ನವದೆಹಲಿ: ಮೆಟ್ರೋ ನಿಲ್ದಾಣದಲ್ಲಿ ಲವ್ವರ್ ಜೊತೆ ಸಿಕ್ಕಿಬಿದ್ದ ಪುತ್ರನಿಗೆ ತಾಯಿ ಸ್ಥಳದಲ್ಲೇ ಎಂಗೇಜ್‌ಮೆಂಟ್ ಮಾಡಿಸಿದ ಅಚ್ಚರಿದಾಯಕ ಘಟನೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೆಹಲಿ ಮೆಟ್ರೋ (Delhi Metro) ನಿಲ್ದಾಣದಲ್ಲಿ ತನ್ನ ಮಗ ಆತನ ಲವ್ವರ್ ಜೊತೆ ಚೆಲ್ಲಾಟವಾಡುತ್ತಿರುವುದನ್ನು ನೋಡಿದ ತಾಯಿಯೊಬ್ಬರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅಷ್ಟೇ ಅಲ್ಲ, ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಮುಂದೆ ಇಬ್ಬರೂ ರಹಸ್ಯವಾಗಿ ಭೇಟಿಯಾಗುವ ಅಗತ್ಯವಿಲ್ಲ ಎಂದ ತಾಯಿ, ಇಂತಹ ಪ್ರಸಂಗಗಳಿಂದ ನಮಗೆ ಅಪಖ್ಯಾತಿ ಬರಬಾರದು ಎಂದು ಇಬ್ಬರಿಗೂ ಎಂಗೇಜ್‌ಮೆಂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ತೈಲ ಕಳ್ಳಸಾಗಣೆ ದಂಧೆ ಬಯಲು – ಸಮುದ್ರದಲ್ಲಿ ಅಕ್ರಮವಾಗಿ ತೈಲ ಮಾರಾಟ ಮಾಡುತ್ತಿದ್ದ ಹಡಗುಗಳು ವಶಕ್ಕೆ
‘ಆ ಹುಡುಗಿ ತುಂಬಾ ಅದೃಷ್ಟಶಾಲಿ, ಇಷ್ಟೊಂದು ಪ್ರೀತಿಯ ಕುಟುಂಬ ಮತ್ತು ಒಳ್ಳೆಯ ಅತ್ತೆಯನ್ನು ಪಡೆದಿದ್ದಾಳೆ. ಆ ತಾಯಿ ತನ್ನ ಮಗನನ್ನು ಸರಿಯಾದ ಹಾದಿಯಲ್ಲಿ ಇಟ್ಟಿದ್ದಾಳೆ. ತನ್ನ ಸೊಸೆಯನ್ನು ಸಹ ಚೆನ್ನಾಗಿ ನೋಡಿಕೊಳ್ಳುತ್ತಾಳೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ‘ಈ ಬಗ್ಗೆ ಹುಡುಗ ಚಿಂತೆ ಮಾಡುವ ಅಗತ್ಯವಿಲ್ಲ. ತನ್ನ ನಿರ್ಧಾರಗಳನ್ನು ಗೌರವಿಸುವ ಪೋಷಕರನ್ನು ಹೊಂದಿರುವುದಕ್ಕೆ ಅವನು ಸಂತೋಷವಾಗಿರಬೇಕು’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

