯನ್ನು ಹೆದರಿಸಿದ್ದಾರೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ ಇದು ಇದು ನಾಚಿಕೆಗೇಡಿನ ಸಂಗತಿ ಎಂದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ
Congress Party is proud of the most degrading behavior by their MPs !! If we had not stopped all BJP MPs and allowed the Women MPs to confront Cong. MPs, it would have led to very ugly scene.
We have very high consideration, to protect the dignity & sanctity of the Parliament. https://t.co/tRj5HjLKFH pic.twitter.com/aTmktk4Y7E
— Kiren Rijiju (@KirenRijiju) February 10, 2026
ಫೆ.4 ರಂದು ಏನಾಗಿತ್ತು?
ಸಂಜೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಬೇಕಿತ್ತು. ಆದರೆ ಮೋದಿ ಭಾಷಣಕ್ಕೂ ಮೊದಲು ಮಹಿಳಾ ಕಾಂಗ್ರೆಸ್ ಸಂಸದರು ಮೋದಿ ಕುಳಿತುಕೊಳ್ಳುವ ಕುರ್ಚಿಯ ಮುಂದೆ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದರು.
8 ಮಂದಿ ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಡಳಿತ ಪಕ್ಷದ ಸಂಸದರನ್ನು ಅಡ್ಡಗಟ್ಟಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಸಂಧ್ಯಾ ರೈ ಅವರು ಕಲಾಪವನ್ನು ಮುಂದೂಡಿದದ್ದರು. ಇದನ್ನೂ ಓದಿ: ನರವಾಣೆ ಅಪ್ರಕಟಿತ ಪುಸ್ತಕ ವಿವಾದ| ಎಫ್‌ಐಆರ್ ದಾಖಲು, ನಾವು ಪ್ರಕಟಿಸಿಯೇ ಇಲ್ಲವೆಂದ ಪೆಂಗ್ವಿನ್ ಇಂಡಿಯಾ
VIDEO | Parliament Session: Union Minister Kiren Rijiju accuses opposition MPs of disrupting proceedings in an unprecedented manner.
He says, “BJP and NDA MPs are very angry because of the behaviour of Congress MPs. They crossed the treasury benches and even reached near the… pic.twitter.com/TigxbN5VVi
— Press Trust of India (@PTI_News) February 10, 2026

