– ಹಣ, ಚಿನ್ನಾಭರಣ, ಕೆಲ ಫೋಟೋ ವಾಪಸ್ಗೆ ಪಟ್ಟು
ತುಮಕೂರು: ಮೊದಲ ಪತ್ನಿ ವಿಚ್ಛೇದನ ಕೋರ್ಟ್ನಲ್ಲಿರುವಾಗಲೇ ಮತ್ತೊಂದು ಮದುವೆಗೆ ಸಿದ್ಧವಾಗಿದ್ದ ವರನಿಗೆ (Groom) ಮತ್ತೊಂದು ಶಾಕ್ ಎದುರುರಾಗಿದೆ. ಮದುವೆ ಮಂಟಪದಲ್ಲಿ ಸೃಷ್ಟಿಯಾದ ಹೈಡ್ರಾಮಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮೊದಲ ಪತ್ನಿ ಎಂಟ್ರಿ ಬಳಿಕ ಥಂಡ ಹೊಡೆದಿದ್ದ ಪತಿಗೆ ಈಗ ಮತ್ತೊಂದು ಸಂಕಷ್ಟ ಎದುರುಗಿದೆ. ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಹಸೆಮಣೆ ಏರಿದ್ದ ಯುವತಿ ಸಹ ವರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ತುಮಕೂರಿನ (Tumakuru) ಎಡೆಯೂರು ದೇವಸ್ಥಾನದ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಇನ್ನೇನು ಮದುಮಗ ಹರಿಪ್ರಸಾದ್ ಮದುವೆ ಹೆಣ್ಣಿಗೆ ತಾಳಿ ಕಟ್ಟಬೇಕಿತ್ತು. ಅಷ್ಟರಲ್ಲೇ ಮಂಟಪಕ್ಕೆ ಎಂಟ್ರಿ ಕೊಟ್ಟ ಆತನ ಮೊದಲ ಹೆಂಡತಿ ಲೇಪಾಕ್ಷಿ ರಂಪಾಟ ಮಾಡಿ ಮದುವೆ ನಿಲ್ಲಿಸಿದ್ದಳು. ಮೊದಲ ಪತ್ನಿ ರಂಪಾಟದ ಬಳಿಕ ಥಂಡ ಹೊಡೆದಿದ್ದ ಪತಿ ಹರಿಪ್ರಸಾದ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹರಿಪ್ರಸಾದ್ನ ಎರಡನೇ ಮದುವೆಗೆ ಹಸೆಮಣೆ ಏರಿದ್ದ ಯುವತಿ ಸಹ ಆತನ ವಿರುದ್ಧ ದೂರು ನೀಡಿದ್ದಾಳೆ. ಇದನ್ನೂ ಓದಿ: ನರವಾಣೆ ಅಪ್ರಕಟಿತ ಪುಸ್ತಕ ವಿವಾದ| ಎಫ್ಐಆರ್ ದಾಖಲು, ನಾವು ಪ್ರಕಟಿಸಿಯೇ ಇಲ್ಲವೆಂದ ಪೆಂಗ್ವಿನ್ ಇಂಡಿಯಾ
ಮದುವೆಗೆ ರೆಡಿಯಾಗಿದ್ದ ಮಂಡ್ಯ ಮೂಲದ ಯುವತಿ ಈಗ ತಿರುಗಿ ಬಿದಿದ್ದಾಳೆ. ಮೊದಲನೇ ಮದುವೆ ವಿಚಾರ ತಮಗೆ ತಿಳಿಸದೇ ಮುಚ್ಚಿಟ್ಟಿದ್ದಾರೆ. ಜೊತೆಗೆ ಮದುವೆಗೆಂದು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಅಲ್ಲದೇ ಮದುವೆ ಗಂಡು ಎಂದು ಚಿನ್ನಾಭರಣ ಸಹ ನೀಡಲಾಗಿತ್ತು. ಅಷ್ಟೇ ಅಲ್ಲದೇ ನನ್ನ ಕೆಲ ಫೋಟೋಗಳು ಅವರ ಬಳಿ ಇದೆ. ಎಲ್ಲವನ್ನೂ ವಾಪಸ್ ಕೊಡಿಸುವಂತೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪ್ಲಾಸ್ಟಿಕ್ ಗೋಡೌನ್ಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ
ಇನ್ನು, ನ್ಯಾಯಕ್ಕಾಗಿ ಅಮೃತೂರು ಪೊಲೀಸರ ಬಳಿ ಬಂದ ಕುಟುಂಬ ದೂರು ನೀಡಿದೆ. ಆದರೇ ಎನ್ಸಿಆರ್ ದಾಖಲಿಸಿಕೊಂಡ ಪೊಲೀಸರು ಆಗಿರುವ ವಂಚನೆ ಸಂಬಂಧ ಯುವತಿಯ ಸ್ವಂತ ಜಿಲ್ಲೆಯಾದ ಮಂಡ್ಯದಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ. ಸದ್ಯ ಮಗಳ ಮದುವೆ ಎಂದು ಲಕ್ಷ ಲಕ್ಷ ಖರ್ಚು ಮಾಡಿ ಮದುವೆಗೆ ಸಿದ್ದರಾದವರು ಈಗ ಹಣವೂ ಇಲ್ಲ. ಇತ್ತ ನಂಬಿಕೆಗೂ ದ್ರೋಹವಾಗಿದೆ ಎಂದು ಕಂಗಾಲಾಗಿದ್ದಾರೆ. ಆದರೆ ಈ ಬಗ್ಗೆ ಹರಿಪ್ರಸಾದ್ರನ್ನು ಸಂಪರ್ಕಿಸಿದಾಗ, ಮಂಡ್ಯ ಮೂಲದ ಯುವತಿ ಕುಟುಂಬ ಮಾಡುತ್ತಿರುವ ಆರೋಪ ಸುಳ್ಳು ಎಂದಿದ್ದಾರೆ. ಮೂರು ವರ್ಷಗಳ ಹಿಂದೆ ಒಟ್ಟಿಗೆ ಕೆಲಸ ಮಾಡುವಾಗ ಯುವತಿ ಪರಿಚಯವಾಗಿದ್ದು, ಮೊದಲನೇ ಪತ್ನಿ ವಿಚಾರ ಯುವತಿ ಹಾಗೂ ಆಕೆಯ ತಾಯಿಗೂ ಸಹ ಗೊತ್ತಿತ್ತು ಎಂದು ತಿಳಿಸಿದ್ದಾರೆ. ಆದರೆ ಹರಿಪ್ರಸಾದ್ ವಿರುದ್ಧ ಆರೋಪ ಮಾಡಿದ ಕುಟುಂಬ ಸದ್ಯ ಮಂಡ್ಯ ಜಿಲ್ಲೆಯಲ್ಲಿ ದೂರು ನೀಡಲು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: T20 World Cup | ಫೆ.15 ರಂದು ಇಂಡೋ – ಪಾಕ್ ಕದನ ಫಿಕ್ಸ್; ಮಂಡಿಯೂರಿದ ಪಾಕಿಸ್ತಾನ
ಮೊದಲ ಹೆಂಡತಿಯಿಂದ ದೂರಾದ ಹರಿಪ್ರಸಾದ್ ಎರಡನೇ ಮದುವೆಯಾಗಲು ನಿರ್ಧರಿಸಿದಾಗ ಆದ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾನೂನು ಹೊರಟದಲ್ಲಿ ಮುಂದುವರೆಯುವುದಾಗಿ ಹರಿಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್ – ಧಗಧಗಿಸಿದ ಕಟ್ಟಡ, ಇಬ್ಬರಿಗೆ ಗಂಭೀರ ಗಾಯ

