ರಾಮನಗರ: ಕನಕಪುರದಲ್ಲಿ (Kanakapura) ಕಾಡಾನೆ (Wild Elephant) ಹಾವಳಿ ಮುಂದುವರೆದಿದ್ದು, ಕಾಡಂಚಿನ ಗ್ರಾಮದ ಬಳಿ ಸುಮಾರು 40 ಕಾಡಾನೆಗಳು ಕನಕಪುರದ ತಾಲೂಕಿನ ಕಾಡುಶಿವನಹಳ್ಳಿ ಬಳಿ ಕಾಣಿಸಿಕೊಂಡಿವೆ.
ತಮಿಳುನಾಡು ಅರಣ್ಯದಿಂದ ಬನ್ನೇರುಘಟ್ಟ ವನ್ಯಜೀವಿ ವಲಯಕ್ಕೆ ಬಂದಿರೋ 40 ಕಾಡಾನೆಗಳು ಅಕ್ಕಪಕ್ಕದ ಜಮೀನುಗಳಲ್ಲಿ ದಾಂಧಲೆ ನಡೆಸಿವೆ. ಶನಿವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕಾಡಾನೆ ಹಿಂಡು ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ – ಮನೆಯಲ್ಲೇ ನೇಣು ಬಿಗಿದು ಸೊಸೆ ಆತ್ಮಹತ್ಯೆ
ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ರಾತ್ರಿ ಕಾಡಾನೆಗಳನ್ನ ವಾಪಸ್ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟೊಟ್ಟಿಗೆ 40 ಕಾಡಾನೆಗಳು ಓಡಾಡುವ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೇಂದ್ರದಿಂದ ಪತ್ರ ಬಾರದೇ ಇದ್ದರೆ ಮೆಟ್ರೋ ದರ ಏರಿಕೆ ಫಿಕ್ಸ್

